Advertisement

ಕೋವಿಡ್-19 ಕುರಿತ ಸಂಶೋಧನೆಗೆ 15 ಪ್ರಾಜೆಕ್ಟ್ ಅಂತಿಮಗೊಳಿಸಿದ ಆರೋಗ್ಯ ವಿವಿ

01:52 PM Jun 23, 2020 | keerthan |

ಬೆಂಗಳೂರು: ಕೋವಿಡ್-19 ಕುರಿತ ಸಂಶೋಧನೆಗೆ 50 ಪ್ರಾಜೆಕ್ಟ್ ಬಂದಿದ್ದು, ಅದರಲ್ಲಿ 15 ಅಂತಿಮಗೊಳಿಸಿದ್ದು, ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಸಂಶೋಧನೆ ನಡೆಯಲಿದೆ ಎಂದು ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ವಿವಿಯ 22ನೇ ಘಟಿಕೋತ್ಸವ ಜೂನ್ 25ರಂದು ನಡೆಯಲಿದೆ. ಪಿಎಚ್ ಡಿ ಮತ್ತು ಚಿನ್ನದ ಪದಕ ಪಡೆಯುವವರು ಮಾತ್ರ ಭಾಗವಹಿಸುತ್ತಾರೆ. ಉಳಿದಂತೆ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ವರ್ಚುವಲ್ ವ್ಯವಸ್ಥೆ ಮೂಲಕ ಪಾಲ್ಗೊಳ್ಳಲಿದ್ದಾರೆ. ಕೋವಿಡ್-19 ಸುರಕ್ಷತಾ ಕ್ರಮದೊಂದಿಗೆ ಗರಿಷ್ಠ 200 ಜನ ಮೀರಂತೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಿದರು.

ಕೋವಿಡ್-19 ಸಂಶೋಧನೆಗೆ ಪ್ರಸ್ತಾವನೆ ಆಹ್ವಾನಿಸಿದ್ದೆವು. 50 ಪ್ರಸ್ತಾವನೆ ಬಂದಿದ್ದು, ಅದರಲ್ಲಿ 15 ಅಂತಿಮಗೊಳಿಸಿದ್ದೇವೆ. ಇದರಲ್ಲಿ ಪರಿಸರ ಸ್ನೇಹಿ ಗ್ರೀನ್ ಪಿಪಿಇ ಕಿಟ್ ಸಿದ್ಧಪಡಿಡುವ ಒಂದು ವಿಶೇಷ ಪ್ರಸ್ತಾವನೆ ಸೇರಿಕೊಂಡಿದೆ. ಅಲ್ಲದೆ, ವಿದ್ಯಾರ್ಥಿಗಳಿಗಾಗಿ ಐಡಿಯಾಥಾನ್ ಆಯೋಜಿಸಿದ್ದು, ಸೋಂಕು ತಡೆ ಕುರಿತ 200 ಹೊಸ ಐಡಿಯಾಗಳು ಬಂದಿದ್ದು, ಅದರಲ್ಲಿ 28 ಅಂತಿಮಗೊಳಿಸಿದ್ದೇವೆ ಎಂದರು.

ಈ ವರ್ಷ 36,434 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡುತ್ತಿದ್ದೇವೆ. ಒಟ್ಟಾರೆ ಶೇ.82.3ರಷ್ಟು ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಿದೆ. ಕೋವಿಡ್-19 ತಡೆ ಸಂಬಂಧ 100 ಕಾರ್ಯಕ್ರಮ ಮಾಡಿ, 2 ಲಕ್ಷ ವಾರಿಯರ್ಸ್ ಗೆ ತರಬೇತಿ ನೀಡಿದ್ದೇವೆ. ಜಿಲ್ಲಾವಾರು ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಿದ್ದೇವೆ. ವೈದ್ಯಕೀಯ ಪರೀಕ್ಷೆ ಸಂಬಂಧ ಜೂನ್ 30ರಂದು ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ನಂತರ ತೀರ್ಮಾನಿಸಲಿದ್ದೇವೆ ಎಂದರು.

ಮೌಲ್ಯಮಾಪನ ಕುಲಸಚಿವ ಡಾ. ಲಿಂಗೇಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next