Advertisement
ರೈಲ್ವೇ ಸಚಿವರಾಗಿದ್ದ ನಿತೀಶ್ ಕುಮಾರ್ 2003ರಲ್ಲಿ ಮಂಗಳೂರಿಗೆ ಬಂದಿದ್ದಾಗ ಸ್ಥಳೀಯರ ಬೇಡಿಕೆಯಂತೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಸೂಚಿಸಿ ದ್ದರು. ಈ ಸಂಬಂಧ ರೈಲ್ವೇ ಮಂಡಳಿಯೂ 2004ರ ಡಿ. 27ರಂದು ಆದೇಶವನ್ನೂ ಹೊರಡಿಸಿತ್ತು. ಆಗ ಮಂಗಳೂರು-ಹಾಸನ ನಡುವೆ ಹಳಿ ಪರಿವರ್ತನೆ ಕಾಮಗಾರಿ ಚಾಲ್ತಿಯಲ್ಲಿತ್ತು. ಕಾಮಗಾರಿ ಮುಗಿದ ಮೇಲೆ ಅಧಿಸೂಚನೆ ಹೊರಡಿಸಲು ನಿರ್ಧರಿಸಿತ್ತು.
ರೈಲ್ವೇ ಮಂಡಳಿಯ 2004 ಹಾಗೂ 2014ರ ಆಗಸ್ಟ್ 22ರಂದು ಬರೆದ ಪತ್ರವನ್ನು ಉಲ್ಲೇಖೀಸಿ ನೈಋತ್ಯ ರೈಲ್ವೇಯ ಮಹಾಪ್ರಬಂಧಕ ಅಜಯ ಕುಮಾರ್ ಸಿಂಗ್ ಮತ್ತೆ 2020ರ ಫೆ. 10ರಂದು ರೈಲ್ವೇ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು “ರೈಲ್ವೇ ಮಂಗಳೂರು ಕಾಂಪ್ಲೆಕ್ಸ್ (ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್) ಹಾಗೂ ತೋಕೂರು ನಿಲ್ದಾಣವನ್ನು ನೈಋತ್ಯ ರೈಲ್ವೇಗೆ ಸೇರ್ಪಡೆಗೊಳಿಸಬೇಕು ಎಂದು ಕೋರಿದ್ದರು.
Related Articles
Advertisement
ಇನ್ನೊಂದೆಡೆ ರೈಲ್ವೇ ಬಳಕೆದಾರರ ಸಂಘಟನೆಗಳು ಸಾರ್ವಜನಿಕ ಹಿತದೃಷ್ಟಿಯನ್ನು ಪರಿಗಣಿಸಿ ರೈಲ್ವೇ ಮಂಡಳಿ 2014ರಲ್ಲಿ ಮಾಡಿರುವ ಆದೇಶದ ಬಗ್ಗೆ ರೈಲ್ವೇ ಸಚಿವರ ಗಮನ ಸೆಳೆದು ಶೀಘ್ರ ಗಜೆಟ್ ನೋಟಿಫಿಕೇಶನ್ ಆಗುವಂತೆ ಮಾಡಬೇಕು ಎಂದು ನಿರಂತರ ಮನವಿ ಮಾಡುತ್ತಲೇ ಬಂದಿವೆ.
ಪ್ರಮುಖ ಬೇಡಿಕೆಗಳು01- ಮಂಗಳೂರು ಸೆಂಟ್ರಲ್ ಮೂಲಕ 31 ರೈಲುಗಳು ಪ್ರತಿದಿನ ಸಂಚರಿಸುತ್ತಿದ್ದು, ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಬೇಕು ಹಾಗೂ ನಿಲ್ದಾಣವನ್ನು ವಿಶ್ವದರ್ಜೆ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು. 02- ಮಂಗಳೂರಿನಿಂದ ಎಲ್ಲ ಜಿಲ್ಲಾ ಹಾಗೂ ರಾಜ್ಯಗಳ ಕೇಂದ್ರ ಸ್ಥಾನಗಳಿಗೆ ರೈಲ್ವೇ ಸಂಪರ್ಕ ಕಲ್ಪಿಸಬೇಕು. ಮಂಗಳೂರು-ಬೀದರ್, ಮಂಗಳೂರು -ತಿರುಪತಿಗೆ ಹೊಸದಾಗಿ ಸಂಚಾರ ಆರಂಭಿಸಬೇಕು. ಮಂಗಳೂರಿನಿಂದ ಬೆಂಗಳೂರಿಗೆ, ಮಂಗಳೂರಿನಿಂದ ಮೈಸೂರಿಗೆ ಹಗಲು ರೈಲು ಆರಂಭಿಸಬೇಕು, ಮಂಗಳೂರಿನಿಂದ ರಾಮೇಶ್ವರಕ್ಕೆ ನೇರ ರೈಲು ಸಂಚಾರ, ಮಂಗಳೂರು-ವಿಜಯಪುರ ರೈಲನ್ನು ಖಾಯಂಗೊಳಿಸಬೇಕು, ಮಂಗಳೂರು-ಮಡಂಗಾವ್ ರೈಲನ್ನು ಸೂಪರ್‌ಫಾಸ್ಟ್ ಆಗಿ ಪರಿವರ್ತಿಸಬೇಕು ಹಾಗೂ ಥಾಣೆ ಅಥವಾ ಸಿಎಸ್‌ಟಿಗೆ ವಿಸ್ತರಿಸಬೇಕು. 03- ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸಬೇಕು ಹಾಗೂ ವಿದ್ಯುದೀಕರಣಗೊಳಿಸಬೇಕು, ಸುಬ್ರಹ್ಮಣ್ಯ ಮಾರ್ಗದಿಂದ ಮಂಗಳೂರು ವರೆಗೆ 8 ಕಡೆಗಳಲ್ಲಿ ರೈಲ್ವೇ ಮೇಲ್ಸೇತುವೆ ಅಥವಾ ಕೆಳಸೇತುವೆಗಳನ್ನು ನಿರ್ಮಿಸಬೇಕು.