ಕಾರವಾರ: ಎರಡು ಹಂತದಲ್ಲಿ ಜರುಗಿದ ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಪ್ರಕ್ರಿಯೆ ಬುಧವಾರ ರಾತ್ರಿ ಪೂರ್ಣಗೊಂಡಿದ್ದು, 187 ಜನ ಅವಿರೋಧವಾಗಿ, 2,470ಜನಪ್ರತಿನಿಧಿಗಳು ಮತದಾನದ ಮೂಲಕ ಸೇರಿ ಒಟ್ಟೂ 2,657 ಸದಸ್ಯರು ಆಯ್ಕೆಯಾಗಿದ್ದಾರೆ.
ಜಿಲ್ಲೆಯ 227 ಗ್ರಾಪಂಗಳ ಒಟ್ಟು 2,662 ಸ್ಥಾನಗಳಿಗೆ ಚುನಾವಣೆ ಅಧಿಸೂಚನೆಹೊರಡಿಸಲಾಗಿತ್ತು. ಇದರ ಪೈಕಿ ಐದು ಸ್ಥಾನಗಳಿಗೆನಾಮಪತ್ರ ತಿರಸ್ಕೃತ ಹಾಗೂ ನಾಮಪತ್ರಸಲ್ಲಿಸದೇ ಇರುವುದರಿಂದ ಆ ಸ್ಥಾನಗಳು ಖಾಲಿಉಳಿದಿರುತ್ತವೆ. 187 ಸ್ಥಾನಗಳಿಗೆ ಅಭ್ಯರ್ಥಿಗಳುಅವಿರೋಧವಾಗಿ ಆಯ್ಕೆಯಾಗಿದ್ದರು. ಹೀಗಾಗಿಇನ್ನುಳಿದ 2,470 ಸ್ಥಾನಗಳಿಗೆ ಮತದಾನನಡೆಸಲಾಗಿತ್ತು. ಅವಿರೋಧವಾಗಿ ಆಯ್ಕೆಯಾದಅಭ್ಯರ್ಥಿಗಳು ಸೇರಿದಂತೆ ಚುನಾವಣಾಪ್ರಕ್ರಿಯೆಯಲ್ಲಿ ಒಟ್ಟು 2,657 ಅಭ್ಯರ್ಥಿಗಳು ಹೊಸದಾಗಿ ಗ್ರಾಪಂ ಪ್ರವೇಶಿಸಿದ್ದಾರೆ.
ಚುನಾಯಿತ ಸದಸ್ಯರ ವರ್ಗವಾರು ವಿವರ: ಗ್ರಾಪಂ ಒಟ್ಟು ಸದಸ್ಯರಲ್ಲಿ 1,386 ಮಹಿಳಾಅಭ್ಯರ್ಥಿಗಳು, 1,271 ಸಾಮಾನ್ಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಎಲ್ಲ ತಾಲೂಕುಗಳಒಟ್ಟು ಗ್ರಾಪಂ ಅಭ್ಯರ್ಥಿಗಳಲ್ಲಿ ಸಾಮಾನ್ಯಅಭ್ಯರ್ಥಿಗಳಿಗಿಂತ ಮಹಿಳಾ ಅಭ್ಯರ್ಥಿಗಳಸಂಖ್ಯೆ ಹೆಚ್ಚಾಗಿದೆ. ಅನುಸೂಚಿತ ಜಾತಿ ವರ್ಗದಸಾಮಾನ್ಯ ವಿಭಾಗದಲ್ಲಿ 51 ಅಭ್ಯರ್ಥಿಗಳು ಹಾಗೂ 251 ಮಹಿಳಾ ಅಭ್ಯರ್ಥಿಗಳು ಸೇರಿ 302 ಮಂದಿ ಆಯ್ಕೆಯಾಗಿದ್ದಾರೆ.
ಅನುಸೂಚಿತ ಪಂಗಡದಲ್ಲಿ 14 ಸಾಮಾನ್ಯ ಅಭ್ಯರ್ಥಿಗಳು, 228 ಮಹಿಳಾ ಅಭ್ಯರ್ಥಿಗಳುಸೇರಿ 242 ಅಭ್ಯರ್ಥಿಗಳು ಗ್ರಾಪಂ ಪ್ರವೇಶಿಸಿದ್ದಾರೆ. ಹಿಂದುಳಿದ ಅ ವರ್ಗದ ಸಾಮಾನ್ಯ ವಿಭಾಗದಲ್ಲಿ 215 ಅಭ್ಯರ್ಥಿಗಳು, 357 ಮಹಿಳಾ ಅಭ್ಯರ್ಥಿಗಳು ಸೇರಿ 572 ಅಭ್ಯರ್ಥಿಗಳು ಆಯ್ಕೆ ಯಾಗಿದ್ದಾರೆ. ಹಿಂದುಳಿದ ವರ್ಗ ಬ ವರ್ಗದ ಸಾಮಾನ್ಯವಿಭಾಗದಲ್ಲಿ 79 ಅಭ್ಯರ್ಥಿಗಳು ಹಾಗೂ 47 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 126 ಮಂದಿಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದ ಸಾಮಾನ್ಯವಿಭಾಗದಲ್ಲಿ 912 ಅಭ್ಯರ್ಥಿಗಳು ಹಾಗೂ ಇದೇವಿಭಾಗದ ಮಹಿಳಾ ಮೀಸಲಾತಿ ಮೂಲಕ 503 ಜನಪ್ರತಿನಿಧಿಗಳು ಸೇರಿದಂತೆ ಒಟ್ಟು 1,415 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.
ಆಯ್ಕೆಯಾಗದೇ ಉಳಿದ ಸ್ಥಾನಗಳ ವಿವರ: ಕಾರವಾರ ತಾಲೂಕಿನ ವೈಲವಾಡಾ ಗ್ರಾಪಂನ ಅನುಸೂಚಿತ ಜಾತಿ ವಿಭಾಗದಲ್ಲಿ ಮಹಿಳಾ ಮೀಸಲಾತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಅಂಕೋಲಾತಾಲೂಕಿನ ಡೋಂಗ್ರಿ ಗಾಪಂನ ಕನಕನಹಳ್ಳಿ ಕ್ಷೇತ್ರದಹಿಂದುಳಿದ ಅ ವರ್ಗದ ಮಹಿಳಾ ಮಿಸಲಾತಿಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಸಲಾಗಿದ್ದು,ಅದೂ ತಿರಸ್ಕೃತವಾಗಿದೆ. ಕುಮಟಾ ತಾಲೂಕಿನಬರ್ಗಿ ಗ್ರಾಪಂನ ಪಡುವಣಿ ಕ್ಷೇತ್ರದ ಅನುಸೂಚಿತ ಪಂಗಡ ವಿಭಾಗದ ಮಹಿಳಾ ಮೀಸಲಾತಿಯಲ್ಲಿಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಆದರೆ ಆಯ್ಕೆಗೊಂಡ ನಂತರ ಅನುಸೂಚಿತಪಂಗಡ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಜಾತಿ ಪರಿಶೀಲನಾ ಸಮಿತಿ ಅಸಿಂಧು ಎಂದುಆದೇಶಿಸಿರುವ ಕಾರಣ ಅಭ್ಯರ್ಥಿ ಆಯ್ಕೆಯಾಗಿಲ್ಲ.
ಹೊನ್ನಾವರ ತಾಲೂಕಿನ ಮಾಗೋಡ ಗ್ರಾಪಂನಲ್ಲಿ ಅನುಸೂಚಿತ ಪಂಗಡ ವಿಭಾಗದ ಮಹಿಳಾ ಮೀಸಲಾತಿಯಲ್ಲಿ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡಿದೆ. ಜೋಯಿಡಾ ತಾಲೂಕಿನ ಕುಂಬಾರವಾಡಾ ಗ್ರಾಪಂನ ಕುಂಡಲ ಕ್ಷೇತ್ರದ
ಅನುಸೂಚಿತ ಪಂಗಡ ವಿಭಾಗದ ಮಹಿಳಾ ಮೀಸಲಾತಿ ಅಡಿಯಲ್ಲಿ ಯವುದೇ ನಾಮಪತ್ರ ಸ್ವೀಕೃತವಾಗಿಲ್ಲ. ಹೀಗಾಗಿ ಈ ಐದು ಸ್ಥಾನಗಳಿಗೆ ಸದಸ್ಯರು ಆಯ್ಕೆಯಾಗದೇ ಉಳಿದಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ಹರೀಶ್‌ಕುಮಾರ್ ತಿಳಿಸಿದ್ದಾರೆ.