Advertisement
ದಾವೂದ್ ಆಸ್ತಿಯಾಗಿರುವುದರಿಂದ ಹರಾಜು ಕೂಗಲು ಹೆಚ್ಚಿನ ಜನರು ಮುಂದಾಗಲಿಲ್ಲ. ಕೇವಲ ಒಬ್ಬರು ಮಾತ್ರ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಆದರೆ ಆಶ್ಚರ್ಯಕರವಾಗಿ ಈ ಆಸ್ತಿಯನ್ನು ವಕೀಲರೊಬ್ಬರು ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿದ್ದಾರೆ. “ಗ್ರಾಮದಲ್ಲಿರುವ 170 ಚ.ಅಡಿಯ ಈ ಕೃಷಿ ಜಮೀನನ್ನು 2.01 ಕೋಟಿ ರೂ. ನೀಡಿ ಖರೀದಿಸಿದ್ದೇನೆ. ಸಂಖ್ಯಾಶಾಸ್ತ್ರದ ಪ್ರಕಾರ, ನಮ್ಮ ಜೋತಿಷಿ ಹೇಳಿದಂತೆ ಈ ಮೊತ್ತಕ್ಕೆ ನಾನು ಖರೀದಿ ಮಾಡಿದ್ದೇನೆ. ಭೂಪರಿವರ್ತನೆ ಆದ ಅನಂತರ ಇಲ್ಲಿ ಸನಾತನ ಶಾಲೆಯನ್ನು ನಿರ್ಮಿಸುತ್ತೇನೆ’ ಎಂದು ವಕೀಲ ಅಜಯ್ ಶ್ರೀವಾಸ್ತವ ಹೇಳಿದರು. ಈ ಹಿಂದಿನ ಹರಾಜಿನಲ್ಲಿ ಕೂಡ ದಾವೂದ್‌ಗೆ ಸೇರಿದ ಮೂರು ಆಸ್ತಿಗಳನ್ನು ಅಜಯ್ ಖರೀದಿಸಿದ್ದರು. Advertisement
ದಾವೂದ್‌ಗೆ ಸೇರಿದ 15 ಸಾವಿರ ಬೆಲೆ ಆಸ್ತಿ 2 ಕೋಟಿ ರೂ.ಗೆ ಖರೀದಿ!
12:31 AM Jan 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.