Advertisement

Tragic: ಶಾಲೆಗೆ ಹೋಗುತ್ತಿದ್ದ ವೇಳೆ ತೀವ್ರ ಹೃದಯಾಘಾತ; ಕುಸಿದು ಬಿದ್ದು 13ರ ಬಾಲಕಿ ಮೃತ್ಯು

01:35 PM Dec 20, 2023 | Team Udayavani |

ಮೂಡಿಗೆರೆ: ಶಾಲೆಗೆ ಹೋಗುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕೆಸವಳಲು ಜೊಗಣ್ಣನಕೆರೆ ಗ್ರಾಮದಲ್ಲಿ ಬುಧವಾರ(ಡಿ.20 ರಂದು) ನಡೆದಿದೆ.

Advertisement

ಮೂಡಿಗೆರೆ ತಾಲೂಕಿನ ಜೊಗಣ್ಣನಕೆರೆ ಗ್ರಾಮದ ಅರ್ಜುನ ಸುಮ ದಂಪತಿಗಳ ಮಗಳಾದ ಸೃಷ್ಟಿ (13) ಮೃತ ವಿದ್ಯಾರ್ಥಿನಿ. ಈಕೆ ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೆ ತರಗತಿ ವ್ಯಾಸಂಗ ಮಾಡುತಿದ್ದಳು.

ಸೃಷ್ಟಿ ಇಂದು ಬೆಳಿಗ್ಗೆ 9.30.ರ ಸಮಯದಲ್ಲಿ ಶಾಲೆಗೆ ಹೊಗುತಿದ್ದಾಗ ದಾರದಹಳ್ಳಿ ಸರ್ಕಲ್ ಬಳಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಸ್ಥಳೀಯರು ಆಕೆಯನ್ನು ಎಂಜಿಎಂ ಆಸ್ಪತ್ರೆಗೆ ರವಾನಿಸಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಆಕೆಗೆ ತೀವ್ರ ಹೃದಯಾಘಾತವಾಗಿರುವುದಾಗಿ ಹೇಳಿದ್ದಾರೆ.

ಮೃತರು ತಾಯಿ-ತಂದೆ, ಇಬ್ಬರು ಸಹೊದರಿಯರು ಹಾಗೂ ಒಬ್ಬ ಸಹೊದರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next