Advertisement

ನಗರ ಸೌಂದರ್ಯಕ್ಕೆ 1.50 ಕೋಟಿ ಅನುದಾನ ಬಿಡುಗಡೆ

10:45 AM Mar 03, 2018 | Team Udayavani |

ಜೇವರ್ಗಿ: ಪಟ್ಟಣದಲ್ಲಿ ಬೀದಿದೀಪ, ರಸ್ತೆ ವಿಭಜಕ ಹಾಗೂ ಸೌಂದರ್ಯಕ್ಕೆ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮದ ವತಿಯಿಂದ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಡಾ| ಅಜಯಸಿಂಗ್‌ ಹೇಳಿದರು.

Advertisement

ಪಟ್ಟಣದ ನರಿಬೋಳ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ವಿಜಯಪುರ ಕ್ರಾಸ್‌ನಿಂದ ನೂರಂದೇಶ್ವರ ಕಾಲೇಜುವರೆಗೆ 50 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಹಾಗೂ 1.50 ಕೋಟಿ ರೂ. ವೆಚ್ಚದ ಬೀದಿದೀಪ ಅಳವಡಿಕೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಜೇವರ್ಗಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಧರ್ಮಸಿಂಗ್‌ ಫೌಂಡೇಶನ್‌ ವತಿಯಿಂದ ರಸ್ತೆ ಮಧ್ಯದಲ್ಲಿ ಗಿಡ ನೆಡಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ, ಸಾಮೂಹಿಕ ಶೌಚಾಲಯ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಅನುದಾನ ನೀಡಿ ಕಾಮಗಾರಿಗೆ
ಈಗಾಗಲೇ ಚಾಲನೆ ನೀಡಲಾಗಿದ್ದು, ಗುಣಮಟ್ಟದ ಹಾಗೂ ಕಳಪೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಪುರಸಭೆ ಅಧ್ಯಕ್ಷೆ ಶರಣಮ್ಮ ಯಶವಂತ್ರಾಯ ಕೋಳಕೂರ, ಮುಖಂಡರಾದ ರಾಜಶೇಖರ ಸೀರಿ, ನೀಲಕಂಠ ಅವುಂಟಿ, ಗುರುಲಿಂಗಯ್ಯ ಯನಗುಂಟಿ, ರಹೇಮಾನ ಪಟೇಲ, ಕಾಶಿರಾಯಗೌಡ ಯಲಗೋಡ, ಮಹಿಮೂದ್‌ ನೂರಿ, ರೌಫ್‌ ಹವಾಲ್ದಾರ್‌, ರಾಯಪ್ಪ ಬಾರಿಗಿಡ, ಮಲ್ಲಯ್ಯ ಸುಬೇದಾರ, ರುಕುಂ ಪಟೇಲ್‌, ಸುದರ್ಶನ ಅಲಬಾಳ, ಸುರೆಂದ್ರ ವಕೀಲ, ಮರೆಪ್ಪ ಸರಡಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next