ಭಿಲ್ವಾರ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿಯಲ್ಲಿ 15 ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ರಾಜಸ್ಥಾನದ ಭಿಲ್ವಾರ ಜಲ್ಲೆಯ ಮಂಡಲಗಢ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮೇಕೆ ಕದ್ದ ಆರೋಪದಲ್ಲಿ ಯುವಕನ ಮೇಲೆ ಜನರ ಗುಂಪು ಹಲ್ಲೆ ನಡೆಸಿದೆ.
ಇದನ್ನೂ ಓದಿ:ಕೈ ನಾಯಕತ್ವದಲ್ಲಿ ಭಾರೀ ಬದಲಾವಣೆ? ಮಲ್ಲಿಕಾರ್ಜುನ ಖರ್ಗೆಗೆ ಪ್ರಮುಖ ಸ್ಥಾನ?
ಮೇಕೆ ಕದಿಯುತ್ತಿದ್ದ ಆರೋಪದ ಮೇಲೆ ದಲಿತ ಯುವಕನನ್ನು ಮಂಡಲಗಢ್ ಪ್ರದೇಶದಲ್ಲಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಲಾಗಿದೆ. ಆರಂಭದಲ್ಲಿ ಯುವಕನನ್ನು ಕೆಲವು ಗ್ರಾಮಸ್ಥರು ಚೌರಾಹಾ (ಅಡ್ಡರಸ್ತೆ) ಯಲ್ಲಿ ಥಳಿಸಿದರು. ನಂತರ, ಜನರ ಗುಂಪು ಯುವಕನನ್ನು ಮರಕ್ಕೆ ಕಟ್ಟಿ ಮತ್ತೊಮ್ಮೆ ಕೋಲುಗಳಿಂದ ಹೊಡೆದರು.
ಜನರ ಹೊಡೆತಕ್ಕೆ ಯುವಕ ನೋವಿನಿಂದ ಕೂಗುತ್ತಿರುವುದು, ಮತ್ತು ತಾನು ಮೇಕೆ ಕದ್ದಿಲ್ಲ ಎಂದು ಪದೇ ಪದೇ ಹೇಳುವುದನ್ನು ವೀಡಿಯೊದಲ್ಲಿ ದಾಖಲಾಗಿದೆ.