ಗಂಗಾವತಿ: ತೆಲಂಗಾಣ ರಾಜ್ಯದ ಶಾಸಕ ಬಿಜೆಪಿ ಮುಖ ರಾಜಸಿಂಗ್ ಲೋಧ ಕಿಷ್ಕಿಂಧಾ ಅಂಜನಾದ್ರಿಯ ಶ್ರೀ ಆಂಜನೇಯ ದೇವರ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಪ್ರಕಾರ ಹಿಂದುತ್ವವಾದಿ ತೆಲಂಗಾಣ ಶಾಸಕ ರಾಜಾ ಸಿಂಗ್ ಲೋದ ಯೋಧ ಅವರು ಇತ್ತೀಚಿಗೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಇವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಂದಿನಿಂದ ತೆಲಂಗಾಣ ರಾಜ್ಯದ ಲೋಧ ಅವರಿಗೆ ವೈ ಕೆಟಗರಿಯ ಭದ್ರತೆ ಒದಗಿಸಲಾಗಿದ್ದು ತೆಲಂಗಾಣ ರಾಜ್ಯದ ಎಡಿಜಿಪಿ ಅವರ ಮನವಿ ಮೇರೆಗೆ ಪೊಲೀಸ್ ಇಲಾಖೆಯವರು ಲೋಧಾ ಅವರಿಗೆ ವೈ ಕಟಗರಿಯ ಭದ್ರತೆ ಒದಗಿಸಿದರು.
ಮಂಗಳವಾರ ಲೋಧ ಅವರು ಹೊಸಪೇಟೆಗೆ ಆಗಮಿಸಿ, ಹೊಸಪೇಟೆಯಲ್ಲಿ ತಂಗಿ ಬುಧವಾರ ಬೆಳಗ್ಗೆ ಅಂಜನಾದ್ರಿ ಬೆಟ್ಟ ಹತ್ತಿ ದೇವರ ದರ್ಶನ ಪೂಜೆ ಮಾಡಿದ ನಂತರ ತನುಕು ಭೇಟಿ ನೀಡಿ ದರ್ಶನ ಪಡೆದರು. ಲೋಧಾ ಭೇಟಿ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಿಗ್ಗೆ ಮೂರು ತಾಸಿಗೂ ಹೆಚ್ಚು ಕಿಷ್ಕಿಂಧಾ ಅಂಜನಾದ್ರಿಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿತ್ತು.
ಕಂದಾಯ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.