Advertisement

Olympics Badminton; ಸೆಮಿಯಲ್ಲಿ ಸೋತ ಲಕ್ಷ್ಯ ಸೇನ್: ಕಂಚು ಗೆಲ್ಲಲು ಇದೆ ಅವಕಾಶ

01:18 AM Aug 05, 2024 | Team Udayavani |

ಪ್ಯಾರಿಸ್ :ಭಾನುವಾರ(ಆಗಸ್ಟ್ 4) ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ರೋಚಕ ಸೆಮಿಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ ಭಾರತದ ಲಕ್ಷ್ಯ ಸೇನ್ ನೇರ ಗೇಮ್ ನಲ್ಲಿ ಸೋತರು. ಇದರಿಂದ ಬ್ಯಾಡ್ಮಿಂಟನ್‌ನಲ್ಲಿ ಮೊಟ್ಟಮೊದಲ ಒಲಿಂಪಿಕ್ ಚಿನ್ನದ ಕನಸು ಕೊಚ್ಚಿ ಹೋಯಿತು.

Advertisement

54 ನಿಮಿಷಗಳ ಸೆಮಿಫೈನಲ್ ಹಣಾಹಣಿಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಆಕ್ಸೆಲ್ಸೆನ್ ವಿರುದ್ಧ ಸೇನ್ 20-22 14-21 ನೇರ ಸೆಟ್ ಗಳ ಸೋಲು ಅನುಭವಿಸಿದರು.

ಕಂಚಿನ ಪದಕಕ್ಕಾಗಿ 22 ರ ಹರೆಯದ ಸೇನ್ ಅವರು ಸೋಮವಾರ ಸಂಜೆ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಎದುರಿಸಲಿದ್ದಾರೆ. ಪದಕ ಗೆದ್ದರೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಎಂಬ ದಾಖಲೆ ಬರೆಯಲಿದ್ದಾರೆ.

ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಲಂಡನ್ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಭಾರತ ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಇದುವರೆಗೆ ಗೆದ್ದಿಲ್ಲ.

Advertisement

ಬಾಕ್ಸಿಂಗ್ ಅಭಿಯಾನ ಅಂತ್ಯ; ನಿರೀಕ್ಷೆ ಮೂಡಿಸಿದ್ದ ಲೊವ್ಲಿನಾಗೆ ಸೋಲು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಭಾನುವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಕಠಿನ ಹೋರಾಟದಲ್ಲಿ ಸೋಲು ಅನುಭವಿಸಿದರು.

ಲೊವ್ಲಿನಾ ಗೊಂದಲಮಯವಾಗಿದ್ದ ಸ್ಪರ್ಧೆಯಲ್ಲಿ 1-4 ರಿಂದ ಸೋಲು ಅನುಭವಿಸಿದರು. ಶನಿವಾರ ರಾತ್ರಿ ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ ನಲ್ಲಿ ನಿಶಾಂತ್ ದೇವ್ ಅವರು ಹೊರ ಬಿದ್ದ ನಂತರ ಲೊವ್ಲಿನಾ ಅವರ ಸೋಲು ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನವನ್ನು ಕೊನೆಗೊಳಿಸಿದೆ.

ಲಾಂಗ್‌ಜಂಪ್‌: ಜೆಸ್ವಿನ್‌ ಫೇಲ್‌
ಭಾರತದ ಲಾಂಗ್‌ಜಂಪರ್‌ ಜೆಸ್ವಿನ್‌ ಅಲ್ಡಿ†ನ್‌ ಅರ್ಹತಾ ಸುತ್ತಿನಲ್ಲೇ ವೈಫ‌ಲ್ಯ ಅನುಭವಿಸಿ ಪ್ಯಾರಿಸ್‌ ಕೂಟದಿಂದ ನಿರ್ಗಮಿಸಿದ್ದಾರೆ.

16 ಸ್ಪರ್ಧಿಗಳ “ಬಿ’ ಗ್ರೂಪ್‌ನಲ್ಲಿದ್ದ ಜೆಸ್ವಿನ್‌, 13ನೇ ಸ್ಥಾನ ಗಳಿಸಿದರು. ಒಟ್ಟಾರೆಯಾಗಿ 26ನೇ ಸ್ಥಾನಿಯಾದರು. ಜೆಸ್ವಿನ್‌ ಅವರ ಮೊದಲೆರಡು ನೆಗೆತಗಳು ಫೌಲ್‌ ಆಗಿದ್ದವು. 3ನೇ ಸುತ್ತಿನಲ್ಲಿ 7.61 ಮೀ. ದಾಖಲಿಸಿದರು. ಗರಿಷ್ಠ 8.15 ಮೀ. ನೆಗೆದರೆ ನೇರವಾಗಿ ಫೈನಲ್‌ ಪ್ರವೇಶ ಲಭಿಸುತ್ತದೆ. ಅಥವಾ ಮೊದಲ 12 ಮಂದಿ ಅತ್ಯುತ್ತಮ ಸಾಧಕರು ಮುನ್ನಡೆ ಸಾಧಿಸುತ್ತಾರೆ.

ಜೆಸ್ವಿನ್‌ ಅಲ್ಡಿ†ನ್‌ ಈ ವರ್ಷ 8 ಮೀ. ದೂರವನ್ನು ತಲುಪಿರಲೇ ಇಲ್ಲ. ರ್‍ಯಾಂಕಿಂಗ್‌ ಆಧಾರದ ಮೇಲೆ ಇವರಿಗೆ ಪ್ಯಾರಿಸ್‌ ಅರ್ಹತೆ ಲಭಿಸಿತ್ತು. ಈ ಸೀಸನ್‌ನಲ್ಲಿ ಅವರ ಅತ್ಯುತ್ತಮ ಸಾಧನೆ 7.99 ಮೀ. ವೈಯಕ್ತಿಕ ಶ್ರೇಷ್ಠ ಸಾಧನೆ 8.42 ಮೀ. ಆಗಿದೆ.

ಸ್ಕೀಟ್‌: ಮಹೇಶ್ವರಿ, ರೈಝಾ ಫೈನಲ್‌ ತಲುಪಲು ವಿಫ‌ಲ
ಭಾರತದ ಶೂಟರ್‌ಗಳಾದ ಮಹೇಶ್ವರಿ ಚೌಹಾಣ್‌ ಮತ್ತು ರೈಝಾ ಧಿಲ್ಲಾನ್‌ ವನಿತೆಯರ ಸ್ಕೀಟ್‌ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 14ನೇ ಹಾಗೂ 13ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮಹೇಶ್ವರಿ 5 ಸರಣಿಗಲ್ಲಿ 118 ಅಂಕ, ರೈಝಾ 113 ಅಂಕ ಗಳಿಸಿದರು. ಅಗ್ರ 6 ಶೂಟರ್‌ಗಳಷ್ಟೇ ಫೈನಲ್‌ ಅರ್ಹತೆ ಸಂಪಾದಿಸುವರು. ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌, ಇಟಲಿಯ ಡಯಾನಾ ಬಕೋಸಿ ಕೂಡ ಫೈನಲ್‌ ಪ್ರವೇಶದಿಂದ ದೂರವೇ ಉಳಿದರು (117).

ಫೈನಲ್‌ ಅರ್ಹತೆ ಪಡೆಯಲು ಪಾರುಲ್‌ ಚೌಧರಿ ವಿಫ‌ಲ
ರಾಷ್ಟ್ರೀಯ ದಾಖಲೆ ಹೊಂದಿರುವ ಪಾರುಲ್‌ ಚೌಧರಿ ಒಲಿಂಪಿಕ್ಸ್‌ 3 ಸಾವಿರ ಮೀಟರ್‌ ಸ್ಟೀಪಲ್‌ಚೇಸ್‌ನಲ್ಲಿ ಫೈನಲ್‌ ತಲುಪಲು ವಿಫ‌ಲ ರಾಗಿದ್ದಾರೆ. ರವಿವಾರದ ಹೀಟ್‌ ರೇಸ್‌ನಲ್ಲಿ ಅವರು 8ನೇ ಸ್ಥಾನಿಯಾಗಿ ಫೈನಲ್‌ ಅರ್ಹತೆಯಿಂದ ವಂಚಿತರಾದರು.

ಪಾರುಲ್‌ ಚೌಧರಿ 9 ನಿಮಿಷ, 23.29 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಇದು ಅವರ ರಾಷ್ಟ್ರೀಯ ದಾಖಲೆಗಿಂತಲೂ ಕಳಪೆ ನಿರ್ವಹಣೆಯಾಗಿದೆ. ಕಳೆದ ವರ್ಷ ಬುಡಾಪೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಪಾರುಲ್‌ 9:15.31 ಸೆಕೆಂಡ್ಸ್‌ ದಾಖಲಿಸಿದ್ದರು. 3 ಹೀಟ್‌ಗಳಲ್ಲಿ ಅಗ್ರಸ್ಥಾನ ಪಡೆದ ತಲಾ ಐವರು ಫೈನಲ್‌ ಅರ್ಹತೆ ಸಂಪಾದಿಸುತ್ತಾರೆ.

29 ವರ್ಷದ ಪಾರುಲ್‌ ಚೌಧರಿ ಪ್ಯಾರಿಸ್‌ ಒಲಿಂಪಿಕ್ಸ್‌ಗೊàಸ್ಕರ ಅಮೆರಿಕ ದಲ್ಲಿ ಒಂದು ತಿಂಗಳ ಕಠಿನ ತರಬೇತಿ ಪಡೆದಿದ್ದರು.

ಇದರೊಂದಿಗೆ ಪಾರುಲ್‌ ಚೌಧರಿ ಅವರ ಪ್ಯಾರಿಸ್‌ ಅಭಿಯಾನ ಅಂತ್ಯ ಗೊಂಡಿತು. ಅವರು 5 ಸಾವಿರ ಮೀ. ರೇಸ್‌ನಲ್ಲೂ ಫೈನಲ್‌ ತಲುಪಲು ವಿಫ‌ಲ ರಾಗಿದ್ದರು. ಈವರೆಗೆ ಒಲಿಂಪಿಕ್ಸ್‌ 3 ಸಾವಿರ ಮೀ. ಸ್ಟೀಪಲ್‌ಚೇಸ್‌ನಲ್ಲಿ ಫೈನಲ್‌ ತಲುಪಿದ ಭಾರತದ ಏಕೈಕ ಆ್ಯತ್ಲೀಟ್‌ ಲಲಿತಾ ಬಾಬರ್‌. ಅವರು 2016 ರಿಯೋ ಗೇಮ್ಸ್‌ನಲ್ಲಿ ಈ ಸಾಧನೆಗೈದಿ ದ್ದರು. 10ನೇ ಸ್ಥಾನ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next