Advertisement

ಮಳೆ ಹಾನಿ: ಸ್ಥಳಕ್ಕೆ ಭೇಟಿ ನೀಡಲು ಜಿಲ್ಲಾಧಿಕಾರಿಗಳಿಗೆ ಸಚಿವ ಅಶೋಕ್‌ ಸೂಚನೆ

06:38 PM Nov 19, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಿರಂತರ ಮಳೆಯಿಂದ ಬಹಳಷ್ಟು ಬೆಳೆ ಹಾನಿಯಾಗಿದ್ದು ಜಿಲ್ಲಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಕುರಿತು ಮಾಹಿತಿ ಪಡೆಯಲು ಸೂಚಿಸಲಾಗಿದೆ.130 ಕೋಟಿ ರೂ. ಬೆಳೆ ನಷ್ಟ ಪರಿಹಾರಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ವರದಿ ಕೊಟ್ಟ ನಂತರ ಪರಿಹಾರ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಳೆಯಿಂದ ಹಳೆ ಮೈಸೂರು ಭಾಗದಲ್ಲಿ ರಾಗಿಗೆ ಹಾನಿಯಾಗಿದೆ.ಬೆಳಗಾವಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕಬ್ಬು, ಈರುಳ್ಳಿ ಸೇರಿ ಇತರೆ ಬೆಳೆಗಳಿಗೆ ಹಾನಿಯಾಗಿದೆ. ಈ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಯಿಂದ ನಾವು ಸ್ಥಳ ಪರಿಶೀಲನೆ ಹೋಗಲು ಆಗಲ್ಲ ಅದಕ್ಕಾಗಿ ಶಾಸಕರು, ಸಚಿವರ ಕರೆದುಕೊಂಡು ಹೋಗದೆ ಅಧಿಕಾರಿಗಳ ತಂಡ ಹೋಗಿ ಪರಿಶೀಲನೆ ಮಾಡಬೇಕು ಎಂದು ತಿಳಿಸಲಾಗಿದೆ ಎಂದರು.

ಇದನ್ನೂ ಓದಿ:ಆಸ್ಪತ್ರೆಗೆ ಬಂದು ಗೋಳಾಡಿ ದೇವರ ವಿಗ್ರಹಕ್ಕೆ ಬ್ಯಾಂಡೇಜ್ ಮಾಡಿಸಿದ ಅರ್ಚಕ!

Advertisement

ಮಳೆಯಿಂದ ಮನೆ ಬಿದ್ದಿದ್ದರೆ ತಕ್ಷಣ 10 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಸೂಚಿಸಲಾಗಿದೆ. ಬೆಳೆ ಪರಿಹಾರಕ್ಕೆ 130 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಸಮಸ್ಯೆ ಉಂಟಾಗಿರುವ ಜಿಲ್ಲೆಗಳನ್ನು ಈಗಾಗಲೇ ಗುರುತು ಮಾಡಿದ್ದೇವೆ. ರೈತರ ಖಾತೆಗಳಿಗೆ ಬೆಳೆ ಪರಿಹಾರದ ಹಣ ತಲುಪಲಿದೆ ಎಂದು ಹೇಳಿದರು.

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ನಡಿ ಹಣ ಬಿಡುಗಡೆ ಮಾಡಲಾಗುವುದು. ಯಾವ ಯಾವ ಬೆಳೆಗೆ ಯಾವ ಯಾವ ಪರಿಹಾರ ಅನ್ನೋದರ ಬಗ್ಗೆ ಈಗಾಗಲೇ ಬೆಲೆ ನಿಗದಿಯಾಗಿದೆ. ಕಾಫಿ ಬೆಳೆಗಳನ್ನು ಪರಿಹಾರ ಸಿಗುವ ಬಗ್ಗೆ ಕೇಂದ್ರಕ್ಕೆ ಪತ್ತ ಬರೆಯುತ್ತೇನೆ ಎಂದು ತಿಳಿಸಿದರು.

ಕೇಂದ್ರದಿಂದ ಈಗಾಗಲೇ 8 ವರ್ಷಗಳಲ್ಲಿ ಎನ್‌ಡಿಆರ್‌ಎಫ್ನಡಿ 13,519 ಕೋಟಿ ರೂ. ಎಸ್‌ಡಿಆರ್‌ಎಫ್ನಡಿ 2922 ಕೋಟಿ ರೂ. ಬಿಡುಗಡೆಯಾಗಿದೆ. 1,51,429 ರೈತರಿಗೆ ಇನ್‌ಪುಟ್‌ ಸಬ್ಸಿಡಿ ಜುಲೈ ಆಗಸ್ಟ್‌ವರೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next