Advertisement

Police: 19.60 ಲಕ್ಷ ರೂ. ಸಹಿತ ಯುವಕನ ಸೆರೆ

11:13 PM Aug 24, 2023 | Team Udayavani |

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 19,60,500 ರೂ. ಸಹಿತ ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಯ ಸಿದ್ದಿಕ್‌(30)ನನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಪೊಲೀಸ್‌ ಠಾಣೆ ಪರಿಸರದಿಂದ ಈತನನ್ನು ಬಂಧಿಸಲಾಗಿದೆ.

Advertisement

ಓಣಂ ಹಬ್ಬದ ಅಂಗವಾಗಿ ಪೊಲೀಸರು ನಡೆಸಿದ ವಾಹನ ತಪಾಸಣೆ ಸಂದರ್ಭದಲ್ಲಿ ಕಾರಿನಲ್ಲಿ ಅಕ್ರಮ ಹಣ ಪತ್ತೆಯಾಗಿದೆ. ವಿವಿಧ ಕಡೆಗಳಲ್ಲಿ ವಿತರಿಸಲಿರುವ ಹಣವಾಗಿದೆ ಎಂದು ಈತ ಪೊಲೀಸರಲ್ಲಿ ತಿಳಿಸಿದ್ದಾನೆ. ಕಾಸರಗೋಡು ಡಿವೈಎಸ್‌ಪಿ ಪಿ.ಕೆ. ಸುಧಾಕರನ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next