Advertisement

ಛತ್ತೀಸ್ ಗಢ್; ಭದ್ರತಾಪಡೆಗಳ ಎನ್ ಕೌಂಟರ್ ಗೆ 14 ನಕ್ಸಲೀಯರು ಬಲಿ

02:57 PM Aug 06, 2018 | Team Udayavani |

ಸುಕ್ಮಾ(ಛತ್ತೀಸ್ ಗಢ್): ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆಯಲ್ಲಿ 14 ಮಂದಿ ನಕ್ಸಲೀಯರು ಬಲಿಯಾಗಿರುವ ಘಟನೆ ಸೋಮವಾರ ಛತ್ತೀಸ್ ಗಢದ ಸುಕ್ಮಾದ ಕೋನ್ಟಾ ಹಾಗೂ ಗೋಲಾಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ದಕ್ಷಿಣ ಸುಕ್ಮಾದಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿರುವ ದಟ್ಟ ಕಾಡಿನಲ್ಲಿ ಸೋಮವಾರ ಬೆಳಗ್ಗೆ ಭದ್ರತಾ ಪಡೆಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲೀಯರು ಪ್ರತಿದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ 14 ನಕ್ಸಲೀಯರು ಹತರಾಗಿದ್ದು, 16 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಬಸ್ತಾರ್ ವಲಯದ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ್ ಸಿನ್ನಾ ತಿಳಿಸಿದ್ದಾರೆ.

ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆದಿತ್ತು. ಈ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಾವೋವಾದಿಗಳು ಠಿಕಾಣಿ ಹೂಡಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಿಆರ್ ಪಿಎಫ್, ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಪೊಲೀಸ್ ಪಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ನಕ್ಸಲೀಯರು ಶಸ್ತ್ರಾಸ್ತ್ರ ಹೋರಾಟ ತ್ಯಜಿಸಿ ಮುಖ್ಯವಾಹಿನಿಗೆ ಬರಬೇಕು ಎಂದು ಛತ್ತೀಸ್ ಗಢ್ ಸರ್ಕಾರ ಸಂದೇಶ ರವಾನಿಸಿತ್ತು. ಒಂದೋ ನೀವು(ನಕ್ಸಲ್) ಶರಣಾಗಿ, ಇಲ್ಲವೇ ನಮ್ಮ ಭದ್ರತಾ ಪಡೆಗಳ ಕಾರ್ಯಾಚರಣೆಗೆ ಬಲಿಯಾಗುವಿರಿ ಎಂಬ ಎಚ್ಚರಿಕೆನ್ನೂ ಕೊಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next