Advertisement

ಪರಿಷತ್‌ನಲ್ಲಿ 16 ಗಂಟೆ ಚರ್ಚೆ: ಪ್ರತಾಪ್‌ಚಂದ್ರ ಶೆಟ್ಟಿ

11:06 PM Oct 12, 2019 | Team Udayavani |

ವಿಧಾನಪರಿಷತ್‌: ವಿಧಾನಪರಿಷತ್‌ನಲ್ಲಿ ಮೂರು ದಿನಗಳ ಕಲಾಪದಲ್ಲಿ 16 ಗಂಟೆ 45 ನಿಮಿಷಗಳ ಕಾಲ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದಿದೆ ಎಂದು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು. ವಿವಿಧ ವರದಿಯ ಮಂಡನೆ, 4 ಕಾಗದ ಪತ್ರ ಮಂಡನೆ, ನಿಯಮ 72, ನಿಯಮ 330 ಹಾಗೂ ನಿಯಮ 330ಎ ಹಾಗೂ ನಿಯಮ 59ರ ಅಡಿಯಲ್ಲಿ ವಿವಿಧ ವಿಷಯಗಳ ಮೇಲೆ ವಿಸ್ತೃತ ಚರ್ಚೆ ನಡೆದಿದೆ. ಮೂರು ವಿಧೇಯಕಗಳು ಅಂಗೀಕಾರಗೊಂಡಿವೆ ಎಂದು ಹೇಳಿದರು.

Advertisement

ಪರಿಷತ್ತಿನಲ್ಲಿ ಕೇಳಿಸಿದ್ದು
ಪ್ರಗತಿ ಪರಿಶೀಲನೆ ವೇಳೆಯಲ್ಲೇ ಡೀಸಿ ವರ್ಗಾವಣೆ ಆದೇಶ ಬಂತು!
-ನೆರೆ ನಿರ್ವಹಣೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಸಚಿವ ಆರ್‌.ಅಶೋಕ್‌

17 ಜನರನ್ನು ನಾವು ಎಳೆದಿದ್ದಲ್ಲ, ನೀವು ಕಳಿಸಿದ್ದು ಅಂತಾ ಈಗ ಗೊತ್ತಾಯ್ತು
-ಗೋವಿಂದರಾಜು ಅವರನ್ನು ಕರೆದುಕೊಂಡು ಮಂತ್ರಿಗಿರಿ ಕೊಡಿ ಎಂದ ಪ್ರತಿಪಕ್ಷಕ್ಕೆ ಸದಸ್ಯೆ ತೇಜಸ್ವಿನಿಗೌಡ

ಅಧಿಕಾರಿಗಳ್ಯಾರೂ ಭಾನಗಡಿ ಮಾಡಿಲ್ಲ. ಅಪ್ರಿಸಿಯೇಟ್‌ ಮಾಡ್ಬೇಕು
-ನೆರೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳ ಬದ್ಧತೆಯನ್ನು ಶ್ಲಾಘಿಸುತ್ತಾ ಬಸವರಾಜ ಹೊರಟ್ಟಿ ಹೇಳಿದ್ದು

ನೀವು ದೆಹಲಿಗೆ ಹೋಗಿ ಬಂದ್ರೆ ಸಾಕು, ದುಡ್ಡು ಬರುತ್ತೆ
-ಸದಸ್ಯ ಲೆಹರ್‌ಸಿಂಗ್‌ ಉದ್ದೇಶಿಸಿ ಸದಸ್ಯ ಬಸವರಾಜ ಹೊರಟ್ಟಿ ಕಾಲೆಳೆಯುತ್ತಾ

Advertisement

ನಿನ್ನೆ ಸಚಿವರು ಇಲ್ಲಾ ಅಂತ ಭಾಷಣ ಮಾಡಿದ್ರಿ, ಇವತ್ತು ಇದ್ದಾರೆ ಅಂತ ಭಾಷಣ ಮಾಡ್ತಿದ್ದೀರಿ…!
-ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಅವರ ಭಾಷಣಕ್ಕೆ ಕತ್ತರಿ ಹಾಕುತ್ತಾ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next