Advertisement
ಪ್ರಗತಿಪರ ಕೃಷಿಕ ಕೋಟ ಮಣೂರಿನ ಜಯರಾಮ್ ಶೆಟ್ಟಿಯವರು ಸುಮಾರು 16ಟನ್ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಅವರದ್ದೂ ಲಾಕ್‌ಡೌನ್ ಸಮಸ್ಯೆ. ಮಾಹಿತಿ ಪತ್ರಿಕೆಯಲ್ಲಿ ಪ್ರಕಟವಾದ ಬಳಿಕ ಸುಮಾರು 50ಕ್ಕೂ ಹೆಚ್ಚು ಕರೆ ಬಂದಿದ್ದು, ಕೆಲವೇ ದಿನಗಳಲ್ಲಿ 15 ಟನ್ ಕಲ್ಲಂಗಡಿ ಹಣ್ಣು ಮಾರಾಟವಾಗಿದೆ.
ರೈತ ಬೇಸಾಯದಿಂದ ಹಿಂದೆ ಸರಿಯಲು ಪ್ರಮುಖ ಕಾರಣ ಮಾರುಕಟ್ಟೆ ಸಮಸ್ಯೆ. ಆದರೆ ಈ ಬಾರಿ ಉದಯವಾಣಿಯ ರೈತಸೇತು ಸಹಕಾರದಿಂದ ಸಂಕಷ್ಟ ಕಾಲದಲ್ಲೂ ಹೆಚ್ಚಿನ ದರ ಲಭಿಸಿದೆ. ಪ್ರತಿ ವರ್ಷ ಇದೇ ರೀತಿ ಮಾರುಕಟ್ಟೆ ಸಿಕ್ಕರೆ ಇನ್ನೂ 10 ಟನ್ ಕಲ್ಲಂಗಡಿ ಹೆಚ್ಚು ಬೆಳೆಯುವೆ ಎನ್ನುತ್ತಾರೆ ಜಯರಾಮ್ ಶೆಟ್ಟಿ.