Advertisement

ಗಣಿತ ಪರೀಕ್ಷೆ ಬರೆದ 15,335 ವಿದ್ಯಾರ್ಥಿಗಳು

09:01 AM Jun 28, 2020 | Suhan S |

ಯಾದಗಿರಿ: ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆ ಎನ್ನಲಾಗುವ ಗಣಿತ ವಿಷಯ ಪರೀಕ್ಷೆಗೆ ಜಿಲ್ಲೆಯ 59 ಪರೀಕ್ಷಾ ಕೇಂದ್ರಗಳಲ್ಲಿ 15,335 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

Advertisement

ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ತೀವ್ರ ಆತಂಕ ಸೃಷ್ಟಿಸಿದ್ದು ಈ ಮಧ್ಯೆಯೇ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡುಬಂದ ಹಿನ್ನೆಲೆ ಅಧಿಕಾರಿಗಳು 14 ಪರೀಕ್ಷಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡ್ರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದರು. ಶನಿವಾರ ನಡೆದ ಗಣಿತ ಪರೀಕ್ಷೆಗೆ ಜಿಲ್ಲೆಯ 16,611 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಜಿಲ್ಲೆಯ ಕಂಟೈನ್ಮೆಂಟ್‌ ಝೋನ್‌ಗಳ 412 ವಿದ್ಯಾರ್ಥಿಗಳು ಸೇರಿದ್ದು ಇವರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುವ 13,202ರಲ್ಲಿ 12,488 ವಿದ್ಯಾರ್ಥಿಗಳು ಹಾಜರಾಗಿದ್ದು 714 ಮಕ್ಕಳು ಗೈರಾಗಿದ್ದರು.

ಇನ್ನು ಮೊದಲ ಬಾರಿಗೆ ಪರೀಕ್ಷೆ ಬರೆಯುವ 692 ಖಾಸಗಿ ವಿದ್ಯಾರ್ಥಿಗಳಲ್ಲಿ 496 ಜನ ಉಪಸ್ಥಿತರಿದ್ದರೆ 196 ಮಕ್ಕಳು ಪರೀಕ್ಷೆಗೆ ಬರಲಿಲ್ಲ. ಇತರೆ ಜಿಲ್ಲೆಯ 459 ವಿದ್ಯಾರ್ಥಿಗಳಲ್ಲಿ 452 ಮಕ್ಕಳು ಹಾಜರಿದ್ದರು. ಒಟ್ಟು 1276 ಮಕ್ಕಳು ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next