Advertisement

“ದೇಶದ 1.33 ಲಕ್ಷ ಹಳ್ಳಿಗಳು ಸ್ವಚ್ಛ

12:18 PM Sep 21, 2017 | |

ಯಳಂದೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವತ್ಛ ಭಾರತ ಅಭಿಯಾನದಿಂದಾಗಿ ದೇಶದ 1.33 ಲಕ್ಷ ಹಳ್ಳಿಗಳು ಇಂದು ಸ್ವತ್ಛ ಗ್ರಾಮವಾಗಿವೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಲ್ಲಿಕಾರ್ಜುನಪ್ಪ ತಿಳಿಸಿದರು.

Advertisement

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆಯಲ್ಲಿ ಗಿರಿಜನರಿಗೆ ಹಮ್ಮಿ ಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ ಕಟ್ಟೆಕಡೆಯ ವ್ಯಕ್ತಿಗೂ (ಉಚಿತವಾಗಿ ಆರೋಗ್ಯ ಭಾಗ್ಯ ಬಿಪಿಎಲ್‌ ಕಾರ್ಡ್‌ದಾರರಿಗೆ) ಉತ್ತಮ ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ಇಂದ್ರಧನುಷ್‌ ಯೋಜನೆಯಲ್ಲಿ 7 ಹಂತದ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಜಾರಿಗೂಳಿಸಿದ್ದಾರೆ ಎಂದು ಹೇಳಿದರು.

ದೇಶದಲ್ಲಿ 480 ನಗರಗಳು ಸ್ವತ್ಛ ಭಾರತ ಸಪ್ತಾಹದಿಂದ ಸ್ವತ್ಛ ನಗರಿಗಳ ವ್ಯಾಪ್ತಿಗೆ ಸೇರಿಕೊಂಡಿವೆ. ಇದ್ದರಿಂದ ಮಹಾತ್ಮ ಗಾಂಧೀಜಿ ಕಂಡ ಗ್ರಾಮ ಸ್ವರಾಜ್‌ ಕನಸು ನನಸು ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ 3 ವರ್ಷದಲ್ಲಿ ದೇಶದಲ್ಲಿ ಹಲವು ಬದಲಾವಣೆ ತರುವುದರ ಜೊತೆಯಲ್ಲಿ ಎಲ್ಲಾ ದೇಶಗಳ ವಿಶ್ವಾಸಕ್ಕೆ ತೆಗೆದುಕೊಂಡು ದೇಶದ ಆರ್ಥಿಕ ವ್ಯವಸ್ಥೆ ಬದಲಾವಣೆ ಮಾಡುವುದರ ಜೊತೆಯಲ್ಲಿ ದೇಶದಲ್ಲಿ ಇರುವ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಹೇಳಿದರು.

ಗಿರಿಜನರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೆ ತಂದು ಸಾಲ ಸೌಲಭ್ಯ ನೀಡುತ್ತಿದೆ ಮತ್ತು ಗಿರಿಜನರಿಗೆ ಉತ್ತಮ ಪೌಷ್ಟಿಕ ಆಹಾರ ಪೊರೈಕೆ ಮಾಡುತ್ತಿದೆ ಎಂದು ತಿಳಿಸಿದರು. 

ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಗಿರಿಜನರಿಗೆ ಉಚಿತ ಗ್ಯಾಸ್‌ ವಿತರಣೆ ಮಾಡುತ್ತಿದೆ. ಅಲ್ಲದೆ ಗಿರಿಜನರ ಆರೋಗ್ಯದ ಮೇಲೆ ಕಾಳಜಿಯಿಂದ ಗಿರಿಜನರು ವಾಸಿಸುವ ಹಾಡಿಗಳಿಗೆ ಉಚಿತ ಬೆಳೆ, ಅಕ್ಕಿ, ಹಸರು, ನಂದಿನಿ ತುಪ್ಪ, ಕಡ್ಲೆಬೀಜ ಸೇರಿದಂತೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದೆ. 

Advertisement

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ರಾಜ್ಯದಲ್ಲಿ ಆಡಳಿತ ಮಾಡುವ ಕಾಂಗ್ರೆಸ್‌ ಸರ್ಕಾರ
ಗಿರಿಜನರಿಗೆ ನೀಡುವ ಅನುದಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದರು.

ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಗಿರಿಜನರಿಗೆ ಎಲ್ಲಾ ಸೌಲಭ್ಯ ನೇರವಾಗಿ ತಲುಪುತ್ತಿತ್ತು. ಆದರೆ, ಈಗ ರಾಜ್ಯ ಸರಕಾರ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಿದರು.

ಗ್ಯಾಸ್‌, ಅಕ್ಕಿ, ಬೆಳೆ ಕೊಟ್ಟಿಲ್ಲ: ಈ ಸಂದರ್ಭದಲ್ಲಿ ಗಿರಿಜನರು ತಮಗೆ ಸರಿಯಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ, ತಮಗೆ ಅಡುಗೆ ಗ್ಯಾಸ್‌ ಸಂಪರ್ಕ ಕೂಡ ನೀಡಿಲ್ಲ ಎಂದು ಮಾಜಿ ಶಾಸಕ ಜಿ.ಎನ್‌.ಎನ್‌ ಮುಂದೆ ಅಳಲು ತೊಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನಂಜುಂಡಸ್ವಾಮಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಕೊಳ್ಳೇಗಾಲ ಜನನಿ ಆಸ್ಪತ್ರೆಯ ವೈದ್ಯ ಡಾ.ಫೀಧಾ, ಡಾ.ಶಿವಕುಮಾರ್‌, ಪ್ರವೀಣ್‌ ಕುಮಾರ್‌, ಡಾ.ಯೋಗೇಶ್‌, ಶ್ರೀಧರ್‌ ಶಿಬಿರ ನಡೆಸಿಕೊಟ್ಟರು. ಪಪಂ ಉಪಾಧ್ಯಕ್ಷ ವೈ.ಎಸ್‌.ಭೀಮಪ್ಪ, ಸದಸ್ಯರಾದ ವೈ.ಎನ್‌. ಮರುಳಿಕೃಷ್ಣ, ಜೆ.ಶ್ರೀನಿವಾಸ್‌, ಗ್ರಾಪಂ ಸದಸ್ಯರಾದ ಕಾಂತರಾಜು, ಗೋಪಾಲ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ
ಜ್ಯೋತಿರೇವಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ಅಗರ ರಾಜು, ತಾಲೂಕು ಸೋಲಿಗೆ ಸಂಘದ ಅಧ್ಯಕ್ಷ ರಂಗೇಗೌಡ, ಎಪಿಎಂಸಿ ಸದಸ್ಯ ಚಂದ್ರಶೇಖರ್‌, ಮದ್ದೂರು ವಿರೂಪಾಕ್ಷ, ನಾಗಣ್ಣ, ರಂಗಮ್ಮ, ದಾಸೇಗೌಡ, ಗಿರಿಮಾದೇಗೌಡ, ಜಿಲ್ಲಾ ಭಜರಂಗದಳದ ಉಪಾಧ್ಯಕ್ಷ ಅನೀಲ್‌ ಕುಮಾರ್‌, ಯರಿಯೂರು ಜಯಣ್ಣ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅಗರ
ಕೃಷ್ಣಮೂರ್ತಿ, ಮಹದೇವಪ್ಪ, ತಾಪಂ ಸದಸ್ಯ ಕೃಷ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next