ಬೆಂಗಳೂರು: ಜುಲೈನಲ್ಲಿ ಉಡಾವಣೆಯಾಗಲಿರುವ ಚಂದ್ರಯಾನ 2ರಲ್ಲಿ ಈ ಬಾರಿ ಒಟ್ಟು 14 ಪೇಲೋಡ್‌ಗಳಿರುತ್ತವೆ ಎಂದು ಇಸ್ರೋ ಬುಧವಾರ ತಿಳಿಸಿದೆ. ಜುಲೈ 9ರಿಂದ ಜುಲೈ 16 ಅವಧಿಯಲ್ಲಿ ಉಡಾವಣೆ ನಡೆಯಲಿದ್ದು, ಸೆಪ್ಟೆಂಬರ್ 6ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. 13 ಪೇಲೋಡ್‌ಗಳು ಭಾರತದಲ್ಲೇ ನಿರ್ಮಾಣವಾಗಿದ್ದು, ಒಂದು ಪೇಲೋಡ್ ಅನ್ನು ಮಾತ್ರ ನಾಸಾ ಅಭಿವೃದ್ಧಿಪಡಿಸಿದೆ.
ಆರ್ಬಿಟರ್‌ಗೆ 8, ಲ್ಯಾಂಡರ್‌ಗೆ 3 ಹಾಗೂ ರೋವರ್‌ಗ 2 ಪೇಲೋಡ್‌ಗಳನ್ನು ಅಳವಡಿಸಲಾಗಿರುತ್ತದೆ. ಚಂದ್ರನ ಮೇಲ್ಮೆ„ಯಿಂದ 100 ಕಿ.ಮೀ ದೂರದಲ್ಲಿ ಆರ್ಬಿಟರ್ ಪ್ರದಕ್ಷಿಣೆ ಹಾಕಲಿದ್ದು, ವಿಕ್ರಮ್ ಹೆಸರಿನ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಬಳಿ ನಿಧಾನಗತಿಯಲ್ಲಿ ಇಳಿಯಲಿದೆ. ಇನ್ನು ಪ್ರಜ್ಞಾನ್ ಎಂಬ ಹೆಸರಿನ ರೋವರ್ ಅನ್ನು ಖರಗ್‌ಪುರ ಐಐಟಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಚಂದ್ರನ ಮೈಮೇಲೆ ವಿವಿಧ ಪ್ರಯೋಗಗಳನ್ನು ನಡೆಸಲು ನೆರವಾಗಲಿದೆ. ಲ್ಯಾಂಡರ್ ಹಾಗೂ ರೋವರ್‌ಗೆ ವಿವಿಧ ಪ್ರಯೋಗಗಳನ್ನು ಮಾಡುವುದಕ್ಕಾಗಿ ಹಲವು ಪರಿಕರಗಳನ್ನು ಅಳವಡಿಸಲಾಗುತ್ತದೆ.
ಮೊದಲ ಬಾರಿ ದಕ್ಷಿಣ ಧ್ರುವ ಸ್ಪರ್ಶ: ಲ್ಯಾಂಡರ್ ಹಾಗೂ ಆರ್ಬಿಟರ್ ಅನ್ನು ಜಿಎಸ್‌ಎಲ್‌ವಿ ಎಂಕೆ 3ಗೆ ಅಳವಡಿಸಲಾಗುತ್ತದೆ. ಲ್ಯಾಂಡರ್ ಒಳಗಡೆ ರೋವರ್ ಇರುತ್ತದೆ. ಉಡಾವಣೆ ಮಾಡಿದ ನಂತರ ಜಿಎಸ್‌ಎಲ್‌ವಿ ಇಂದ ಕಳಚಿಕೊಂಡು ಇವು ಕಕ್ಷೆ ಸೇರಲಿವೆ. ಅದೇ ರೀತಿ ರೋವರ್ ಕೂಡ ಚಂದ್ರನ ಮೈಮೇಲೆ ಇಳಿದಾಗ ಪ್ರತ್ಯೇಕಗೊಳ್ಳಲಿದೆ. ಇದೇ ಮೊದಲ ಬಾರಿಗೆ ನಾವು ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಡುತ್ತಿದ್ದೇವೆ.
ಬೇರೆ ಯಾವ ದೇಶಗಳೂ ಈ ಭಾಗಕ್ಕೆ ತೆರಳಿರಲಿಲ್ಲ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ಈ ಮೂರೂ ಭಾಗಗಳ ತೂಕವು 3.8 ಟನ್ ಇರಲಿದೆ. 10 ವರ್ಷಗಳ ಹಿಂದೆ ಚಂದ್ರಯಾನ 1 ಕೈಗೊಂಡಾಗ 11 ಪೇಲೋಡ್‌ಗಳನ್ನು ಬಳಸಲಾಗಿತ್ತು. ಇದರಲ್ಲಿ 5 ಭಾರತದಲ್ಲಿ ನಿರ್ಮಾಣವಾಗಿದ್ದರೆ, ಉಳಿದ 3 ಯುರೋಪ್, 2 ಅಮೆರಿಕ ಹಾಗೂ 1 ಬಲ್ಗೇರಿಯಾದಲ್ಲಿ ತಯಾರಾಗಿತ್ತು.
ಪೇಲೋಡ್‌ನಲ್ಲಿ ಏನಿದೆ?: ಮೂಲಗಳ ಪ್ರಕಾರ ಇಸ್ರೋ ಅಭಿವೃದ್ಧಿಪಡಿಸಿರುವ ಪೇಲೋಡ್ ಲೇಸರ್ ರಿಫ್ಲೆಕ್ಟರ್‌ಗಳನ್ನು ಹೊಂದಿರಲಿದ್ದು, ಇವು ಚಂದ್ರನಿಗೆ ಇರುವ ದೂರವನ್ನು ಅಳೆಯಲು ನೆರವಾಗಲಿವೆ. ಅಲ್ಲದೆ ಇದು, ಚಂದ್ರನ ಮೇಲ್ಮೆ„ ಮೇಲೆ ಲ್ಯಾಂಡರ್‌ನ ನಿಖರ ಸ್ಥಳವನ್ನು ಗುರುತಿಸಲೂ ಸಹಾಯ ಮಾಡಲಿದೆ.