Advertisement

26-11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿ ಗೆ 15 ವರ್ಷ ಜೈಲು ಶಿಕ್ಷೆ

04:45 PM Jan 08, 2021 | Team Udayavani |

ಲಾಹೋರ್: ಉಗ್ರ, 26-11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ ಲಾಹೋರ್ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಭಯೋತ್ಪಾದನಾ ಕಾರ್ಯಗಳಿಗೆ ಹಣಕಾಸಿನ ನೆರವು ನೀಡಿದ ಆಪಾದನೆಯ ಮೇಲೆ ಲಖ್ವಿಗೆ ಶಿಕ್ಷೆ ನೀಡಲಾಗಿದೆ.

Advertisement

ಲಷ್ಕರ್ ಎ ತೈಬಾದ ಆಪರೇಶನ್ಸ್ ಕಮಾಂಡರ್ ಆಗಿರುವ ಜಾಕೀರ್ ಲಖ್ವಿಯನ್ನು ಜ.2ರಂದು ಬಂಧಿಸಲಾಗಿತ್ತು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧವೂ ಇದೇ ಆರೋಪದಡಿ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.

ಮುಂಬೈ ಅಟ್ಯಾಕ್ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಲಖ್ವಿ 2015ರಲ್ಲಿ ಜಾಮೀನು ಪಡೆದಿದ್ದ. ದೇಶದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವ ಉಗ್ರರನ್ನು ಬಂಧಿಸಬೇಕೆಂದು ಅಂತಾರಾಷ್ಟ್ರೀಯ ಒತ್ತಡಗಳು ಹೆಚ್ಚಾದ ಹಿನ್ನಲೆಯಲ್ಲಿ ಜ.2ರಂದು ಪಂಜಾಬ್ ಪ್ಯಾಂತ್ಯದಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ:“ಸ್ವಾಭಿಮಾನಿ ರೈತ”: ರೈತರಿಗೆ ಗುರುತಿನ‌ ಚೀಟಿ ನೀಡಲು ಮುಂದಾದ ಸರ್ಕಾರ

2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next