Advertisement
ತಮಿಳುನಾಡಿನ ನಾಗರಕೋಯಿಲ್ ಹಾಗೂ ಸಿಂಗಾಪುರದಲ್ಲಿ 5 ಅಡಿ ಎತ್ತರದ ನಾಗವಿಗ್ರಹ ಇರುವುದು ಅನೇಕರಿಗೆ ಗೊತ್ತು. ಆದರೆ, ಬೆಂಗಳೂರಿನಲ್ಲಿನ ಮುಕ್ತಿನಾಗ ಕ್ಷೇತ್ರದ ವಿಗ್ರಹ ಅದಕ್ಕೂ ಮೂರು ಪಟ್ಟು ಎತ್ತರವಿದ್ದು, ಈ ಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, ಈ ಕ್ಷೇತ್ರದಲ್ಲಿ 1008 ಸಣ್ಣ ಸಣ್ಣ ನಾಗ ಮೂರ್ತಿಗಳ ಬನವೂ ಇದೆ.
ದೇಗುಲದ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರೀಗಳು, ತಿಂಗಳಿಗೊಮ್ಮೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿಬರುತ್ತಿದ್ದರಂತೆ. ಒಂದು ದಿನ ನಾಗದೇವರು ಇವರ ಕನಸಿನಲ್ಲಿ ಬಂದು ಇವರ ಕನಸಿನಲ್ಲಿ ಬಂದು, ರಾಮೋಹಳ್ಳಿಯ ಬಳಿ ಓಡಾಡಿದ ಹಾಗೆ ಕಾಣಿಸಿತಂತೆ. ಶಾಸ್ತ್ರೀಗಳು ರಾಮೋಹಳ್ಳಿಯ ದಾರಿಯಲ್ಲಿ ಸಾಗುವಾದ 16 ಅಡಿ ಇರುವ ಹಾವಿನ ಪೊರೆಯೊಂದು ಕಂಡಿದ್ದು, ಆ ಹಿನ್ನೆಲೆಯಲ್ಲಿ 16 ಅಡಿ ಎತ್ತರದ ನಾಗಮೂರ್ತಿಯನ್ನು ನಿರ್ಮಿಸಲು ತೀರ್ಮಾನಿಸಿದರಂತೆ. ಸ್ಥಾಪನೆ ಹಿಂದಿನ ಸಾಹಸ
ಇಲ್ಲಿ ನಾಗ ವಿಗ್ರಹವನ್ನು ಗರ್ಭಗುಡಿಯಲ್ಲಿ ಸ್ಥಾಪಿಸಿದ್ದೇ ಒಂದು ಸಾಹಸಗಾಥೆ. ಈ ಮೂರ್ತಿಯನ್ನು ತಮಿಳುನಾಡಿನ ಕಾಂಚೀಪುರದ ಶಿಲ್ಪಿ ಪದ್ಮಶ್ರೀ ಗಣಪತಿಸ್ಥಪತಿ ಹಾಗೂ 15 ಮಂದಿ ಸಹ ಶಿಲ್ಪಿಗಳು ನಿರ್ಮಿಸಿದರು. ಈ ಮೂರ್ತಿಯನ್ನು ಬೆಗ್ಳೂರಿಗೆ 32 ಚಕ್ರದ ಬೃಹತ್ ಟ್ರಕ್ಕಿನಲ್ಲಿ ತರಲಾಯಿತು. 2010ರ, ಏಪ್ರಿಲ್ 4ರಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು. ನಾಗದೋಷ ಪರಿಹಾರಕ್ಕೆ ಪ್ರಸಿದ್ಧವಾಗಿರುವ ಈ ಕ್ಷೇತ್ರದ ನಿರ್ಹಹಣೆಯನ್ನು ಗೌರಿ ಸುಬ್ರಹ್ಮಣ್ಯ ಹೊತ್ತಿದ್ದಾರೆ.
Related Articles
ದರುಶನಕೆ ದಾರಿ: ಮೆಜೆಸ್ಟಿಕ್‌ನಿಂದ 18 ಕಿ.ಮೀ. ದೂರದ ದೊಡ್ಡ ಆಲದ ಮರದ ರಸ್ತೆಯಲ್ಲಿ 5 ಕಿ.ಮೀ. ಸಾಗಿದರೆ, ರಾಮೋಹಳ್ಳಿ ಸಿಗುತ್ತೆ. ಅಲ್ಲಿಂದ ಕೇವಲ 1 ಕಿ.ಮೀ.
ಸಂಪರ್ಕ: 9535383921, 8880936094
Advertisement
ಅನಿಲ್ ಕುಮಾರ್