Advertisement

ಚೆಕ್‌ಮೇಟ್‌ ಚೆಸ್‌: ಪರಿಹಾರ ನಿಧಿಗೆ 15 ಲಕ್ಷ ರೂ. ದೇಣಿಗೆ

10:26 AM May 09, 2020 | keerthan |

ಬೆಂಗಳೂರು: ಕರ್ನಾಟಕ ಸರ್ಕಾರದ ವತಿಯಿಂದ ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ ಹಾಗೂ ಮೊಬೈಲ್‌ ಪ್ರೀಮಿಯರ್‌ ಲೀಗ್‌ (ಎಂಪಿಎಲ್‌) ಸಹಯೋಗದಲ್ಲಿ ಇತ್ತೀಚೆಗೆ ನಡೆದಿದ್ದ ಚೆಕ್‌ಮೇಟ್‌ ಕೋವಿಡ್‌ ಚೆಸ್‌ ಕೂಟದಲ್ಲಿ ಸಂಗ್ರಹಗೊಂಡ 15 ಲಕ್ಷ ರೂ. ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.

Advertisement

ಆ್ಯಪ್‌ ಮೂಲಕ ನಡೆದ ಸ್ಪರ್ಧೆಯಲ್ಲಿ ಒಟ್ಟಾರೆ 19,245 ಆಟಗಾರರು ಭಾಗವಹಿಸಿದ್ದರು. ಚೆಸ್‌ ಗ್ರ್ಯಾನ್‌ ಮಾಸ್ಟರ್‌ ಅಂಕಿತ್‌ ರಾಜ್‌ ವಿಜೇತರಾಗಿ 1 ಲಕ್ಷ ರೂ. ನಗದು ಬಹುಮಾನ ಗೆದ್ದಿದ್ದಾರೆ.

ಗ್ರ್ಯಾನ್‌ಮಾಸ್ಟರ್‌ ಭಕ್ತಿ ಕುಲಕರ್ಣಿ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರೆ, 60 ವರ್ಷ ವಯೋಮಿತಿಯೊಳಗಿನ ಮಹಿಳಾ ವಿಭಾಗದಲ್ಲಿ ಶಕುಂತಲಾ ದೇವಿ ಮೊದಲ ಸ್ಥಾನಿಯಾದರು.

ಇಬ್ಬರೂ ಕ್ರಮವಾಗಿ 25 ಸಾವಿರ ರೂ. ನಗದು ಪ್ರಶಸ್ತಿ ಗೆದ್ದರು. ಕೂಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕ್ರೀಡಾ ಸಚಿವ ಸಿಟಿ.ರವಿ ಧನ್ಯವಾದಗಳನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next