Advertisement
ಇದೇ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಲಕ್ಷ್ಯ ಸೇನ್ ಶುಕ್ರವಾರ ರಾತ್ರಿ ಚೈನೀಸ್ ತೈಪೆಯ ಚೌ ತೀನ್ ಚೆನ್ ಅವರೆದುರು ಮೊದಲ ಗೇಮ್ ಕಳೆದುಕೊಂಡೂ ಗೆದ್ದ ರೀತಿ ಅಮೋಘವಾಗಿತ್ತು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸಿದ ಭಾರತದ ಪ್ರಪ್ರಥಮ ಶಟ್ಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
Related Articles
Advertisement
ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ 30 ವರ್ಷದ ಅಕ್ಸೆಲ್ಸೆನ್ ದಾಖಲೆ ಗಮನಾರ್ಹ ಮಟ್ಟದಲ್ಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ, ರಿಯೋದಲ್ಲಿ ಕಂಚು, 2 ವಿಶ್ವ ಚಾಂಪಿಯನ್‌ಶಿಪ್ ಗೌರವ (2017, 2022), ಥಾಮಸ್ ಕಪ್ ಗೆಲುವು (2016)… ಹೀಗೆ ಸಾಗುತ್ತದೆ ಗೆಲುವಿನ ಓಟ. 2021ರ ಡಿಸೆಂಬರ್‌ನಿಂದ 2024ರ ಜೂನ್ ತನಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನೂ ಅಲಂಕರಿಸಿದ್ದಾರೆ. ಶುಕ್ರವಾರ ರಾತ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಾಪುರದ ಲೋಹ್ ಕೀನ್ ವ್ಯೂ ಅವರನ್ನು ಸುಲಭದಲ್ಲಿ ಸೋಲಿಸಿ ಬಂದಿದ್ದಾರೆ.
ದೈತ್ಯ ಬೇಟೆ:
22 ವರ್ಷದ ಲಕ್ಷ್ಯ ಸೇನ್ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್ ಸ್ಪರ್ಧೆಯ ಗ್ರೂಪ್ ಸ್ಪರ್ಧೆಯಲ್ಲಿ ವಿಶ್ವದ ನಂ. 4 ಆಟಗಾರ, ಜೊನಾಥನ್ ಕ್ರಿಸ್ಟಿ ಅವರನ್ನು ಮಣಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡ ಚೌ ತೀನ್ ಚೆನ್ 11ನೇ ರ್‍ಯಾಂಕಿಂಗ್ ಆಟಗಾರ. ಇಬ್ಬರೂ ಸೇನ್‌ಗಿಂತ ಉನ್ನತ ರ್‍ಯಾಂಕಿಂಗ್ ಆಟಗಾರರು. ಹೀಗಾಗಿ ಇವನ್ನು ದೈತ್ಯ ಬೇಟೆ ಎನ್ನಲಡ್ಡಿಯಿಲ್ಲ.
ಕುತ್ತಿಗೆಯಲ್ಲಿ “ಸ್ಕೈ ಈಸ್ ದ ಲಿಮಿಟ್’ ಟ್ಯಾಟೂ ಹಾಕಿಕೊಂಡಿರುವ ಲಕ್ಷ್ಯ ಸೇನ್, “ನಿಜವಾದ ಪರೀಕ್ಷೆ ಆರಂಭವಾಗಿದೆ’ ಎಂದಿದ್ದಾರೆ.