Advertisement
ಅಂದಹಾಗೆ, ದೇವಸಹಾಯಂ ಅವರಿಗೆ ಸಂತ ಪದವಿ ನೀಡುವ ಪ್ರಸ್ತಾವನೆಗೆ ಪೋಪ್ ಅವರು ಕಳೆದ ನವೆಂಬರ್‌ನಲ್ಲೇ ಒಪ್ಪಿಗೆ ನೀಡಿದ್ದರು. ಈಗ ಅವರಿಗೆ ಸಂತ ಪದವಿ ಪ್ರದಾನ ಮಾಡಲಾಗಿದೆ.
ತಿರುವಾಂಕೂರ್ ಸಾಮ್ರಾಜ್ಯವಿದ್ದ ಸಮಯದಲ್ಲಿ ಕನ್ಯಾಕುಮಾರಿಯಲ್ಲಿ ಹಿಂದೂ ಧರ್ಮದವರಾಗಿ ಜನಿಸಿದ್ದ ನೀಲಕಂದನ್ ಪಿಳೈ, 1745ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ “ದೇವಸಹಾಯಂ’ ಎಂದು ಮರುನಾಮಕರಣ ಮಾಡಿಕೊಂಡಿದ್ದರು. ಆಗಿನ ಕಾಲಘಟ್ಟದಲ್ಲಿ ತಿರುವಾಂಕೂರ್ ಪ್ರಾಂತ್ಯದಲ್ಲಿದ್ದ ಜಾತಿವಾದವನ್ನು ಪ್ರಬಲವಾಗಿ ವಿರೋಧಿಸಿ ಹಲವು ಹೋರಾಟಗಳನ್ನು ನಡೆಸಿದ್ದರು. ಕಾಲಾನಂತರದಲ್ಲಿ ಅವರ ಹತ್ಯೆಯಾಗಿತ್ತು. 2012ರಲ್ಲಿ ದೇವಸಹಾಯಂ ಅವರನ್ನು “ಹುತಾತ್ಮ’ ಎಂದು ವ್ಯಾಟಿಕನ್ ದೇಶ ಗುರುತಿಸಿತ್ತು. ಇತ್ತೀಚೆಗೆ, ತಮ್ಮ ಗರ್ಭದಲ್ಲಿದ್ದ ಮಗು ಸತ್ತಿದೆಯೆಂದು ವೈದ್ಯರು ಹೇಳಿದ ನಂತರ ದೇವಸಹಾಯಂ ಅವರನ್ನು ಕುರಿತು ಬೇಡಿಕೊಂಡಾಗ ಮಗು ಮತ್ತೆ ಉಸಿರಾಟ ಆರಂಭಿಸಿತು ಎಂದು ಗರ್ಭಿಣಿಯೊಬ್ಬರು ವ್ಯಾಟಿಕನ್‌ಗೆ ತಿಳಿಸಿದ್ದರು. ಆ ಹಿನ್ನೆಲೆ ದೇವಸಹಾಯಂ ಅವರಿಗೆ ಸಂತ ಪದವಿ ಕೊಡಲಾಗಿದೆ.