Advertisement

14 ಮಾದರಿ ಅಂಗನವಾಡಿ ಕೇಂದ್ರ

04:10 PM Oct 17, 2020 | Suhan S |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಅಂಗನ ವಾಡಿ ಕೇಂದ್ರಗಳು ವರ್ಣರಂಜಿತ ಬಣ್ಣದ ಗೋಡೆಗಳು, ಕೊಠಡಿಗಳ ನಾಲ್ಕು ಗೋಡೆಗಳಮೇಲೆ ವಿವಿಧ ಆಕರ್ಷಕಕಲಾಕೃತಿ ಬರವಣಿಗೆ ಹಾಗೂ ಅಂಕಿಗಳಿಂದ ಅಲಂಕೃತಗೊಂಡು ಚಿಣ್ಣರನ್ನುಕೈಬೀಸಿ ಕರೆಯುತ್ತಿವೆ.

Advertisement

ಇತ್ತೀಚಿನ ದಿನ‌ಗ‌ಳಲ್ಲಿ ಪಾಲಕರು ಮಕ್ಕಳಿಗೆ ವೈಭವಪೂರಿತ  ‌ಲಿಕೆ ನೀಡುವ ‌ ಭಾವನೆಗಳು ಹೆಚ್ಚಾಗಿದ್ದು, ಖಾಸಗಿ ಆಂಗ ಮಾಧ್ಯಮದಚಿಲ್ಡ್ರನ್ಸ್‌ ಪ್ಲೇ ಹೋಂ, ಕಿಡ್ಸ್ ಶಾಲೆಗಳಿಗೆ ಮೊರೆಹೋಗುತ್ತಿದ್ದಾರೆ. ಖಾಸಗಿ ಕಿಡ್ಸ್‌ ಸೆಂಟರ್‌ಗಳಿಗೆ ಸೆಡ್ಡು ಹೊಡೆಯುವನಿಟ್ಟಿನಲ್ಲಿ ತಾಲೂಕಿನ 14 ಅಂಗ ‌ನವಾಡಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ಸಿಂಗಾರಗೊಳಿಸಿದ್ದಾರೆ.

381 ಮಂಜೂರು: ತಾಲೂಕಿನಾದ್ಯಂತ 381 ಅಂಗನವಾಡಿಕೇಂದ್ರಗಳುಮಂಜೂರಾಗಿದ್ದು, 178 ಕೇಂದ್ರಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಉಳಿದಂತೆ 14 ಕೇಂದ್ರಗಳು ಗ್ರಾಪಂ ಕಟ್ಟಡಗಳಲ್ಲಿ, 10 ಸಮುದಾಯ ಭವನಗಳಲ್ಲಿ, 51 ಸರ್ಕಾರಿ ಶಾಲೆಯ ಕಟ್ಟಡಗಳಲ್ಲಿ, ನಗರ ಪ್ರದೇಶದಲ್ಲಿ 25 ಕೇಂದ್ರಗಳಿದ್ದು ನಿವೇಶನ ರಹಿತ ಬಾಡಿಗೆ ಕಟ್ಟಡಗಳಲ್ಲಿ ನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ 25 ಕೇಂದ್ರಗಳನ್ನು ಬಾಡಿಗೆ ಕಟ್ಟಡದಲ್ಲಿ, 52 ಕೇಂದ್ರಗಳನ್ನು ನಿವೇಶ ರಹಿತ ಕಟ್ಟಡಗಳಲ್ಲಿ ನಿರ್ವಹಿಸುತ್ತಿವೆ. ಮತ್ತೆ ಕೆಲ ಅಂಗನವಾಡಿ ಕೇಂದ್ರಗಳು ಎಲ್ಲಿ ಸರ್ಕಾರಿ ಇಲಾಖೆಯ ಕೊಠಡಿಗಳಿದ್ದರೆ ಅಲ್ಲಿ ನಿರ್ವಹಿಸಲಾಗುತ್ತದೆ.

ಮಾದರಿ ಅಂಗನವಾಡಿ ಕೇಂದ್ರಗಳ ವೈಶಿಷ್ಟ್ಯ: ಮಳೆ ನೀರು ಕೊಯ್ಲು, ಬಾಲ ಗ್ರಂಥಾಲಯ, ಗೋಡೆ ಗಡಿಯಾರ, ಸಮರ್ಪಕ ‌ ವಿದ್ಯುತ್‌,ಕೈ ತೋಟ, ಸಮವಸ್ತ್ರ, ಒಳಾಂಗಣ, ಹೊರಾಂಗಣ, ನೆಲ ಕಲಾಕೃತಿಗಳು, ಆಕರ್ಷಿತ ‌ ಬಣ್ಣದ ‌  ಶೌಚಾಲಯ, ವಿವಿಧ ಬಗೆಯ ಆಟದ ‌ ಸಾಮಗ್ರಿಗಳು ಇರುತ್ತವೆ.

ಕೇಂದ್ರಗಳ ವಿವರ: ತಾಲೂಕಿನ ಹೊಸಕೋಟೆ, ಆದಿಗಾನಹಳ್ಳಿ,ಮಿಟ್ಟವಾಂಡಪಲ್ಲಿ,ಕಮ್ಮರವಾರ ಪಲ್ಲಿ, ದೇವರಗುಡಿಪಲ್ಲಿ, ಗೂಳೂರು, ದುಗ್ಗಿನಾ ಯಕನಹಳ್ಳಿ, ಗುವ್ವಲವಾರಪಲ್ಲಿ, ಮಾರಗಾನುಕುಂಟೆ, ಶ್ರೀನಿವಾಸಪುರ, ಕಾನಗಮಾಕಲಪಲ್ಲಿ, ಬಿಳ್ಳೂರು,ಕಾರಕೂರು, ಮಿಟ್ಟೇಮರಿ ಗ್ರಾಮ.

Advertisement

16,461 ಮಕ್ಕಳು ಅಂಗನವಾಡಿಗಳಲ್ಲಿ ವ್ಯಾಸಂಗ : ತಾಲೂಕಿನಾದ್ಯಂತ16,461 ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿದ್ದು,6 ತಿಂಗಳಿನಿಂದ 1 ವರ್ಷದೊಳಗೆ1,846 ಮಕ್ಕಳು,1 ರಿಂದ 2 ವರ್ಷದೊಳಗೆ2,934 ಮಕ್ಕಳು,2 ವರ್ಷದಿಂದ3 ವರ್ಷದೊಳಗೆ3,043 ಮಕ್ಕಳು,3 ವರ್ಷದಿಂದ5 ವರ್ಷ ದೊಳಗೆ3,927 ಮಕ್ಕಳು,5 ವರ್ಷದಿಂದ6 ವರ್ಷದೊಳಗಿನವರು1,267 ಮಕ್ಕಳಿದ್ದಾರೆ.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೋಜನೆಯ ಹಲವು ಸೌಲಭ್ಯಗಳನ್ನು ಬಳಸಿಕೊಂಡು ಶ್ರೀನಿವಾಸಪುರ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ನಿರ್ಮಿಸಲಾಗಿದೆ. ರಾಮಕೃಷ್ಣ, ಪಿಡಿಒ ಪರಗೋಡು ಗ್ರಾಪಂ

ಸರ್ಕಾರದಿಂದ ಮಳೆಕೊಯ್ಲು, ಇಂಗು ಗುಂಡಿ,ಕೈ ತೋಟಕ್ಕೆನರೇಗಾಯೋಜನೆಯಡಿಯಲ್ಲಿಮಾತ್ರ ಅನುದಾನ ನೀಡುತ್ತದೆ. ಉಳಿದಂತೆ ಎಲ್ಲ ರೀತಿಯ ಸೌಲಭ್ಯ ಗಳನ್ನು ಸ್ಥಳೀಯ ಜನಪ್ರತಿನಿಧಿಗಳ,ಗ್ರಾಮಸ್ಥರ, ದಾನಿಗಳ ಹಾಗೂ ಗ್ರಾಮ ಪಂಚಾಯತಿ ಸಹಕಾರ ಪಡೆದುಕೊಂಡು ತಾಲೂಕಿನ 14ಕೇಂದ್ರಗಳನ್ನು ಮಾದರಿ ಅಂಗನ ವಾಡಿ ಕೇಂದ್ರಗಳನ್ನಾಗಿ  ಮಾಡಲಾಗಿದೆ. ಎನ್‌.ಪಿ.ರಾಜೇಂದ್ರ ಪ್ರಸಾದ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಾಗೇಪಲ್ಲಿ

 

Advertisement

Udayavani is now on Telegram. Click here to join our channel and stay updated with the latest news.

Next