Advertisement

ಕೋವಿಡ್: ರಾಜ್ಯದಲ್ಲಿಂದು 1669 ಪಾಸಿಟಿವ್ ಪ್ರಕರಣ; 1672 ಸೋಂಕಿತರು ಗುಣಮುಖ

08:22 PM Aug 13, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1669 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು 22 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇಂದು 1672 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 22,703 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.98 ಇದೆ. ಇವತ್ತು 1,69,332 ಪರೀಕ್ಷೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಇಂದು 425 ಜನರಿಗೆ ಸೋಂಕು ತಗುಲಿದ್ದು, 424 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 8189 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-2, ಬಳ್ಳಾರಿ-2, ಬೆಳಗಾವಿ-49, ಬೆಂಗಳೂರು ಗ್ರಾಮಾಂತರ-14, ಬೆಂಗಳೂರು ನಗರ-425, ಬೀದರ್-0, ಚಾಮರಾಜನಗರ-22, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-51, ಚಿತ್ರದುರ್ಗ-16, ದಕ್ಷಿಣ ಕನ್ನಡ-390, ದಾವಣಗೆರೆ-18, ಧಾರವಾಡ-8, ಗದಗ-3, ಹಾಸನ-113, ಹಾವೇರಿ-0, ಕಲಬುರಗಿ-3, ಕೊಡಗು-73, ಕೋಲಾರ-27, ಕೊಪ್ಪಳ-2, ಮಂಡ್ಯ-35, ಮೈಸೂರು-106, ರಾಯಚೂರು-2, ರಾಮನಗರ-0, ಶಿವಮೊಗ್ಗ-56, ತುಮಕೂರು-69, ಉಡುಪಿ-115, ಉತ್ತರ ಕನ್ನಡ-62, ವಿಜಯಪುರ-1, ಯಾದಗಿರಿ-1.

Advertisement
Advertisement

Udayavani is now on Telegram. Click here to join our channel and stay updated with the latest news.

Next