Advertisement
ಜೂನ್ ಮಾಸಾಂತ್ಯಕ್ಕೆ ಬಿಬಿಎಂಪಿಗೆ 1,757 ಕೋಟಿ ರೂ. ಆಸ್ತ ತೆರಿಗೆ ಹಣ ಸಂಗ್ರಹವಾಗಿದೆ. 2019-20 ನೇ ಸಾಲಿನಲ್ಲಿ ಬಿಬಿಎಂಪಿ 3,500 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹೊಂದಿದೆ.
Related Articles
Advertisement
ತೆರಿಗೆ ಪಾವತಿಯಲ್ಲಿ ಶೇ.5ರಷ್ಟು ವಿನಾಯಿತಿಯನ್ನು ಪ್ರತಿ ವರ್ಷ ಜೂನ್ ಮತ್ತು ಜುಲೈನಲ್ಲಿ ಎರಡು ತಿಂಗಳು ನೀಡಲಾಗುತ್ತಿತ್ತು. ಈ ವರ್ಷ ಚುನಾವಣೆ ಎದುರಾಗಿದ್ದರಿಂದ ಕೇವಲ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಗಣನೀಯ ಪ್ರಮಾಣದ ತೆರಿಗೆ ಹಣ ಸಂಗ್ರಹವಾಗಿದೆ ತಿಳಿಸಿದರು.
ದಾಖಲೆ ಪ್ರಮಾಣದ ತೆರಿಗೆ ಸಂಗ್ರಹ: ಬಿಬಿಎಂಪಿ ಏಪ್ರಿಲ್ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ತೆರಿಗೆ ಮೊತ್ತದಲ್ಲಿ ಶೇ.5ರಷ್ಟು ವಿನಾಯತಿ ನೀಡಲಾಗಿತ್ತು. ಈ ಅವಧಿಯಲ್ಲಿ ಹಣ ಪಾವತಿಸುವವರಿಗೆ ಶೇ.5ರಷ್ಟು ಹಣ ಉಳಿಸಿಕೊಳ್ಳುವ ಅವಕಾಶವಿತ್ತು. ಇದನ್ನು ಬಹುತೇಕ ತೆರಿಗೆದಾರರು ಸರ್ಮಪಕವಾಗಿ ಬಳಸಿಕೊಂಡಿದ್ದು, ಏಪ್ರಿಲ್ ತಿಂಗಳಲ್ಲಿ 945 ಕೋಟಿ ರೂ.ಗಳು ಸಂಗ್ರಹವಾಗಿದೆ.
ಆನ್‌ಲೈನ್ ತೆರಿಗೆ ಪಾವತಿಗೆ ಒಲವು: ಸಾರ್ವಜನಿಕರು ತೆರಿಗೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಈ ವರ್ಷದ ಮೊದಲ ತ್ತೈಮಾಸಿಕದಲ್ಲಿ ಆನ್‌ಲೈನ್‌ನ ಮೂಲಕ 642 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಈ ಹಿಂದೆ 2018ರಲ್ಲಿ 459 ಕೋಟಿ ರೂ. , 2017ರಲ್ಲಿ 384 ಕೋಟಿ. ರೂ ಮತ್ತು 2016ರಲ್ಲಿ 235 ಕೋಟಿ. ರೂ. ತೆರಿಗೆ ಹಣ (ಮೊದಲ ತ್ತೈಮಾಸಿಕ) ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ಆನ್‌ಲೈನ್ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ.
ವರ್ಷ ತೆರಿಗೆ ಸಂಗ್ರಹ ಗುರಿ ತೆರಿಗೆ ಸಂಗ್ರಹ ಶೇಕಡವಾರು2016 2,300 1,997.28 86.83
2017 2,600 2,132.42 82.01
2018 3,100 2,529.42 81.59
2019 3,500 1,757.91 50.22 (ಜೂನ್ ಅಂತ್ಯದವರೆಗೆ) ವರ್ಷ ಪಾವತಿಸಿದ ಆಸ್ತಿಗಳ ವಿವರ ಹಿಂದಿನ ವ. ಬಾಕಿದಾರರು ಆಸ್ತಿಗಳ ಸಂಖ್ಯೆ
2016 11,57,167 4,63,973 16,21,140
2017 11,99,211 6,28,579 18,27,790
2018 12,41,316 6,76,883 19,18,199
2019 9,90,618 1,92,681 11,83,299 * ಹಿತೇಶ್ ವೈ