Advertisement

ಮಹಾರಾಷ್ಟ್ರ ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 17 ಮಂದಿ ಸಾವು; ಐವರು ನಾಪತ್ತೆ

09:32 AM Sep 14, 2019 | Nagendra Trasi |

ಮುಂಬೈ:ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಕೊನೆಯ ದಿನ ನಡೆದ ಗಣೇಶ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ 17ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಬಿಗಿ ಬಂದೋಬಸ್ತ್ ನಲ್ಲಿ ಗುರುವಾರ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಜನ ಪಾಲ್ಗೊಂಡಿದ್ದರು. ಹತ್ತು ದಿನಗಳ ಕಾಲ ನಡೆದ ಗಣೇಶ ಹಬ್ಬದ ಕೊನೆಯ ದಿನವಾದ ಗುರುವಾರ ಗಣೇಶ ವಿಗ್ರಹಗಳ ವಿಸರ್ಜನೆ ನಡೆದಿತ್ತು.

ಮಹಾರಾಷ್ಟ್ರದ ವಿವಿಧೆಡೆ ಈ ದುರಂತ ಸಂಭವಿಸಿದ್ದು, ರತ್ನಗಿರಿಯಲ್ಲಿ ಮೂವರು, ನಾಸಿಕ್ ನಲ್ಲಿ ಇಬ್ಬರು, ಸಿಂಧುದುರ್ಗದಲ್ಲಿ ಒಬ್ಬರು, ಸತಾರಾದಲ್ಲಿ ಒಬ್ಬರು, ಥಾಣೆಯಲ್ಲಿ ಒಬ್ಬರು, ಧುಲೆಯಲ್ಲಿ ಒಬ್ಬರು, ಬುಲ್ದಾನಾದಲ್ಲಿ ಒಬ್ಬರು ಹಾಗೂ ಬಾಂದ್ರಾದಲ್ಲಿ ಒಬ್ಬರು ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next