Advertisement

1.5 ಕಿ.ಮೀ. ಗಾಯಾಳು ಹೊತ್ತೂಯ್ದ ಪೇದೆ

12:30 AM Feb 24, 2019 | Team Udayavani |

ಹೋಶನ್‌ಬಾಗ್‌ (ಮಧ್ಯಪ್ರದೇಶ): ಚಲಿಸುತ್ತಿದ್ದ ರೈಲಿನಿಂದ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬನ ಪ್ರಾಣ ರಕ್ಷಿಸಲು ಪೊಲೀಸ್‌ ಪೇದೆಯೊಬ್ಬರು ಆತನನ್ನು ಹೆಗಲ ಮೇಲೆ ಹೊತ್ತು ಒಂದೂವರೆ ಕಿ.ಮೀ. ದೂರ ಚಲಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

Advertisement

ಸಿಯೋನಿ ಮಾಳ್ವಾ ಪ್ರಾಂತ್ಯದ ರಾವಣ್‌ ಪಿಪಾಲ್ಗಾಂವ್‌ ಎಂಬಲ್ಲಿ ನಡೆದ ಈ ಅಪಘಾತದಲ್ಲಿ ಅಜಿತ್‌ (20) ಎಂಬಾತ ಅಕಸ್ಮಾತ್ತಾಗಿ ಬಿದ್ದು  ಗಂಭೀರ ಗಾಯಗೊಂಡಿದ್ದ.  ಯುವಕ ಬಿದ್ದಿದ್ದ ಸ್ಥಳದ ಸುತ್ತ ಮುಳ್ಳಿನ ಗಿಡಗಳಿದ್ದರಿಂದ ಪೊಲೀಸ್‌ ಜೀಪು ಹೋಗಲಾಗಲಿಲ್ಲ. ಹಾಗಾಗಿ, ಯುವಕನನ್ನು ಹೊತ್ತು ಒಂದೂವರೆ ಕಿ.ಮೀ. ನಡೆದು ಜೀಪಿನಲ್ಲಿ ಹಾಕಿದ ಪೇದೆ ಆನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next