ಬೆಂಗಳೂರು: ಯುವತಿರೊಂದಿಗೆ ಡೇಟಿಂಗ್ ಮಾಡಲು ಡೇಟಿಂಗ್ ವೆಬ್‌ಸೈಟ್ ಮೊರೆ ಹೋದ ಎಂಜಿನಿಯರ್‌ಗೆ ಸೈಬರ್ ಕಳ್ಳರು 16.99 ಲಕ್ಷ ರೂ. ಟೋಪಿ ಹಾಕಿದ್ದಾರೆ.
ಹೊಂಗಸಂದ್ರದ ನಿವಾಸಿ ಮನೋಜ್ ಡಿ. ಹಣ ಕಳೆದುಕೊಂಡ ಎಂಜಿನಿಯರ್.
ಜು.1ರಂದು ಮನೋಜ್ ಡೇಟ್‌ಮ್ಯಾಟ್ಸ್ ಡಾಟ್ ನೆಟ್ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಡೇಟಿಂಗ್ ಮಾಡಲು ಯುವತಿಯರನ್ನು ಹುಡುಕುತ್ತಿದ್ದರು. ಇದಾದ ಕೆಲ ಹೊತ್ತಿನಲ್ಲಿ ವಿಕ್ರಮ್ ಎಂಬ ಅಪರಿಚಿತ ವ್ಯಕ್ತಿ ಮನೋಜ್‌ಗೆ ಕರೆ ಮಾಡಿ, “ಡೇಟಿಂಗ್ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಆರಂಭ ದಲ್ಲಿ 5 ಸಾವಿರ ರೂ. ಪಾವತಿಸಬೇಕು’ ಎಂದು ಸೂಚಿಸಿದ್ದರು.
ಅದರಂತೆ ಮನೋಜ್ 5 ಸಾವಿರ ರೂ. ಪಾವತಿಸಿದ ಬಳಿಕ , ಕ್ಲೈಂಟ್ ಮಾಹಿತಿ ಶುಲ್ಕ, ಸೆಕ್ಯೂರಿಟಿ ಶುಲ್ಕ ಎಂಬಿತ್ಯಾದಿ ಸಬೂಬು ಹೇಳಿ ಇನ್ನಷ್ಟು ಹಣ ಲಪಟಾಯಿಸಿದ್ದರು. ಡೇಟಿಂಗ್ ಸೇವೆ ಪಡೆಯಲು ನಾವು ಹೇಳಿದಷ್ಟು ಹಣ ವರ್ಗಾವಣೆ ಮಾಡಬೇಕು. ನಂತರ ಅದನ್ನು ರೀಫಂಡ್ ಮಾಡುವುದಾಗಿ ನಂಬಿಸಿ ಹಂತ-ಹಂತವಾಗಿ 16,99,500 ರೂ. ಅನ್ನು ಆನ್ ಲೈನ್ ಮೂಲಕ ತಮ್ಮ ಖಾತೆಗೆ ಸೈಬರ್ ಕಳ್ಳರು ಹಾಕಿಸಿಕೊಂಡಿದ್ದಾರೆ. ನಂತರ ಹಣವನ್ನೂ ಹಿಂತಿರುಗಿಸದೇ, ಸೇವೆಯನ್ನೂ ನೀಡದೇ ವಂಚಿಸಿದ್ದಾರೆ. ಆಗ್ನೇಯ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಪು: ಹೆದ್ದಾರಿಯಲ್ಲಿ ಟ್ಯಾಂಕರ್‌ನಿಂದ ಲಿಕ್ವಿಡ್ ಸೋರಿಕೆ; ಸ್ಥಳೀಯರಲ್ಲಿ ಆತಂಕ