Advertisement
ಮಂಗಳೂರು ದಸರಾ ಈಗ ರಾಜ್ಯಾದ್ಯಂತ ಜನಾಕರ್ಷಣೆ ಪಡೆದಿದೆ. ಸಾವಿರಾರು ಭಕ್ತರ ಜತೆಗೆ ಪ್ರವಾಸಿಗರೂ ರಾಜ್ಯದ ವಿವಿಧೆಡೆಯಿಂದ ಇಲ್ಲಿ ಸೇರುವುದರಿಂದ ಪ್ರವಾಸೋದ್ಯಮಕ್ಕೂ ಪೂರಕವಾಗಿದೆ. ಹಿಂದೆಲ್ಲ ಖಾಸಗಿಯವರು ಇಲ್ಲವೇ ದೇವಸ್ಥಾನಗಳ ಮೂಲಕ ದೀಪಾಲಂಕಾರ ಮಾಡುತ್ತಿದ್ದರೆ ಕೆಲವು ವರ್ಷಗಳಿಂದ ಮಹಾನಗರ ಪಾಲಿಕೆಯೇ ಪ್ರಮುಖ ಕಟ್ಟಡ ಮತ್ತು ರಸ್ತೆಗಳನ್ನು ಅಲಂಕರಿಸುತ್ತಿದೆ.
Related Articles
Advertisement
ಪಾಲಿಕೆಯಿಂದಲೇ 11.50 ಲಕ್ಷ ಬಲ್ಬ್ ಈ ಬಾರಿ ನಗರದಲ್ಲಿ ಮಹಾನಗರ ಪಾಲಿಕೆಯಿಂದಲೇ ಒಟ್ಟು 11.50 ಲಕ್ಷ ಬಲ್ಬ್ಗಳನ್ನು ಅಳವಡಿಸಲಾಗಿದೆ. ಸಂಜೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುತ್ತದೆ. ಈ ಬಾರಿ ಕೆಲವೊಂದು ದೇವಸ್ಥಾನಗಳು, ನಗರದ ವೃತ್ತಗಳಿಗೂ ಪಾಲಿಕೆಯಿಂದಲೇ ವಿದ್ಯುತ್ ದೀಪಾಲಂಕಾರಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಅವರು ತಿಳಿಸಿದ್ದಾರೆ. ಸರಕಾರಿ-ಖಾಸಗಿ ಕಟ್ಟಡಗಳೂ ಸುಂದರ
ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದ್ದರೆ, ನಗರದ ಹಲವು ಖಾಸಗಿ, ಸರಕಾರಿ ಕಟ್ಟಡಗಳಲ್ಲಿಯೂ ದೀಪಾಲಂಕಾರ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ, ಸುರತ್ಕಲ್, ಕದ್ರಿಯ ಪಾಲಿಕೆ ವಲಯ ಕಚೇರಿ, ಕುದು¾ಲ್ ರಂಗರಾವ್ ಪುರಭವನದಲ್ಲಿ ವಿದ್ಯುತ್ ಬಲ್ಬ್ ಅಳವಡಿಸಲಾಗಿದೆ. ಅದೇ ರೀತಿ, ನಗರದ ಹೊಟೇಲ್ಗಳು, ಜವುಳಿ ಅಂಗಡಿ ಸಹಿತ ಖಾಸಗಿ ಕಟ್ಟಡಗಳು ಬೆಳಕಿನ ಅಲಂಕಾರದಿಂದ ಗಮನಸೆಳೆಯುತ್ತಿದೆ. ಅದೇ ರೀತಿ, ಖಾಸಗಿಯಾಗಿಯೂ ನಗರದ ಅನೇಕ ಕಡೆಗಳಲ್ಲಿ ದೇವರ ಆಕರ್ಷಕ ಪೋಸ್ಟರ್ಗಳನ್ನು ಅಳವಡಿಸಲಾಗಿದ್ದು, ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕುದ್ರೋಳಿಯಲ್ಲಿ ಲಕ್ಷ ಬಲ್ಬ್ ಬಳಕೆ
ಸಂಜೆಯಾಗುತ್ತಿದ್ದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವಿದ್ಯುದ್ಧೀಪಾಲಂಕಾರದಿಂದ ಗಮನ ಸೆಳೆಯುತ್ತದೆ. ಕ್ಷೇತ್ರದ ಸ್ವಾಗತ ಗೋಪುರದಿಂದ ಆರಂಭವಾಗಿ, ದೇವಾಲಯದ ಒಳ ಭಾಗ, ರಾಜಾಂಗಣದಲ್ಲಿ ಸುಮಾರು ಒಂದೂವರೆ ಲಕ್ಷ ಬಲ್ಬ್ಗಳನ್ನು ಬಳಕೆ ಮಾಡಲಾಗಿದೆ. ಅದರಲ್ಲೂ ವಾರ್ಮ್ ವೈಟ್ ಬಲ್ಬ್ ಆಕರ್ಷಣೆ ಪಡೆದಿದೆ. ಇಲ್ಲಿ ಎಲ್ಇಡಿ ಬಲ್ಬ್ ಮತ್ತು 15 ವಾಲ್ಟ್ ಬಲ್ಬ್ ಗಳನ್ನು ಬಳಕೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ಮಧ್ಯರಾತ್ರಿ 12 ಗಂಟೆಯವರೆಗೆ ಕುದ್ರೋಳಿ ಕ್ಷೇತ್ರದಲ್ಲಿ ಬಲ್ಬ್ಗಳಿಂದ ಜಗಮಗಿಸುತ್ತದೆ. ಬಲ್ಬ್ ಅಳವಡಿಸುವ ಕೆಲಸ ಗಣೇಶ ಚೌತಿಯ ದಿನದಿಂದ ಆರಂಭ ಮಾಡಲಾಗಿದ್ದು, 14 ಮಂದಿ ಕೆಲಸಗಾರರು ಜೋಡಣೆ ಕೆಲಸದಲ್ಲಿ ನಿರತರಾಗಿದ್ದರು. ಬೆಳಕಿನ ಚಿತ್ತಾರ
ಮಹಾನಗರ ಪಾಲಿಕೆಯ ವತಿಯಿಂದ 11.5 ಲಕ್ಷ, ಕುದ್ರೋಳಿ ದೇವಸ್ಥಾನ ದಿಂದ ಸುಮಾರು ಒಂದುವರೆ ಲಕ್ಷ ಬಲ್ಬ್ ಬಳಕೆಯಾಗಿದೆ. ಮಹಾ ನಗರ ಪಾಲಿಕೆ ಬೆಳಗಿಸಿದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದ ಒಳರಸ್ತೆಗಳು, ಹಲ ವಾರು ದೇವಸ್ಥಾನಗಳು, ಖಾಸಗಿ ಕಟ್ಟಡಗಳ ಅಲಂಕಾರ ನೋಡಿದರೆ 15 ಲಕ್ಷಕ್ಕೂ ಹೆಚ್ಚು ಬಲ್ಬ್ ಗಳ ಬಳಕೆ ಆಗಿರಬಹುದು ಎಂದು ಅಂದಾಜಿಸಲಾಗಿದೆ. -ನವೀನ್ ಭಟ್ ಇಳಂತಿಲ