Advertisement

ಆಗಷ್ಟ್ ನಲ್ಲಿ ಉದ್ಯೋಗ ಕಳೆದುಕೊಂಡ 15 ಲಕ್ಷ ಮಂದಿ ಭಾರತೀಯರು.! : ಸಿಎಂಐಇ ಹೇಳಿದ್ದೇನು.?

11:58 AM Sep 04, 2021 | Team Udayavani |

ನವ ದೆಹಲಿ : ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳನ್ನು ಒಳಗೊಂಡು ಭಾರತದಲ್ಲಿ ಕಳೆದ ತಿಂಗಳಿನಲ್ಲಿ (ಆಗಷ್ಟ್ ) ದೇಶದಾದ್ಯಂತ 15 ಲಕ್ಷ ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)  ಮಾಹಿತಿ ನೀಡಿದೆ.

Advertisement

ಜುಲೈ ತಿಂಗಳಿನಲ್ಲಿ ಶೇಕಡಾ. 6.95 ರಷ್ಟಿದ್ದ ರಾಷ್ಟ್ರೀಯ ನಿರುದ್ಯೋಗ ದರವು ಆಗಷ್ಟ್ ತಿಂಗಳಲ್ಲಿ ಶೇಕಡಾ 8. 32 ಕ್ಕೆ ಹೆಚ್ಚಳವಾಗಿದೆ. ಜುಲೈ ತಿಂಗಳಿನಲ್ಲಿ 39.93 ಕೋಟಿಯಷ್ಟು ಇದ್ದ ಉದ್ಯೋಗಿಗಳ ಸಮಸ್ಯೆ ಆಗಷ್ಟ್ ತಿಂಗಳಿನಲ್ಲಿ 39.77 ಕೋಟಿ ಆಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ :  ಪಂಜ್ ಶೀರ್ ತಾಲಿಬಾನ್ ಗೆ : ಮನ ಬಂದಂತೆ ಗುಂಡು ಹಾರಿಸಿ ಸಂಭ್ರಮ : ಹಲವರು ಗಂಭೀರ ಗಾಯ.!

ಗ್ರಾಮೀಣ ಭಾರತದಲ್ಲಿ ಸುಮಾರು 13 ಲಕ್ಷ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೆ ಏರಿದೆ. ಮಾತ್ರವಲ್ಲದ, ನಗರ ಪ್ರದೇಶಗಳಲ್ಲಿ ಜುಲೈ ತಿಂಗಳಲ್ಲಿ ನಿರುದ್ಯೋಗ ದರ ಶೇಕಡಾ 8.3 ರಷ್ಟಿದ್ದಿತ್ತು, ಆದರೇ, ಆಗಷ್ಟ್ ಮುಗಿಯುವುದರೊಳಗೆ ಅದು ಶೇಕಡಾ 9.78 ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

ಇನ್ನು, ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ಇದೇ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ‘ಸ್ನೇಹಿತರಿಗೆ ಸಂಬಂಧವಲ್ಲದ’ ವ್ಯಾಪಾರ ಅಥವಾ ಉದ್ಯೋಗವನ್ನು ಕೇಂದ್ರ ಸರ್ಕಾರ ಉತ್ತೇಜಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ. ಆತ್ಮ ನಿರ್ಭರದ ನೆಪದಲ್ಲಿ ದೇಶವಾಸಿಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದಿದ್ದಲ್ಲದೇ, ಆಗಸ್ಟ್‌ ನಲ್ಲಿ 15 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಸೆಂಟರ್ ಫಾರ್‌ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (ಸಿಎಂಐಇ) ದತ್ತಾಂಶ ಆಧರಿಸಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಪ್ರಕಟಿಸಿರುವ ವರದಿಯ ತುಣುಕೊಂದನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು. ಮಾತ್ರವಲ್ಲದೇ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗಕ್ಕೆ ಮಾರಕ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

Advertisement

ಇದನ್ನೂ ಓದಿ :  ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಲು ನಿಯಮ ಜಾರಿ: ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next