Advertisement

ಟ್ರಂಪ್ ನಡೆಸಿದ 18 ಚುನಾವಣಾ ರ‍್ಯಾಲಿಯಿಂದ 30ಸಾವಿರ ಮಂದಿಗೆ ಕೋವಿಡ್ ಸೋಂಕು; 700 ಜನ ಸಾವು

09:58 AM Nov 03, 2020 | Mithun PG |

ನ್ಯೂಯಾರ್ಕ್: ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣಾ ರ‍್ಯಾಲಿಯಿಂದಲೇ 30 ಸಾವಿರಕ್ಕಿಂತ ಹೆಚ್ಚು ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದು, ಸುಮಾರು 700 ಮಂದಿ ಮೃತಪಟ್ಟಿದ್ದಾರೆಂದು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧನಾ ವರದಿ ತಿಳಿಸಿದೆ.

Advertisement

ಡೊನಾಲ್ಡ್ ಟ್ರಂಪ್ ಜೂನ್ 20, 2020ರಿಂದ ಸೆಪ್ಟೆಂಬರ್ 22ರವರೆಗೂ ಸುಮಾರು 18 ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ದಾರೆ. ಇದರಿಂದ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಿದ್ದರಿಂದ “ಕೋವಿಡ್ 19 ಪ್ರಸರಣದ ಮೇಲೆ ದೊಡ್ಡ ಗುಂಪು, ಸಭೆಗಳು ಬೀರುವ ಪರಿಣಾಮ: ಟ್ರಂಪ್ ರ‍್ಯಾಲಿಗಳ ಪ್ರಕರಣ”  (The Effects of Large Group Meetings on the Spread of COVID-19: The Case of Trump Rallies) ಎಂಬ ಹೆಸರಿನಲ್ಲಿ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಸಂಶೋಧನೆ ನಡೆಸಿತ್ತು. ಇದರಿಂದ ಸುಮಾರು 30 ಸಾವಿರ ಜನರು ಸೋಂಕಿಗೆ ಒಳಗಾಗಿದ್ದು, ಮಾತ್ರವಲ್ಲದೆ 700 ಜನರು ಪ್ರಾಣತ್ಯೆಜಿಸಿದ್ದಾರೆಂದು ತಿಳಿದುಬಂದಿದೆ.

ಡೊನಾಲ್ಡ್ ಟ್ರಂಪ್ ಸಮಾವೇಶ ನಡೆಸಿದ ಸ್ಥಳಗಳಲ್ಲಿ ಕೋವಿಡ್ 19 ಪ್ರಸರಣದ ಸಂಖ್ಯೆ ಹೆಚ್ಚಾಗಿದೆ. ಭಾರೀ ಸಂಖ್ಯೆಯಲ್ಲಿ ಜನ ಗುಂಪುಗೂಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಿಶ್ವಸಂಸ್ಥೆ ತಿಳಿಸಿದ್ದರೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ವರದಿ ತಿಳಿಸಿದೆ.

ಸಮಾವೇಶದ ಸಂದರ್ಭದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ್ದರಿಂದ ಅಪಾಯದ ಪ್ರಮಾಣ ಹೆಚ್ಚಾಗಿದೆ. ಇದರಿಂದ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ:  ಬೆಳಗಾವಿ: ರಾಜ್ಯೋತ್ಸವದಂದು ಎಂಇಎಸ್ ನಿಂದ ನಾಡದ್ರೋಹಿ ಘೋಷಣೆ, ಪುಂಡಾಟಿಕೆ

Advertisement

ಈ ಕುರಿತು ಪ್ರತಿಕ್ರಿಯೆ ನೀಡಿದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಡೊನಾಲ್ಡ್ ಟ್ರಂಪ್ ಅವರಿಗೆ ಜನರ ಆರೋಗ್ಯದ ಕುರಿತಾಗಿ ಕಾಳಜಿಯಿಲ್ಲ. ತಮ್ಮ ಬೆಂಬಲಿಗರನ್ನೂ ಕೂಡ ನಿರ್ಲಕ್ಷಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕಾದಲ್ಲಿಯೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಈವರೆಗೂ ಸುಮಾರು 8.7 ಮಿಲಿಯನ್ ಜನರು ಸೋಂಕಿಗೆ ತುತ್ತಾಗಿದ್ದಾರೆ. ಹಾಗೂ 2,25,000 ಜನರು ಮೃತಪಟ್ಟಿದ್ದಾರೆ.

ಇದನ್ನೂ ಓದಿ:  ಉತ್ತರಪ್ರದೇಶದಂತೆ ಬಿಹಾರದಲ್ಲೂ ‘ಯುವರಾಜ’ರನ್ನು ಜನತೆ ಮನೆಗೆ ಕಳುಹಿಸುತ್ತಾರೆ: ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next