Advertisement

ಅಮೃತ ಯೋಜನೆಯಡಿ 19.35 ಕೋಟಿ

01:17 PM Jan 26, 2022 | Team Udayavani |

ಸಿಂಧನೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ-4ರಲ್ಲಿ ನಗರಕ್ಕೆ 30 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 19.35 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ಸಿ.ಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಹೇಳಿದರು.

Advertisement

ನಗರಸಭೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಇಲ್ಲಿನ ನಗರಸಭೆಗೆ 30 ಕೋಟಿ ರೂ. ಮಂಜೂರಾಗಿದೆ. ಅದರಲ್ಲಿ ಯಾವ್ಯಾವ ಕೆಲಸಕ್ಕೆ, ಎಷ್ಟು ಬಳಕೆ ಮಾಡಬೇಕು? ಎಂಬ ಮಾರ್ಗಸೂಚಿ ನೀಡಿದ್ದಾರೆ. ಈ ಕುರಿತು ನಗರಸಭೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೆಲಸದ ವಿವರ ಏನು?

ನಗರಸಭೆಗೆ 30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 60 ಲಕ್ಷ ರೂ. ಕ್ರಿಯಾಯೋಜನೆ ರೂಪಿಸುವುದಕ್ಕೆ ಮೀಸಲಿರಿಸಿದ್ದಾರೆ. ವಿಶೇಷ ಕ್ರಿಯಾಯೋಜನೆಗೆ ರಾಜ್ಯ ಸರ್ಕಾರ 1.50 ಲಕ್ಷ ರೂ. ಮೀಸಲಿಟ್ಟಿದೆ. ಶೇ.8 ಟೆಂಡರ್‌ ಪ್ರೀಮಿಯಂಗೆ 2.40 ಕೋಟಿ ರೂ. ನಿಗದಿಯಾಗಿದೆ. 25.50 ಕೋಟಿ ರೂ. ಈ ಎಲ್ಲ ಕಡಿತದ ಬಳಿಕ ದೊರೆಯುತ್ತದೆ. ಅದರಲ್ಲಿ ಎಸ್ಸಿ, ಎಸ್ಟಿ ವರ್ಗದ ಅಭಿವೃದ್ಧಿಗೆ 6.14 ಕೋಟಿ ರೂ., ವಿಕಲಚೇತನರಿಗಾಗಿ 1.27 ಕೋಟಿ ರೂ. ವಿನಿಯೋಗವಾಗಲಿದೆ. ಈ ಎಲ್ಲವನ್ನು ನಿಭಾಯಿಸಿದ ನಂತರ 19.35 ಕೋಟಿ ರೂ. ದೊರೆಯಲಿದೆ. ಇದರಲ್ಲಿ ಚರಂಡಿ, ಸಿಸಿ ರಸ್ತೆ, ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕಿದೆ. 4.87 ಕೋಟಿ ರೂ. ಸಾಮೂಹಿಕ ಶೌಚಾಲಯ, ಮಾರುಕಟ್ಟೆ ವ್ಯವಸ್ಥೆ, ಅಂಗನವಾಡಿ, ಸಾಮೂಹಿಕ ಶೌಚಾಲಯ, ಬಸ್‌ ಶೆಲ್ಟರ್‌, ಎಲೆಕ್ಟ್ರಿಕಲ್‌ ಕೆಲಸ, ಉದ್ಯಾನ ಅಭಿವೃದ್ಧಿಗೆ ಬಳಸಲು ಅವಕಾಶವಿದೆ ಎಂದರು.

ಪಕ್ಷಾತೀತ ಚರ್ಚೆ

Advertisement

ಈಗಾಗಲೇ ಅನುದಾನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಎಂಜಿನಿಯರ್‌ಗಳ ತಂಡ ಹಾಗೂ ನಗರಸಭೆ ಸದಸ್ಯರು 15-16 ವಾರ್ಡ್‌ಗಳ ಸರ್ವೇ ಮುಗಿಸಿದ್ದಾರೆ. ಯಾವ ವಾರ್ಡ್‌ನಲ್ಲಿ ಆದ್ಯತೆ ಮೇಲೆ ಕೆಲಸ ಕೈಗೊಳ್ಳಬೇಕಿದೆ ಎಂಬುದನ್ನು ಪಕ್ಷ ಭೇದ ಮರೆತು ಒಟ್ಟಾಗಿ ಕುಳಿತು ಚರ್ಚಿಸಲಾಗುವುದು. ಯೋಜನೆ ಅನುದಾನ ಬಳಕೆಗೆ ಸಂಬಂಧಿಸಿ ರಚಿಸಿದ ಸಮಿತಿಯಲ್ಲಿ ಶಾಸಕರು ಕೂಡ ಒಬ್ಬ ಸದಸ್ಯರು. ಅವರ ಸಲಹೆ ಕೂಡ ಪಡೆದುಕೊಳ್ಳಲಾಗುವುದು ಎಂದರು.

ಈ ವೇಳೆ ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್‌, ನಗರಸಭೆ ಸದಸ್ಯರಾದ ಡಿ. ಸತ್ಯನಾರಾಯಣ ದಾಸರಿ, ಕೆ. ಜಿಲಾನಿಪಾಷಾ, ಮುನೀರ್‌ಪಾಷಾ, ಮುಖಂಡರಾದ ಪ್ರಭುರಾಜ್‌ ಕರ್ಪೂರಮಠ ಸೇರಿದಂತೆ ಇತರರಿದ್ದರು.ಎಲ್ಲವೂ ಲಿಂಕ್‌ ಪ್ಯಾಕೇಜ್‌ ಇದೊಂದು ಉತ್ತಮ ಪ್ಯಾಕೇಜ್‌. ಇದರಲ್ಲಿ ಯಾವುದೇ ಕೆಲಸವನ್ನು ಆರಂಭಿಸಿದ ಮೇಲೆ ಅದಕ್ಕೆ ಪೂರಕವಾಗಿ ಲಿಂಕ್‌ ಇರುವ ರಸ್ತೆಗೆ ಮಾತ್ರ ಅವಕಾಶ ಒದಗಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಹೇಳಿದರು. ಒಂದು ವಾರ್ಡ್‌ನಲ್ಲಿ ರಸ್ತೆ ಕಾಮಗಾರಿ ಕೈಗೊಂಡ ಮೇಲೆ 1 ಕೋಟಿ ರೂ. ವೆಚ್ಚದ ಕಾಮಗಾರಿ ಇದ್ದರೆ, ಅದು ಲಿಂಕ್‌ ಹೊಂದಿದ್ದರಷ್ಟೇ ಮುಂದುವರಿಯುತ್ತದೆ. ಎಲ್ಲೆಂದರಲ್ಲಿ ಅವಕಾಶವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next