Advertisement

ಕುಡಿವ ನೀರು ಪೂರೈಕೆಗೆ 153 ಕೋಟಿ ರೂ.

11:39 AM Mar 14, 2021 | Team Udayavani |

ಮಾಗಡಿ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆಗೆ 153 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

Advertisement

ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಭಾಗದಲ್ಲಿ ಬೋರ್‌ವೆಲ್‌ಗ‌ಳಲ್ಲಿ ಸತತವಾಗಿ 4 ವರ್ಷಗಳಲ್ಲಿ ನೀರು ಸಿಕ್ಕಿಲ್ಲ, ಆ ಭಾಗದಲ್ಲಿ ಮೊದಲ ಹಂತವಾಗಿ ಜಿಪ್ತಿಯಲ್ಲಿ ಜಲ ಜೀವನ್‌ ಮಿಷನ್‌ ಯೋಜನೆ ಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.

ಎರಡನೇ ಹಂತವಾಗಿ ಮುಂದಿನ ವರ್ಷದಿಂದ ಮಂಚನಬೆಲೆ, ವೈ.ಜಿ.ಗುಡ್ಡ ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ತರುತ್ತಿದ್ದು, ಎಲ್ಲ ಹಳ್ಳಿಗಳಿಗೂ ಜಲ ಜೀವನ್‌ ಮಿಷನ್‌ ಮುಖಾಂತರ 221 ಕೋಟಿ ರೂ. ವೆಚ್ಚದ ‌ಲ್ಲಿ ಯೋಜನೆ ತಯಾರಿಸಲಾಗಿದೆ. ರಾಷ್ಟ್ರೀಯ ಕುಡಿಯುವ ನೀರಿನ ನೀತಿ ಯೋಜನೆಯನ್ನು 1800 ಕೋಟಿ ರೂ.ನಲ್ಲಿ ಜಿಲ್ಲೆಗೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅತಿ ಶೀಘ್ರದಲ್ಲಿಯೇ ಮಂಜೂರಾತಿ ಹಂತದಲ್ಲಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ 15ನೇ ಹಣಕಾಸು ಯೋಜನೆಯನ್ನು ಬಳಸಿಕೊಂಡು ಈ ವರ್ಷದಲ್ಲಿ 7 ಕೋಟಿ ಮಂಜೂರಾಗಿದೆ. ಮುಂದಿನ ವರ್ಷದಲ್ಲಿ ಉಳಿದ 22 ಕೋಟಿ ಮಂಜೂರಾಗಲಿದೆ. ಎಲ್ಲಿ ಅಂತರ್ಜಲ ಚೆನ್ನಾಗಿದೆ. ಆ ಆಧಾರದ ಮೇಲೆ ಕಾರ್ಯಕ್ರಮ ಶೀಘ್ರ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಕಣ್ವ ಪೈಪ್‌ ಲೈನ್‌ ಆಗಿದೆ. ಸತ್ಯಗಾಲದಲ್ಲಿ 4 ಕಾಲುವೆ ಹಾಗೂ ಪೈಪ್‌ಲೈನ್‌ ಸಹ ಆಗಿದೆ. ವರ್ಷದಲ್ಲಿ ಪೂರ್ಣಗೊಂಡು ನೀರು ಹರಿಯಲಿದೆ. ಅರಣ್ಯ ಇಲಾಖೆಯಸಮಸ್ಯೆಯಿತ್ತು. ಮಂಡ್ಯ ಜಿಲ್ಲಾಧಿಕಾರಿಬಗೆಹರಿಸಿದ್ದಾರೆ. ಮೇಲಧಿಕಾರಿಗಳ ಅನುಮತಿ ಬೇಕಿದ್ದು, ಇನ್ನೂ 11 ಕಿ.ಮೀ ಕೊಳವೆ ಮಾರ್ಗದಲ್ಲಿ ನೀರು ಬರಬೇಕಿದೆ. ಈಗಾಗಲೇ 3 ಕಿ.ಮೀ. ಕಾಮಗಾರಿ ಮುಗಿದಿದೆ. ಮÙವಳಿ‌Û Û ತಾಲೂಕಿನ ಜನರೊಂದಿಗೆ ಚರ್ಚಿಸಿ ಬಗಹರಿಸಿ ಇಗ್ಗಲೂರಿ ಜಲಾಶಯಕ ನಿೆR àರು ಬಂದರೆ, ಇಲ್ಲಿನ ಕಣ್ವಕ್ಕೆ ನೀರು ಹರಿಯುತ್ತದೆ ಎಂದರು.

Advertisement

ಲಿಂಕ್‌ ಕಾಲುವೆ ಆದರೆ ಮಾತ್ರ ನೀರು ; ಹೇಮಾವತಿ ಪೈಪ್‌ ಲೈನ್‌ ಕಾಮಗಾರಿ ಅಪೂರ್ಣ; ರೈತರು ಸಹಕಾರ ಸಿಕ್ಕಿಲ್ಲದಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ ಭೂಸ್ವಾಧೀಣ ಕೆಲಸ ನಡೆದಿದೆ. ಎರಡನೇ ಹಂತದ ಪೈಪ್‌ ಲೈನ್‌ ರಸ್ತೆ ಬದಿಯೇ ತರಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಆರ್ಥಿಕ ಅನುಮೋಧನೆ ಕ್ಯಾಬಿನೆಟ್‌ನಲ್ಲಿ ಸಿಕ್ಕಿದೆ. ಲಿಂಕ್‌ ಕಾಲುವೆ ಆಗದ ‌ ಹೊರತು ಎಷ್ಟು ನೀರು ತಲುಪುತ್ತದೆ ಎಂಬುದು ಪ್ರಶ್ನೆಯಾಗಿದೆ.

ಸರ್ಕಾರ ಸಿಬ್ಬಂದಿ ಕೊರತೆ ತುಂಬಲಿ: ಸಾರ್ವಜನಿಕರ ಹಿತಾದೃಷ್ಟಿಯಿಂದ ವೈದ್ಯಕೀಯ ಸೇವೆ ಮತ್ತು ಪಶು ಆಸ್ಪತ್ರೆಗೆ ಸಿಬ್ಬಂದಿ ತೀರ ಅಗತ್ಯವಿದೆ. ಕೊರೆತೆ ಇರುವ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಈ ಸಂಬಂಧ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಸಂಸದ ಡಿ.ಕೆ.ಸುರೇಶ್‌ ವಿವರಿಸಿದರು. ಇದೇ ವೇಳೆ ವೀರೇಗೌಡನದೊಡ್ಡಿಯಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯ ಕಾಮಗಾರಿಗೆ ಸಂಸದ ಡಿ.ಕೆ.ಸುರೇಶ್‌ ಚಾಲನೆ ನೀಡಿದರು ಹಾಗೂ ತಗ್ಗೀಕುಪ್ಪೆ ಗ್ರಾಮದಲ್ಲಿ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಶಾಸಕ ಎ.ಮಂಜುನಾಥ್‌, ಜಿಪಂ ಅಧ್ಯಕ್ಷ ಎಚ್‌.ಎನ್‌.ಅಶೋಕ್‌, ದಿಶಾ ಕಮಿಟಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ತಾಪಂ ಅಧ್ಯಕ್ಷೆ ಸುಧಾ ವಿಜಯಕುಮಾರ್‌, ಸದಸ್ಯರಾದ ವೆಂಕಟೇಶ್‌, ಸುಮಾರಮೇಶ್‌, ಮಾಜಿ ಅಧ್ಯಕ್ಷ ನಾರಾಯಣಪ್ಪ, ಬಿ.ಟಿ.ವೆಂಕಟೇಶ್‌, ವಿಎಸ್‌

ಎಸ್‌ಎನ್‌ ಅಧ್ಯಕ ಎಸ್‌.ಕಾಂತರಾಜು, ಟಿಎಪಿಸಿಎಂಎಸ್‌ ನಿರ್ದೇಶಕ ಸಿ.ಬಿ.ರವೀಂದ್ರ, ಗ್ರಾಪಂ ಸದಸ್ಯ ಬೆಳಗವಾಡಿ ರಂಗನಾಥ್‌, ಕೋರಮಂಗಲ ಶ್ರೀನಿವಾಸ್‌, ಸೀಗೇಕುಪ್ಪೆ ಶಿವಣ್ಣ. ಲೋಕೇಶ್‌, ಬಸವರಾಜು, ದೀಪು, ಗ್ರಾಪಂ ಮಾಜಿ ಅಧ್ಯಕ ಮುಕುಂದ, ಕುಮಾರ್‌,ರಂಗಣ್ಣಿ, ಪಶು ಇಲಾಖೆ ಉಪನಿರ್ದೇಶಕ ರತ್ನಕರ್‌ ಮಲ್ಯ, ಸಹಾಯಕ ನಿರ್ದೇಶಕ ಡಾ.ಬಾಬುಗೌಡ, ಡಾ. ಭರಮಪ್ಪ, ಡಾ. ಚಂದ್ರಿಕಾ, ಎಲ್‌ಒಡಿ ಚಿಕ್ಕೇಹನುಮಯ್ಯಗೌಡ, ಶ್ರೀಧರ್‌, ತಾಪಂ ಇಒ ಟಿ.ಪ್ರದೀಪ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next