ಮೈಸೂರು: ಹನೂರು ತಾಲೂಕು ಸುಳವಾಡಿಯ ಕಿಚ್‌ಗುತ್ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವನೆ ಪ್ರಕರಣದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ 101 ಜನರನ್ನು ದಾಖಲಿಸಿಕೊಂಡಿದ್ದು, ತೀವ್ರ ನಿಗಾಘಟಕಗಳಲ್ಲಿ 45 ಮಂದಿ, ವೆಂಟಿಲೇಟರ್‌ಗಳಲ್ಲಿ 24 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, 56 ಮಂದಿಯನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ 25 ಮಂದಿಯನ್ನು ದಾಖಲಿಸಿಕೊಂಡಿದ್ದು, ಐಸಿಯುನಲ್ಲಿ 3, ವೆಂಟಿಲೇಟರ್‌ನಲ್ಲಿ ಒಬ್ಬರು, ವಾರ್ಡ್‌ನಲ್ಲಿ 22 ಮಂದಿ ಇದ್ದಾರೆ. ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ 12 ಮಂದಿ ದಾಖಲಿಸಲಾಗಿದ್ದು, ಐಸಿಯುನಲ್ಲಿ 9, ವೆಂಟಿಲೇಟರ್‌ನಲ್ಲಿ 4, ವಾರ್ಡ್‌ನಲ್ಲಿ 3 ಮಂದಿ ಇದ್ದಾರೆ. ಜೆಎಸ್‌ಎಸ್ ಆಸ್ಪತ್ರೆಯಲ್ಲಿ 15 ಮಂದಿ ದಾಖಲಿಸಲಾಗಿದ್ದು, ಐಸಿಯುನಲ್ಲಿ 8, ವೆಂಟಿಲೇಟರ್‌ನಲ್ಲಿ 5, ವಾರ್ಡ್‌ನಲ್ಲಿ 7ಮಂದಿ ಇದ್ದಾರೆ.
ಗೋಪಾಲಗೌಡ ಆಸ್ಪತ್ರೆಯಲ್ಲಿ 6 ಮಂದಿಯನ್ನು ದಾಖಲಿಸಿದ್ದು, ಐಸಿಯುನಲ್ಲಿ 2, ವೆಂಟಿಲೇಟರ್‌ನಲ್ಲಿ 2, ವಾರ್ಡ್‌ನಲ್ಲಿ 4ಮಂದಿ ಇದ್ದಾರೆ. ಕಾವೇರಿ ಆಸ್ಪತ್ರೆಯಲ್ಲಿ 11 ಮಂದಿಯನ್ನು ದಾಖಲಿಸಲಾಗಿದ್ದು, ಐಸಿಯುನಲ್ಲಿ 8, ವೆಂಟಿಲೇಟರ್‌ನಲ್ಲಿ 4, ವಾರ್ಡ್‌ನಲ್ಲಿ 3 ಮಂದಿ ಇದ್ದಾರೆ.
ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ 6 ಮಂದಿಯನ್ನು ದಾಖಲಿಸಿದ್ದು, ಐಸಿಯುನಲ್ಲಿ 5, ವೆಂಟಿಲೇಟರ್‌ನಲ್ಲಿ 3, ವಾರ್ಡ್‌ನಲ್ಲಿ ಒಬ್ಬರು ಇದ್ದಾರೆ. ಸುಯೋಗ್ ಆಸ್ಪತ್ರೆಯಲ್ಲಿ 14 ಮಂದಿಯನ್ನು ದಾಖಲಿಸಿದ್ದು, ಐಸಿಯುನಲ್ಲಿ 4, ವೆಂಟಿಲೇಟರ್‌ನಲ್ಲಿ 4, ವಾರ್ಡ್‌ನಲ್ಲಿ 10 ಮಂದಿ ಇದ್ದಾರೆ.
ಭಾನವಿ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ನಾರಾಯಣ ಹೃದಯಾಲಯದಲ್ಲಿ 3ಮಂದಿಯನ್ನು ದಾಖಲಿಸಿದ್ದು, ಐಸಿಯುನಲ್ಲಿ 3, ವೆಂಟಿಲೇಟರ್‌ನಲ್ಲಿ ಒಬ್ಬರು ಇದ್ದಾರೆ. ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ 6ಮಂದಿಯನ್ನು ದಾಖಲಿಸಿದ್ದು, ಆರು ಮಂದಿಯೂ ವಾರ್ಡ್‌ನಲ್ಲಿದ್ದಾರೆ. ಬೃಂದಾವನ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
14 ಸಾವು: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ 1,ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ 3, ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಚಾಮರಾಜ ನಗರ ಜಿಲ್ಲೆ ಹನೂರಿನ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ 3, ಕೊಳ್ಳೇಗಾಲದ ಎಸ್‌ಡಿಎಚ್ ಆಸ್ಪತ್ರೆಯಲ್ಲಿ 3,ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 1, ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಒಬ್ಬರು ಸೇರಿದಂತೆ ಘಟನೆಯಲ್ಲಿ ಈವರೆಗೆ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.