Advertisement

18+ ಸುರಭಿ ಹಿಂದೆ ಶ್ರೀನಿವಾಸ್‌ ರಾಜು

11:20 AM May 28, 2017 | Team Udayavani |

ನಿರ್ದೇಶಕ ಶ್ರೀನಿವಾಸ್‌ ರಾಜು ತಮ್ಮ “2′ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಎರಡು ಹೊಸ ಚಿತ್ರಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ಆ ಚಿತ್ರಗಳಿಗೆ ಟೈಟಲ್‌ ಕೂಡಾ ಅಂತಿಮಗೊಳಿಸಿದ್ದಾರೆ. “18+’ ಹಾಗೂ “ಸುರಭಿ ಕೇರಾಫ್ ಸುಬ್ಬು ಡ್ರಾಮಾ ಕಂಪೆನಿ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಲಿದ್ದಾರಂತೆ.

Advertisement

“18+’ ಸಿನಿಮಾದಲ್ಲಿ ಹೊಸ ನಟ-ನಟಿಯರನ್ನು ಪರಿಚಯ ಮಾಡಲಿದ್ದು, ನಾಲು ಮಂದಿ ಹುಡುಗ -ಹುಡುಗಿಯರ ಸುತ್ತ ನಡೆಯಲಿದೆಯಂತೆ. ಉಳಿದಂತೆ ಈ ಚಿತ್ರದಲ್ಲಿ ಈಗಾಗಲೇ ಚಿತ್ರರಂಗದಲ್ಲಿ ಬಿಝಿ ಇರುವ ಕಲಾವಿದರೊಬ್ಬರು ಕೂಡಾ ನಟಿಸಲಿದ್ದಾರಂತೆ. ಇನ್ನು, “ಸುರಭಿ ಕೇರಾಫ್ ಸುಬ್ಬು ಡ್ರಾಮಾ ಕಂಪೆನಿ’ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು, ಸುಬ್ಬು ಪಾತ್ರವನ್ನು ರವಿಶಂಕರ್‌ ಮಾಡಲಿದ್ದಾರಂತೆ.  

ಉಳಿದಂತೆ ಈಗಾಗಲೇ ಬಿಝಿಯಾಗಿರುವ ಅನೇಕ ನಟರು ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಆರು ನಾಟಕಗಳನ್ನು ಆಧಾರವಾಗಿಟ್ಟುಕೊಂಡು ಶ್ರೀನಿವಾಸರಾಜು ಈ ಸಿನಿಮಾ ಮಾಡುತ್ತಿದ್ದಾರಂತೆ. ಚಿತ್ರದ ಸೌಂಡಿಂಗ್‌ ಕೂಡಾ ವಿಭಿನ್ನವಾಗಿರಲಿದ್ದು, ಅದಕ್ಕಾಗಿಯೇ ಒಂದಷ್ಟು ಬಜೆಟ್‌ ಎತ್ತಿಡುವ ಆಲೋಚನೆ ಕೂಡಾ ಶ್ರೀನಿವಾಸ್‌ ರಾಜು ಅವರಿಗಿದೆ. ಅಂದಹಾಗೆ, “2′ ಎಂಬ ಸಿನಿಮಾವನ್ನು ಶ್ರೀನಿವಾಸ್‌ ರಾಜು ಯಾವತ್ತು ಮಾಡಿದರು ಎಂದು ನೀವು ಕೇಳಬಹುದು.

ಈ “2′, “ದಂಡುಪಾಳ್ಯ’ ಚಿತ್ರದ ಮುಂದುವರಿದ ಭಾಗ. ಆದರೆ, ಕಾರಣಾಂತರಗಳಿಂದ “ದಂಡುಪಾಳ್ಯ-2′ ಎಂದು ಇಡುವ ಬದಲು ಬರೀ “2′ ಎಂದಿಡಲಾಗಿದೆ. ಆದರೂ ಅದು “ದಂಡುಪಾಳ್ಯ-2′ ಎಂದೇ ಬಿಂಬಿತವಾಗುತ್ತಿದೆ. ಅದು ಹೇಗೆ ಅಂತೀರಾ, ಚಿತ್ರದ ಪೋಸ್ಟರ್‌ನಲ್ಲಿ “ಫ‌ಮ್‌ ದ ಮೇಕರ್ ಆಫ್ ದಂಡುಪಾಳ್ಯ’ ಎಂದು ಬರೆದು ಪಕ್ಕದಲ್ಲಿ “2′ ಹಾಕಲಾಗಿದೆ. ಅದನ್ನು “ದಂಡುಪಾಳ್ಯ -2′ ಎಂದು ಅಂದುಕೊಳ್ಳುವಂತೆ ಆಗುವಂತೆ ಡಿಸೈನ್‌ ಮಾಡಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next