Advertisement

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

07:07 PM May 02, 2024 | Team Udayavani |

ಬಂಟ್ವಾಳ: ರಾ.ಹೆ.75ರ ಫರಂಗಿಪೇಟೆಯಲ್ಲಿ ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕೊಂದು ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ಮೇ 1ರಂದು ನಡೆದಿದೆ.

Advertisement

ಪುದು ಗ್ರಾಮ ನಿವಾಸಿ ಶೇಖಬ್ಬ ಗಾಯಗೊಂಡವರು. ಅವರು ಮೇ 1ರಂದು ಮಧ್ಯಾಹ್ನ ಫರಂಗಿಪೇಟೆಯಲ್ಲಿ ಹೆದ್ದಾರಿ ಬದಿ ಬಸ್ಸಿಗೆ ಕಾಯುತ್ತಿದ್ದಾಗ ಸವಾರ ಅಕ್ಷಯ್‌ ನಾಯ್ಕ ಬೈಕನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಶೇಖಬ್ಬರಿಗೆ ಢಿಕ್ಕಿ ಹೊಡೆದಿದ್ದಾನೆ.

ಘಟನೆಯಲ್ಲಿ ಅವರು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next