ನಿರ್ಭಯಾ ಹಂತಕರ ಗಲ್ಲುಶಿಕ್ಷೆ ಜಾರಿ ವಿಳಂಬಕ್ಕೆ ದಿಲ್ಲಿ ಆಪ್ ಸರ್ಕಾರದ ನಿರ್ಲಕ್ಷ್ಯ ಕಾರಣ: ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಮಣಿಪಾಲ: ನಿರ್ಭಯಾ ಹಂತಕರ ಗಲ್ಲುಶಿಕ್ಷೆ ಜಾರಿ ವಿಳಂಬಕ್ಕೆ ದಿಲ್ಲಿ ಆಪ್ ಸರ್ಕಾರದ ನಿರ್ಲಕ್ಷ್ಯ ಕಾರಣ: ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತರಗಳು ಇಲ್ಲಿದೆ.
ಪೂರ್ಣಪ್ರಜ್ನ ಪಿಎಸ್: ಯಾವುದೇ ಪಕ್ಷ, ಸರಕಾರದ ಮೇಲೆ ಗೂಬೆ ಕೂರಿಸುದಕ್ಕಿಂತ, ನಮ್ಮ ಸಂವಿಧಾನದಲ್ಲೆ ಹಲವಾರು ರೀತಿಯ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಿರುವಾಗ, ಕಾಮಿ ಕ್ರಿಮಿಗಳು ಅದನ್ನು ಉಪಯೋಗಿಸಿಕೊಳ್ಳುತ್ತಿವೆ ಅನ್ನಬಹುದೇನೋ .
ಗಾಯತ್ರಿ ರಮೇಶ್: ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಅಪರಾಧಿಗಳು ಗಲ್ಲು ಶಿಕ್ಷೆಯನ್ನು ವಿಳಂಬ ಮಾಡಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಆಪ್ ಸರ್ಕಾರಕ್ಕೂ ಶಿಕ್ಷೆ ವಿಳಂಬಕ್ಕೂ ಸಂಬಂಧವಿಲ್ಲ.
ನರಸಿಂಹ ಮೂರ್ತಿ ಎನ್ ಎಂ; ನಿರ್ಭಯದಂತಹ ಸಾವಿರಾರು ಪ್ರಕರಣಗಳ ಮತ್ತು ಆಸಿಡ್ ದಾಳಿಯಂತಹ ಅದೆಷ್ಟೋ ಪ್ರಕರಣಗಳ ವಿಳಂಬಕ್ಕೆ ಯಾವುದೇ ಒಂದು ಸರ್ಕಾರವನ್ನು ಬೊಟ್ಟು ಮಾಡಿ ತೋರಿಸುವುದಕ್ಕಿಂತ ಈ ರೀತಿಯ ವಿಳಂಬಕ್ಕೆ ನ್ಯಾಯಾಂಗ ವ್ಯವಸ್ಥೆ ಮತ್ತು ಶಾಸಕಾಂಗದ ದೌರ್ಬಲ್ಯತೆ ಎಷ್ಟು ಕಾರಣ ಎಂದು ಯೋಚಿಸಬೇಕಾಗಿದೆ. ಅನುಕೂಲಸಿಂಧು ಕಾನೂನುಗಳನ್ನು ತಿದ್ದುಪಡಿ ಮಾಡಿ ಸಂವಿಧಾನವನ್ನು ಸಶಕ್ತಗೊಳಿಸಬೇಕಾಗಿದೆ. ಶಾಸಕಾಂಗ, ನ್ಯಾಯಾಂಗಗಳು ದುರ್ಬಲವಾದಾಗ ಕಾರ್ಯಾಂಗವು ಪ್ರಬಲವಾಗಬೇಕಾಗುತ್ತದೆ. ಒಂದು ವೇಳೆ ಕಾರ್ಯಾಂಗವೂ ದುರ್ಬಲವಾದರೆ ಜನಾಂಗವೇ ತನ್ನ ಪರಮಾಧಿಕಾರವನ್ನು ಚಲಾಯಿಸುವ ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗವಾಗುತ್ತದೆ. ಆಗ ಸಂವಿಧಾನ ಕಾನೂನು ಏನೂ ಮಾಡಲಾಗದ ಸ್ಥಿತಿಗೆ ತಲುಪಬೇಕಾಗುತ್ತದೆ.