Advertisement
ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಕಡೆ ಸ್ವೀಕರಿಸಿ ಬಗೆಹರಿಸುವುದು ಈ ಕಾಲ್‌ಸೆಂಟರ್‌ನ ಉದ್ದೇಶ. ಆದರೆ, ಮಹತ್ವಾಕಾಂಕ್ಷಿ ಉದ್ದೇಶದ ಅನುಷ್ಠಾನದಲ್ಲಿಯೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೇಯರ್ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
Related Articles
Advertisement
ಕಾಲ್‌ಸೆಂಟರ್ ಕಾರ್ಯನಿರ್ವಹಣೆಗೆ ಹೇಗೆ?: ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಡಿಎ ಹೀಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸದ್ಯ ಜನರು ಆಯಾ ಇಲಾಖೆಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಆದರೆ, ಪಾಲಿಕೆ ಕಾಲ್ ಸೆಂಟರ್ ಆರಂಭವಾದರೆ, ನಾಗರಿಕರ ದೂರುಗಳನ್ನು ಒಂದೇ ಕಡೆ ಆಲಿಸಿ, ಪರಿಹಾರ ಒದಗಿಸಲಾಗುತ್ತದೆ.
ನಿರ್ವಹಣಾ ಕೊಠಡಿಗಳು ರದ್ದು!?: ಕಾಲ್ ಸೆಂಟರ್ ಕಾರ್ಯಾರಂಭದ ನಂತರ ಪಾಲಿಕೆಯ 8 ವಲಯಗಳಲ್ಲಿನ ನಿರ್ವಹಣಾ ಕೊಠಡಿಗಳು ರದ್ದಾಗಲಿವೆ. ಪಾಲಿಕೆಯ ಎಲ್ಲ 198 ವಾರ್ಡ್‌ಗಳ ಸಮಸ್ಯೆಗಳನ್ನು ಹೊಸ ಕಾಲ್‌ಸೆಂಟರ್‌ನಿಂದಲೇ ಆಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಕಾಲ್‌ಸೆಂಟರ್ ಶೀಘ್ರ ಆರಂಭವಾಗುವುದರಿಂದ ಮಳೆಗಾಲದಲ್ಲಿ ಎದುರಾಗುವ ಅನಾಹುತಗಳನ್ನು ನಿಭಾಯಿಸುವುದು ಸುಲಭವಾಗಲಿದೆ. ಈಗಾಗಲೇ ಎರಡು ಭಾರಿ ಕಾಲ್‌ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. 15 ದಿನಗಳೊಳಗೆ ಕಾಲ್‌ಸೆಂಟರ್ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. – ಜಿ.ಪದ್ಮಾವತಿ, ಮೇಯರ್ ಉದಯವಾಣಿ ವರದಿ ಮಾಡಿತ್ತು!: ಬಿಬಿಎಂಪಿಯ ಉದ್ದೇಶಿತ ಕಾಲ್‌ಸೆಂಟರ್ ಸ್ಥಾಪನೆ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ “ಉದಯವಾಣಿ’ ಜೂನ್ 1ರಂದು “ವರ್ಷವಾದರೂ ಸೇವೆಗೆ ಸಿಗದ ಕಾಲ್ ಸೆಂಟರ್’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್ ಪದ್ಮಾವತಿ ಅವರು ಎರಡು ಬಾರಿ ಕಾಲ್‌ಸೆಂಟರ್ ಪರಿಶೀಲನೆ ನಡೆಸಿ, 15 ದಿನಗಳೊಳಗೆ ಕಾರ್ಯಾರಂಭ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.