ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಶುಕ್ರವಾರ ಮಧ್ಯಾಹ್ನದ ನಂತರ 13 ಹೊಸ ಪ್ರಕರಣಗಳು ದೃಢವಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 24 ಜನರಿಗೆ ಕೋವಿಡ್19 ಸೋಂಕು ದೃಢವಾಗಿದೆ.
ದಾವಣಗೆರೆ, ದಕ್ಷಿಣ ಕನ್ನಡ, ವಿಜಯಪುರ, ಹುಬ್ಬಳ್ಳಿ, ಕಲಬುರ್ಗಿ, ಚಿಕ್ಕಬಳ್ಳಾಪುರದಲ್ಲಿ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಒಟ್ಟು 589 ಸೋಂಕು ಪ್ರಕರಣಗಳು ದೃಢವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಸೋಂಕು ಪ್ರಕರಣಗಳು ದೃಢವಾಗಿದೆ. 69 ವರ್ಷದ ಬಂಟ್ವಾಳದ ವ್ಯಕ್ತಿ ಮತ್ತು ದಕ್ಷಿಣ ಕನ್ನಡದ 62 ವರ್ಷದ ವ್ಯಕ್ತಿಗೆ ಸೋಂಕು ತಾಗಿದೆ.
ದಾವಣಗೆರೆಯಲ್ಲಿ ಆರು ಜನರಿಗೆ ಸೋಂಕು ತಾಗಿದ್ದು, ಸೋಂಕಿತ ಸಂಖ್ಯೆ 556ರ ಸಂಪರ್ಕದಿಂದ ಐವರಿಗೆ ಮತ್ತು ಸೋಂಕಿತ ಸಂಖ್ಯೆ 533ರ ಸಂಪರ್ಕದಿಂದ 16 ವರ್ಷದ ಬಾಲಕನಿಗೆ ಸೋಂಕು ತಾಗಿದೆ.
ಸೋಂಕಿತ ಸಂಖ್ಯೆ 250 ಸಂಪರ್ಕದಿಂದ ಚಿಕ್ಕಬಳ್ಳಾಪುರದ 40 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಕಲಬುರಗಿಯಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದ್ದರೆ, ಹುಬ್ಬಳ್ಳಿಯ 57 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಇದರಲ್ಲಿ 251 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 22 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಮತ್ತು ಓರ್ವ ಸೋಂಕಿತ ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.