Advertisement

 15 ಬಿಜೆಪಿ ಸಂಸದರ ಪೈಕಿ 14 ಸಂಸದರಿಗೆ ಮತ್ತೆ ಲೋಕಸಭೆಗೆ ಟಿಕೆಟ್‌

12:30 AM Mar 22, 2019 | Team Udayavani |

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗುರುವಾರ ಘೋಷಿಸಿದ್ದು, 7 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯನ್ನು ಬಾಕಿ ಉಳಿಸಿಕೊಂಡಿದೆ. 

Advertisement

ಹಾಲಿ 15 ಸಂಸದರ ಪೈಕಿ 14 ಮಂದಿಗೆ ಮತ್ತೆ ಸ್ಪರ್ಧಿಸಲು ಟಿಕೆಟ್‌ ದೊರಕಿದೆ. ಸಂಸದ ಕರಡಿ ಸಂಗಣ್ಣ ಪ್ರತಿನಿಧಿಸು ತ್ತಿದ್ದ ಕೊಪ್ಪಳ ಕ್ಷೇತ್ರ ಮತ್ತು ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಪ್ರತಿನಿಧಿಸುತ್ತಿದ್ದ ಬೆಂಗ ಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿಲ್ಲ.

ಲೋಕಸಭೆಯ ಕಾಂಗ್ರೆಸ್‌ ಸಂಸ ದೀಯ ನಾಯಕ  ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕ್ಷೇತ್ರದಲ್ಲಿ ಇತ್ತೀಚೆ ಗಷ್ಟೇ ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ ರುವ ಡಾ| ಉಮೇಶ್‌ ಜಾಧವ್‌ಗೆ ಟಿಕೆಟ್‌ ನೀಡಲಾಗಿದೆ. ಹಾಸನದಲ್ಲಿ ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್‌ ರೇವಣ್ಣ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ ತೊರೆದ ಮಾಜಿ ಸಚಿವ ಎ. ಮಂಜುಗೆ ಬಿಜೆಪಿ ಟಿಕೆಟ್‌ ನೀಡಿದೆ. 

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಟಿಕೆಟ್‌ ಸಿಗಲಿದೆ ಎಂಬ ನಿರೀಕ್ಷೆ ನಡುವೆ ಆ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ವರಿಷ್ಠರು ಘೋಷಿಸದಿರುವುದು ಕುತೂಹಲ ಮೂಡಿಸಿದೆ. ಜತೆಗೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಸಂಗಣ್ಣ ಕರಡಿ ಪ್ರತಿನಿಧಿಸುವ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ಉಳಿದಂತೆ ಕಾಂಗ್ರೆಸ್‌ ಸಂಸದರು ಪ್ರತಿನಿಧಿಸುತ್ತಿರುವ ಚಿಕ್ಕೋಡಿ, ರಾಯಚೂರು, ಕೋಲಾರ, ಬೆಂಗ ಳೂರು ಗ್ರಾಮಾಂತರ ಮತ್ತು ಜೆಡಿಎಸ್‌ ನಿಂದ ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಮತ್ತು ಅಂಬರೀಷ್‌ ಪತ್ನಿ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸದಿರುವುದು ಕುತೂಹಲ ಮೂಡಿಸಿದೆ.

Advertisement

ದಿಲ್ಲಿಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಗುರುವಾರ ಸಂಜೆ ಏಕಕಾಲಕ್ಕೆ ದೇಶದ 184 ಲೋಕ ಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಗಳನ್ನು ಅಧಿಕೃತವಾಗಿ ಘೋಷಿಸಿದರು. ಕರ್ನಾಟಕದ 21 ಕ್ಷೇತ್ರ ಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದ ಗೌಡ, ಅನಂತ ಕುಮಾರ್‌ ಹೆಗಡೆ ಮತ್ತು ರಮೇಶ್‌ ಜಿಗಜಿಣಗಿ ಅವರು ಮತ್ತೂಮ್ಮೆ ಕಣಕ್ಕಿಳಿಯಲಿದ್ದಾರೆ.

ಬೆಳಗಾವಿ, ಬಾಗಲಕೋಟೆ, ಬೀದರ್‌, ಹಾವೇರಿ, ಧಾರವಾಡ, ದಾವಣ ಗೆರೆ, ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಮೈಸೂರು- ಕೊಡಗು ಕ್ಷೇತ್ರ ಗಳನ್ನು ಸದ್ಯ ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದರೇ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. 

ಪ್ರತಿರೋಧವಿದ್ದರೂ ಬಚಾವ್‌
ಕೇಂದ್ರ ಸಚಿವರಾದ ಅನಂತ ಕುಮಾರ್‌ ಹೆಗಡೆ, ರಮೇಶ್‌ ಜಿಗಜಿಣಗಿ, ಸಂಸದರಾದ ಶೋಭಾ ಕರಂದ್ಲಾಜೆ, ಸುರೇಶ್‌ ಅಂಗಡಿ, ಕರಡಿ ಸಂಗಣ್ಣ ಇನ್ನೂ ಕೆಲವರ ವಿರುದ್ಧ ಆಡಳಿತ ವಿರೋಧಿ ಅಲೆ, ಕ್ಷೇತ್ರದ ಜನ- ಕಾರ್ಯಕರ್ತರ ಸಂಪರ್ಕಕ್ಕೆ ಸಿಗ ದಿರುವುದು, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡದಿರುವುದು, ವೈಯಕ್ತಿಕ ಕಾರ್ಯ ವೈಖರಿಯು ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಮುಖಂಡರಲ್ಲೂ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಬಗ್ಗೆ ರಾಜ್ಯ ಕೋರ್‌ ಕಮಿಟಿ ಸಭೆಯಲ್ಲೂ ವಿಸ್ತೃತ ಚರ್ಚೆಯಾಗಿತ್ತು. ಬಳಿಕ ಕೇಂದ್ರ ಚುನಾವಣ ಸಮಿತಿ ಸಭೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ರಾಜ್ಯದ ಆಯ್ದ ಹಿರಿಯ ನಾಯಕರ ಸಭೆಯಲ್ಲೂ ಈ ವಿಚಾರಗಳು ಹೆಚ್ಚು ಚರ್ಚೆಗೆ ಒಳಗಾಗಿದ್ದವು. ಈ ಕ್ಷೇತ್ರಗಳಲ್ಲಿ ಹಲವು ಆಕಾಂಕ್ಷಿಗಳು ಮುನ್ನೆಲೆಗೆ ಬಂದು ಕೊನೆಗೆ ವರಿಷ್ಠರು ಬದಲಾವಣೆಗೆ ಮನಸು ಮಾಡಲಿಲ್ಲ.

ರಾಜ್ಯ ಬಿಜೆಪಿ ಅಭ್ಯರ್ಥಿ ಮೊದಲ ಪಟ್ಟಿ
ದಕ್ಷಿಣ ಕನ್ನಡ    ನಳಿನ್‌ ಕುಮಾರ್‌ ಕಟೀಲು
ಉಡುಪಿ-ಚಿಕ್ಕಮಗಳೂರು    ಶೋಭಾ ಕರಂದ್ಲಾಜೆ
ಶಿವಮೊಗ್ಗ    ಬಿ.ವೈ. ರಾಘವೇಂದ್ರ
ಉತ್ತರ ಕನ್ನಡ    ಅನಂತ ಕುಮಾರ್‌ ಹೆಗಡೆ
ಮೈಸೂರು- ಕೊಡಗು    ಪ್ರತಾಪ್‌ ಸಿಂಹ
ಬೆಳಗಾವಿ    ಸುರೇಶ್‌ ಅಂಗಡಿ
ಬಾಗಲಕೋಟೆ    ಪಿ.ಸಿ. ಗದ್ದಿಗೌಡರ್‌
ವಿಜಯಪುರ    ರಮೇಶ್‌ ಜಿಗಜಿಣಗಿ
ಕಲಬುರ್ಗಿ    ಡಾ.ಉಮೇಶ್‌ ಜಾಧವ್‌
ಬೀದರ್‌    ಭಗವಂತ ಖೂಬಾ 
ಬಳ್ಳಾರಿ    ದೇವೇಂದ್ರಪ್ಪ
ಹಾವೇರಿ    ಶಿವಕುಮಾರ್‌ ಉದಾಸಿ
ಧಾರವಾಡ    ಪ್ರಹ್ಲಾದ್‌ ಜೋಶಿ
ದಾವಣಗೆರೆ    ಜಿ.ಎಂ. ಸಿದ್ದೇಶ್ವರ್‌
ಹಾಸನ    ಎ. ಮಂಜು
ಚಿತ್ರದುರ್ಗ    ಎ. ನಾರಾಯಣಸ್ವಾಮಿ
ತುಮಕೂರು    ಜಿ.ಎಸ್‌. ಬಸವರಾಜು
ಚಾಮರಾಜನಗರ    ವಿ. ಶ್ರೀನಿವಾಸ ಪ್ರಸಾದ್‌
ಬೆಂಗಳೂರು ಉತ್ತರ    ಡಿ.ವಿ. ಸದಾನಂದಗೌಡ
ಬೆಂಗಳೂರು ಕೇಂದ್ರ    ಪಿ.ಸಿ. ಮೋಹನ್‌
ಚಿಕ್ಕಬಳ್ಳಾಪುರ    ಬಿ.ಎನ್‌. ಬಚ್ಚೇಗೌಡ

ಟಿಕೆಟ್‌ ಘೋಷಣೆ ಬಾಕಿಯಿರುವ ಕ್ಷೇತ್ರಗಳು
ಕೊಪ್ಪಳ (ಬಿಜೆಪಿ ಸಂಸದ ಸಂಗಣ್ಣ ಕರಡಿ ಪ್ರತಿನಿಧಿಸುವ ಕ್ಷೇತ್ರ), ಬೆಂಗಳೂರು ದಕ್ಷಿಣ (ಅನಂತ ಕುಮಾರ್‌ ಪ್ರತಿನಿಧಿಸುತ್ತಿದ್ದ  ಕ್ಷೇತ್ರ), ಚಿಕ್ಕೋಡಿ, ರಾಯಚೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ.

Advertisement

Udayavani is now on Telegram. Click here to join our channel and stay updated with the latest news.

Next