Advertisement
ವಿಷಮ ಶೀತ ಜ್ವರದಿಂದ ಬಳಲುತ್ತಿದ್ದ 70, ಸೋಂಕಿತರ ಸಂಪರ್ಕ 24, ತೀವ್ರ ಉಸಿರಾಟದ ತೊಂದರೆ 2, ಪತ್ತೆಯಾಗದ ಸಂಪರ್ಕ 60, ಅನ್ಯರಾಜ್ಯದಿಂದ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದೆ. ಮಂಗಳವಾರ ಜ್ಞಾನಭಾರತಿ ಆವರಣ ಗೇಟ್ ಬಳಿ ವಾಸವಿದ್ದ ಸೋಂಕಿತ ವ್ಯಕ್ತಿಯನ್ನು ಕರೆದೊಯ್ಯಲು ನಿರ್ಲಕ್ಷ್ಯ ತೋರಿದ್ದು,
Related Articles
Advertisement
ಮಂಗಳವಾರ ಜ್ಞಾನಭಾರತಿ ಆವರಣ ಗೇಟ್ ಬಳಿ ವಾಸವಿದ್ದ ಸೋಂಕಿತ ವ್ಯಕ್ತಿಯನ್ನು ಕರೆದೊಯ್ಯಲು ನಿರ್ಲಕ್ಷ್ಯ ತೋರಿದ್ದು, ಬುಧವಾರ ಕೂಡ ಆ್ಯಂಬುಲನ್ಸ್ ಕಳುಹಿಸದ ಹಿನ್ನೆಲೆ ಸೋಂಕು ಕಾಣಿಸಿಕೊಂಡ ಯಶವಂತಪುರದ ದಂಪತಿ ಖಾಸಗಿ ವಾಹನ ಮೂಲಕ ಆಸ್ಪತ್ರೆಗೆ ತೆರಳಿರುವ ಪ್ರಸಂಗ ನಡೆಯಿತು. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಗಿರಿನಗರದ ಸೋಂಕಿತ ವ್ಯಕ್ತಿಗೆ ತಿಳಿಸಿದ್ದು, ಆತ ಮನೆಯಲ್ಲಿಯೇ ಉಳಿಯು ವಂತಾಗಿದ್ದು, ಮನೆ ಸೀಲ್‌ಡೌನ್ ಮಾಡಲಾಗಿದೆ.
ಪರಾರಿಯಾದ ಸೋಂಕಿತ ಸೆರೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ 30 ವರ್ಷದ ಸೋಂಕಿತನು ವಿಕ್ಟೋರಿಯಾ ಆಸ್ಪತ್ರೆಯಿಂದ ಬುಧವಾರ ಬೆಳಗ್ಗೆ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದ. ಸಂಜೆ 6 ಗಂಟೆಗೆ ಡಿ.ಜೆ. ಹಳ್ಳಿ ಸಮೀಪದ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಓಡಾಡುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಸೋಂಕಿತನನ್ನು ಸೆರೆಹಿಡಿದು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಸೋಂಕಿತ ವ್ಯಕ್ತಿಯು ಎಲ್ಲೆಲ್ಲಿ ಓಡಾಟ ನಡೆಸಿದ್ದಾರೆ ಎಂಬ ಬಗ್ಗೆ ಪಾಲಿಕೆ ಅಧಿಕಾರಿ ಮಾಹಿತಿ ಕಲೆ ಹಾಕುತ್ತಿದ್ದಾರೆ.