Advertisement

ಬರ್ಲಿನ್‍ ವಿಶೇಷ ಒಲಿಂಪಿಕ್ಸ್‌ನಲ್ಲಿ ಗೋವಾದ ಅಥ್ಲೆಟ್‍ಗಳಿಗೆ 19 ಪದಕ

08:17 PM Jul 05, 2023 | Team Udayavani |

ಪಣಜಿ: ಬರ್ಲಿನ್‍ನಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ನಲ್ಲಿ ಗೋವಾದ ಅಥ್ಲೆಟ್‍ಗಳು 19 ಪದಕಗಳನ್ನು ಗೆದ್ದಿದ್ದಾರೆ. ಈ ಎಲ್ಲಾ ಆಟಗಾರರನ್ನು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್  ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಜೇತ ಆಟಗಾರರಿಗೆ ಮಹತ್ವದ ಘೋಷಣೆಗಳನ್ನು ಮಾಡಿದ್ದು, ಚಿನ್ನದ ಪದಕ ವಿಜೇತರಿಗೆ 5 ಲಕ್ಷ ನಗದು ಮತ್ತು ಸರ್ಕಾರಿ ಉದ್ಯೋಗ ಘೋಷಿಸಿದ್ದಾರೆ.

Advertisement

ಚಿನ್ನದ ಪದಕ ವಿಜೇತರಿಗೆ 5 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ತಲಾ 3 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.ಬರ್ಲಿನ್ ಪಂದ್ಯಾವಳಿಯಲ್ಲಿ ಭಾರತ ತಂಡವು 13 ಜನ ಗೋಮಾಂತಕ ಆಟಗಾರರನ್ನು ಒಳಗೊಂಡಿತ್ತು. ಈ ಕೂಟದಲ್ಲಿ ಭಾರತೀಯರು 50 ಪದಕಗಳ ಗಡಿ ದಾಟಿದ್ದಾರೆ. ಗೋಮಾಂತಕ್ ಅಥ್ಲೀಟ್‍ಗಳು ಒಂಬತ್ತು ಚಿನ್ನ, ಐದು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದು ಎರಡು ದಶಕಗಳಲ್ಲಿ ಚಿನ್ನದ ಪದಕಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದರು.

ಪದಕ ವಿಜೇತ ಗೋಮಾಂತಕಿಯರು…
ಚಿನ್ನದ ಪದಕಗಳು (9): ಗೀತಾಂಜಲಿ ನಾಗ್ವೇಕರ್ (800 ಮೀ), ಸಿಯಾ ಸರೋದೆ (ಪವರ್‍ಲಿಫ್ಟಿಂಗ್‍ನಲ್ಲಿ 2), ಮನ್‍ಫಿಲ್ ಫೆರಾವೊ (ಬ್ಯಾಸ್ಕೆಟ್‍ಬಾಲ್), ವೀಣಾ ನಾಯಕ್ (ವಾಲಿಬಾಲ್), ವೆನ್ಸನ್ ಪೇಸ್, ಅಮನ್ ನದಾಫ್, ಫ್ರಾನ್ಸಿಸ್ ಪರಿಸಾಪೋಗು ಮತ್ತು ಜೋಯಲ್ ರೋಡ್ರಿಗಸ್ (ಎಲ್ಲರೂ ಫುಟ್‍ಬಾಲ್).

ಬೆಳ್ಳಿ ಪದಕಗಳು (5): ಗೀತಾಂಜಲಿ ನಾಗ್ವೇಕರ್ (400 ಮೀ), ಸಿಯಾ ಸರೋದೆ (ಪವರ್ ಲಿಫ್ಟಿಂಗ್), ಆಯುಷ್ ಗಡೇಕರ್ (ವಾಲಿಬಾಲ್), ತಾನಿಯಾ ಉಸ್ಗಾಂವ್ಕರ್ (ರೋಲರ್ ಸ್ಕೇಟಿಂಗ್), ಅಸ್ಲಂ ಗಾಂಜಾನವರ್ (ಜೂಡೋ).

ಕಂಚಿನ ಪದಕಗಳು (5): ಸಿಯಾ ಸರೋದೆ (ಪವರ್ ಲಿಫ್ಟಿಂಗ್), ಗೆಬಾನ್ ಮುಲ್ಲಾ (ಜಾವೆಲಿನ್), ತಾನಿಯಾ ಉಸ್ಗಾಂವ್ಕರ್ (ರೋಲರ್ ಸ್ಕೇಟಿಂಗ್), ಗಾಯತ್ರಿ ಫತಾರ್‍ಪೇಕರ್ ಮತ್ತು ಕಾಜಲ್ ಜಾಧವ್ (ಇಬ್ಬರೂ ಮಹಿಳಾ ಫುಟ್‍ಬಾಲ್).

Advertisement
Advertisement

Udayavani is now on Telegram. Click here to join our channel and stay updated with the latest news.

Next