Advertisement

18 ತಿಂಗಳು ಟಿಕ್‌ಟಾಕ್‌ನಿಂದ ರಹಸ್ಯ ಮಾಹಿತಿ ಸಂಗ್ರಹ

12:52 AM Aug 14, 2020 | mahesh |

ನ್ಯೂಯಾರ್ಕ್‌: ಚೀನದ ಬೈಟ್‌ಡಾನ್ಸ್‌ ಮಾಲೀಕತ್ವದ ಕಿರು ವಿಡಿಯೊ ತಾಣ ಟಿಕ್‌ಟಾಕ್‌ ತಾನು ಎಷ್ಟೇ ಶುದ್ಧವೆಂದು ಹೇಳಿಕೊಂಡರೂ, ಅದರ ಮೇಲಿನ ಅನುಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಐಫೋನ್‌ನ ಹೊಸ 14ನೇ ಆವೃತ್ತಿ ಐಒಎಸ್‌ ಬಿಡುಗಡೆಯಾ­ದಾಗ, ಸಂದೇಶಗಳ ಮಾಹಿತಿಯನ್ನು ಟಿಕ್‌ಟಾಕ್‌ ಹಿನ್ನೆಲೆಯಲ್ಲಿ ಸಂಗ್ರಹಿಸು­ತ್ತಿದ್ದುªದ್ದು ಗಮನಕ್ಕೆ ಬಂದಿತ್ತು. ಇದೀಗ ವಾಲ್‌ಸ್ಟ್ರೀಟ್‌ ಜರ್ನಲ್‌ ಇನ್ನೊಂದು ಸ್ಫೋಟಕ ಸಂಗತಿ ಬಹಿರಂಗಪಡಿಸಿದೆ.

Advertisement

18 ತಿಂಗಳ ಕಾಲ ಟಿಕ್‌ಟಾಕ್‌, ಆ್ಯಂಡ್ರಾಯ್ಡ ಮೊಬೈಲ್‌ ಬಳಕೆದಾರರ ಮ್ಯಾಕ್‌ ವಿಳಾಸಗಳನ್ನು (ಮೊಬೈಲ್‌ ಒಂದರಲ್ಲಿ ವೈಫೈ, ಬ್ಲೂಟೂತ್‌, ಈಥರ್‌ನೆಟ್‌ ಮೂಲಕ ಸಂಪರ್ಕ ಸಾಧಿಸಲು ಇರುವ ವಿಳಾಸ) ಸಂಗ್ರಹಿಸುತ್ತಲೇ ಇತ್ತು. ಜಾಹೀರಾತಿಗೆ ಬಳಕೆಯಾಗುವ ಈ ಮಾಹಿತಿ ಸಂಗ್ರಹಿಸುವುದಕ್ಕೆ 2015ರಲ್ಲೇ ಗೂಗಲ್‌ ನಿಷೇಧ ಹಾಕಿದ್ದರೂ, ಟಿಕ್‌ಟಾಕ್‌ ಲೋಪವೊಂದನ್ನು ಬಳಸಿಕೊಂಡು ಕೃತ್ಯ ಮುಂದುವರಿ­ಸಿತ್ತು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ 350 ಆ್ಯಪ್‌ಗ್ಳು ಇದನ್ನು ಮಾಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next