Advertisement

ಚಿತ್ರರಂಗದ 15 ಸಾಧಕರಿಗೆ ಪ್ರಶಸ್ತಿ ಪ್ರದಾನ

12:33 PM Mar 04, 2017 | Team Udayavani |

ಬೆಂಗಳೂರು: ಮೈಸೂರಿನಲ್ಲಿ ಚಲನಚಿತ್ರ ನಗರಿ ನಿರ್ಮಾಣ ಮತ್ತು ಬಡ ಕಲಾವಿದರಿಗೆ ಕಡಿಮೆ ವೆಚ್ಚದಲ್ಲಿ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ವಸತಿ ಸಚಿವ ಎಂ. ಕೃಷ್ಣಪ್ಪಭರವಸೆ ನೀಡಿದರು.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ ಸಹಯೋಗದಲ್ಲಿ ಕನ್ನಡ ಮೊದಲ ವಾಕಿcತ್ರ ಆರಂಭಗೊಂಡ 84ನೇ ವರ್ಷಾ ಚರಣೆ ಅಂಗವಾಗಿ ಕನ್ನಡ ಚಲನಚಿತ್ರ ರಂಗದ 15 ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸಿನಿಮಾ ಕಲಾವಿದರು ನಮ್ಮ ಸಂಸ್ಕೃತಿಯ ರಾಯಭಾರಿಗಳು. ಹಿರಿಯ ಕಲಾವಿದರ ಅಭಿನಯ ನೋಡಿಕೊಂಡೇ ನಾವೆಲ್ಲರೂ ಬೆಳೆದಿದ್ದೇವೆ.

ಅವರ ಬೇಡಿಕೆ  ಈಡೇರಿಸಲಾಗುವುದು ಎಂದರು.ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು,  ಪರಭಾಷಾ ಚಿತ್ರಗಳ ಹಾವಳಿಯಲ್ಲೂ ಕನ್ನಡ ಚಿತ್ರರಂಗ ಯಶಸ್ವಿಯಾಗಿ ಮುನ್ನುಗುತ್ತಿದೆ. ಚಿತ್ರರಂಗಕ್ಕೆ ಹಿಂದಿನವರು ಸಲ್ಲಿಸಿರುವ ಕೊಡುಗೆ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಹಿರಿಯ ನಟಿ ಜಯಮಾಲಾ, ಚಿತ್ರೋದ್ಯಮ ದಲ್ಲಿ ಹೆಸರಿಲ್ಲದಂತೆ, ಸೂರಿಲ್ಲದಂತೆ ಹೋಗು ವವರು ತುಂಬಾ ಜನರಿದ್ದಾರೆ. ಅವರಿಗೆ ಕಡಿಮೆ ದರದಲ್ಲಿ ಸೂರು ನೀಡಲು ಸರ್ಕಾರ ಮನಸ್ಸು ಮಾಡಬೇಕು ಎಂದರು. ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಇದ್ದರು.

ಪ್ರಶಸ್ತಿ ಪುರಸ್ಕೃತರು: ನಟ ಜೆ.ಕೆ.ಶ್ರೀನಿವಾಸಮೂರ್ತಿ (ಆರ್‌.ನಾಗೇಂದ್ರರಾವ್‌ ಪ್ರಶಸ್ತಿ), ಅದವಾನಿ ಲಕ್ಷ್ಮೀದೇವಿ (ಎಂ.ವಿ. ರಾಜಮ್ಮ ಪ್ರಶಸ್ತಿ), ಎಂ.ಎಸ್‌.ಉಮೇಶ್‌ (ಟಿ.ಎನ್‌.ಬಾಲಕೃಷ್ಣ  ಪ್ರಶಸ್ತಿ), ಎಸ್‌. ದೊಡ್ಡಣ್ಣ (ತೂಗುದೀಪ ಶ್ರೀನಿವಾಸ್‌ ಪ್ರಶಸ್ತಿ), ಕೆ.ವಿ.ರಾಜು (ಬಿ.ಆರ್‌.ಪಂತುಲು ಪ್ರಶಸ್ತಿ), ಸಿ.ಜಯರಾಂ (ಡಿ.ಶಂಕರ್‌ಸಿಂಗ್‌ ಪ್ರಶಸ್ತಿ), ಕುಮಾರ್‌ ಶೆಟ್ಟರ್‌ (ಬಿ.ಜಯಮ್ಮ ಪ್ರಶಸ್ತಿ),

Advertisement

ಪಾಲ್‌ ಎಸ್‌.ಚಂದಾನಿ (ಎನ್‌.ವೀರಸ್ವಾಮಿ ಪ್ರಶಸ್ತಿ), ಬಿ.ಕೆ.ಸುಮಿತ್ರಾ (ಜಿ.ವಿ.ಅಯ್ಯರ್‌ ಪ್ರಶಸ್ತಿ), ಡಾ.ಬಿ.ಎಲ್‌.ವೇಣು (ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ), ಎಸ್‌.ವಿ.ಶ್ರೀಕಾಂತ್‌ (ಬಿ.ಎಸ್‌.ರಂಗ ಪ್ರಶಸ್ತಿ), ಬಿ.ವಿ.ರಾಧಾ (ಪಂಡರೀಬಾಯಿ ಪ್ರಶಸ್ತಿ), ದೇವಿ (ಎಂ.ಪಿ.ಶಂಕರ್‌ ಪ್ರಶಸ್ತಿ), ಎನ್‌.ಎಲ್‌.ರಾಮಣ್ಣ (ಶಂಕರ್‌ನಾಗ್‌ ಪ್ರಶಸ್ತಿ), ರಾಮ್‌ಶೆಟ್ಟಿ (ಕೆ.ಎನ್‌.ಟೈಲರ್‌ ಪ್ರಶಸ್ತಿ) ಅವರನ್ನು ಗೌರವಿಸಲಾಯಿತು.

ಡಬ್ಬಿಂಗ್‌ ಎಂಬ ಸಂಸ್ಕೃತಿ ಕನ್ನಡ ಚಿತ್ರರಂಗ ಹಾಳು ಮಾಡಿದೆ. ನಮ್ಮಲ್ಲಿಯೇ ಡಬ್ಬಿಂಗ್‌ ಸಿನಿಮಾ ಮಾಡಿ ಪ್ರದರ್ಶಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಕರಣವು ನ್ಯಾಯಾಲಯದಲ್ಲಿದ್ದು ನಾನು ಇದರ ಬಗ್ಗೆ ಮಾತನಾಡುವುದಿಲ್ಲ. ನಾಡಿನ ಜನರು, ಡಬ್ಬಿಂಗ್‌ ಚಿತ್ರದ ವಿರುದ್ಧ ಹೋರಾಟ ನಡೆಸುತ್ತಿದ್ದು, ಅದಕ್ಕೆ ನಮ್ಮ ಬೆಂಬಲವಿದೆ.
-ಸಾ.ರಾ. ಗೋವಿಂದು, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next