Advertisement
1860 ಶಾಲೆ ಆರಂಭಸ್ವತಂತ್ರ ಪೂರ್ವದಲ್ಲಿ ಸ್ಥಾಪಿತವಾದ ಶಾಲೆ
ಕೊಕ್ಕರ್ಣೆ ಸರಕಾರಿ ಶಾಲೆಯ ಹುಟ್ಟು ಯಾವಾಗ ಎನ್ನುವ ನಿಖರವಾದ ಮಾಹಿತಿ ದೊರೆತಿಲ್ಲ. ಆದರೆ ಸ್ವತಂತ್ರ ಪೂರ್ವದಿಂದಲೇ ಹಂತ ಹಂತವಾಗಿ ಬೆಳೆದು ಬಂದ ವಿದ್ಯಾ ದೇಗುಲವಾಗಿದೆ. ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ, ಶ್ರೇಷ್ಠ ಗುರು ಪರಂಪರೆ ಹೊಂದಿದ ಶಾಲೆ ಎನ್ನುವ ಕೀರ್ತಿ ಇದಕ್ಕಿದೆ. 1860ರ ಆಸುಪಾಸಿನಲ್ಲೇ ಇಲ್ಲಿ ಶಿಕ್ಷಣ ಕೇಂದ್ರ ಪ್ರಾರಂಭಗೊಂಡಿದೆ ಎನ್ನಲಾಗಿದೆ. ಮೊದಲ ಮುಖ್ಯೋಪಾಧ್ಯಾಯರ ಕುರಿತು ಸರಿಯಾದ ದಾಖಲೆಯಿಲ್ಲ. ಹಿರಿಯರ ಪ್ರಕಾರ ರಾಮರಾಯ ಕಿಣಿ ಅವರು ಪ್ರಾರಂಭದ ದಿನಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.
Related Articles
ಪ್ರಸ್ತುತ ಶಾಲೆಯಲ್ಲಿ 121 ವಿದ್ಯಾರ್ಥಿಗಳಿದ್ದು, 3 ಖಾಯಂ ಶಿಕ್ಷಕರು, ಮೂವರು ಸರಕಾರದಿಂದ ನಿಯೋಜಿಸಿದ ಅತಿಥಿ ಶಿಕ್ಷಕರು ಹಾಗೂ ಒಬ್ಬರು ಧರ್ಮಸ್ಥಳದ ವತಿಯಿಂದ ಜ್ಞಾನದೀಪ ಯೋಜನೆಯಡಿ ನೀಡಿದ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಪ್ರಶಸ್ತಿಗಳುಸ್ವಚ್ಛತೆಗೆ ಸಂಬಂಧ ಪಟ್ಟಂತೆ 2017-18ನೇ ಸಾಲಿನಲ್ಲಿ ರಾಜ್ಯ ಮಟ್ಟದ ಸ್ವತ್ಛ ವಿದ್ಯಾಲಯ ಪ್ರಶಸ್ತಿ, ಪರಿಸರಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಹಾಗೂ ಶಾಲಾ ಕೈ ತೋಟ ನಿರ್ವಹಣೆಗೆ 2017-18ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಕಿತ್ತಳೆ ಶಾಲೆ ಪ್ರಶಸ್ತಿ, 2018-19ರಲ್ಲಿ ಪರಿಸರ ಮಿತ್ರ ಹಳದಿ ಶಾಲೆ ಪ್ರಶಸ್ತಿ ಲಭಿಸಿದೆ. ಸಾಧಕ ಶಿಕ್ಷಕರು
2000ರಲ್ಲಿ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾ ಯರಾಗಿದ್ದ ಎನ್. ಕರುಣಾಕರ ಶೆಟ್ಟಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ ಹಾಗೂ ಇವರು ನುಕ್ಕೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ 2005-06ರಲ್ಲಿ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಪ್ರಭಾರ ಮುಖ್ಯ ಶಿಕ್ಷಕರಾಗಿರುವ ಭಾಸ್ಕರ್ ಪೂಜಾರಿ ಅವರಿಗೆ ಈ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತಿದೆ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆ ಜತೆಯಲ್ಲಿ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಹಪಠ್ಯ ಚಟುವಟಿಕೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗಳಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿರುತ್ತಾರೆ. ಯೋಗ, ಯಕ್ಷಗಾನ ತರಗತಿಗಳನ್ನು ನಡೆಸಲಾಗುತ್ತಿದೆ. ಶತಮಾ ನೋತ್ಸವ ವನ್ನು ಪೂರೈಸಿದ ಈ ಶಾಲೆ ಇಷ್ಟು ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ಈ ಶಾಲೆಯ ಹಳೆ ವಿದ್ಯಾರ್ಥಿಗಳ, ದಾನಿಗಳ, ಎಸ್.ಡಿ.ಎಂ.ಸಿ.ಯವರ, ಊರಿನವರ ಹಾಗೂ ಕರ್ತವ್ಯ ನಿರ್ವಹಿಸಿದ ಶಿಕ್ಷಕ ವೃಂದದವರ ಶ್ರಮ ಅಮೂಲ್ಯವಾಗಿದೆ. ಇನ್ನೂ ಈ ಶಾಲೆ ಉನ್ನತಿಯ ಹಾದಿಯಲ್ಲಿ ಸಾಗಲಿ ಎನ್ನುವುದೇ ನಮ್ಮ ಆಶಯ.
-ಭಾಸ್ಕರ್ ಪೂಜಾರಿ, ಪ್ರಭಾರ ಮುಖ್ಯ ಶಿಕ್ಷಕ ನಾವು ಕಲಿಯುವಾಗ ಶಿಕ್ಷಕರು ಅರ್ಪಣಾ ಭಾವದಿಂದ ಶಿಕ್ಷಣ ನೀಡಿದರ ಫಲವಾಗಿ ನಮ್ಮಂತ ಎಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು.
-ಡಾ| ಜಿ.ಪಿ. ಶೆಟ್ಟಿ, ಚೇರ್‌ವೆುನ್, ಮಲ್ಟಿಪ್ಲೆಕ್ಸ್ ಗ್ರೂಪ್ಸ್ ಆಫ್ ಕಂಪೆನಿ, ಬೆಂಗಳೂರು.