ಚಿತ್ತಾಪುರ: ಪಟ್ಟಣದ ಪುರಸಭೆಯ 2018-19ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, 17.58 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥರೆಡ್ಡಿ ಘೋಷಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ 2018-19ನೇ ಸಾಲಿನ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಮೂಲಗಳಿಂದ 16.26 ಕೋಟಿ ರೂಪಾಯಿ ರಾಜಸ್ವ ಸ್ವೀಕೃತಿ ಗುರಿ ಹೊಂದಲಾಗಿದೆ. 16.24 ಕೋಟಿ ರೂ. ಖರ್ಚು ಮಾಡಲು ಅಂದಾಜಿಸಲಾಗಿದೆ. ಇದರಲ್ಲಿ 2.60 ಲಕ್ಷ ರೂ. ಉಳಿತಾಯವಾಗಲಿದೆ ಎಂದು ಹೇಳಿದರು.
ವಿವಿಧ ಬಂಡವಾಳ ಮೂಲಕ 28.45 ಕೋಟಿ ರೂ. ಜಮಾ ಆಗಲಿದೆ. 28.31 ಕೋಟಿ ರೂಪಾಯಿ ಖರ್ಚಾಗುವ ನಿರೀಕ್ಷೆಯಿದೆ. ಇದರಲ್ಲಿ 13.50 ಲಕ್ಷ ರೂ. ಉಳಿತಾಯವಾಗಲಿದೆ.
ಅಸಾಧಾರಣದಿಂದ 24.92 ಕೋಟಿ. ರೂ. ಜಮಾ ಆಗುವ ನಿರೀಕ್ಷೆಯಿದೆ. ಇದರಲ್ಲಿ 24.90 ಕೋಟಿ ರೂ. ಖರ್ಚಾಗುವ ನಿರೀಕ್ಷೆಯಿದೆ. 1.48 ಲಕ್ಷ ರೂ. ಉಳಿತಾಯವಾಗಲಿದೆ. ಆಸ್ತಿ ತೆರಿಗೆ, ನೀರಿನ ತೆರಿಗೆ, 14ನೇ ಹಣಕಾಸು ಹಾಗೂ ಎಸ್‌ಎಫ್ ಸಿಯಿಂದ ಹೆಚ್ಚು ಅನುದಾನ ಬರುವುದೆಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ಉಪಾಧ್ಯಕ್ಷ ಮಹ್ಮದ ರಸೂಲ್ ಮುಸ್ತಫಾ, ಸದಸ್ಯರಾದ ಶಿವಕಾಂತ ಬೆಣ್ಣೂರಕರ್, ವಿನೋದ ಗುತ್ತೇದಾರ, ಶಿವಾಜಿ ಕಾಶಿ, ಸೈಯದ್ ಜಫರುಲ್ ಹಸನ್, ಮಲ್ಲಿಕಾರ್ಜುನ ಪೂಜಾರಿ, ಸಿದ್ರಾಮೇಶ್ವರ ಸಜ್ಜನಶೆಟ್ಟಿ, ನಾಗರಾಜ ಕಡಬೂರ್, ಸುರೇಶ ಬೆನಕನಳ್ಳಿ, ದಶರಥ ದೊಡ್ಮನಿ, ಹೀರು ರಾಠೊಡ, ಮಹಾಲಕ್ಷ್ಮೀ ಬಳಿಚಕ್ರ, ಜಗದೇವಿ ಮುಕ್ತೆದಾರ, ವನಮಾಲಮ್ಮ ಪಾಲಪ್, ಅನ್ನಪೂರ್ಣ ಕಲ್ಲಕ್ಕ, ಕಮಲಾಬಾಯಿ ಟೋಕಾಪುರ, ಶಾಂತಾಬಾಯಿ ಬಮ್ಮನಳ್ಳಿ, ರಹೀಮತ ಬೇಗಂ, ಲೆಕ್ಕಾಧಿಕಾರಿ ಕ್ರಾಂತಿದೇವಿ, ಮುತ್ತಣ್ಣ ಭಂಡಾರಿ, ವೆಂಕಟೇಶ ತೇಲಂಗ ಇದ್ದರು.