Advertisement

ರಾಜಸ್ಥಾನ : ಮದುವೆ ಮೆರವಣಿಗೆ ಮೇಲೆ ಲಾರಿ ಹರಿದು 13 ಸಾವು

04:23 AM Feb 19, 2019 | Karthik A |

ಜೈಪುರ: ಮದುವೆ ಸಂಭ್ರಮಕೂಟದ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಲಾರಿ ಹರಿದು 13 ಜನ ಸಾವಿಗೀಡಾಗಿ 18 ಜನ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರಲ್ಲಿ ನಾಲ್ಕು ಜನ ಮಕ್ಕಳೂ ಸೇರಿದ್ದಾರೆ. ಲಾರಿ ಚಾಲಕನಿಗೆ ಮೆರವಣಿಗೆ ಸಾಗಿ ಬರುತ್ತಿದ್ದುದು ಅರಿವಿಗೆ ಬರದಿದ್ದುದೇ ಈ ದುರ್ಘಟನೆಗೆ ಕಾರಣವೆನ್ನಲಾಗುತ್ತಿದೆ.

Advertisement

ಇಲ್ಲಿನ ರಾಜ್ಯ ಹೆದ್ದಾರಿ – 113ರಲ್ಲಿರುವ ರಾಮದೇವ್ ದೇವಸ್ಥಾನದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಮದುವೆ ಸಂಭ್ರಮಕೂಟದ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಮಾರ್ಗವಾಗಿ ವೇಗವಾಗಿ ಸಾಗಿಬಂದ ಲಾರಿಯೊಂದು ನೋಡನೋಡುತ್ತಿದ್ದಂತೆಯೇ ಸಂಭ್ರಮದಲ್ಲಿ ಮೆರವಣಿಗೆ ಸಾಗುತ್ತಿದ್ದವರ ಮೇಲೆ ಏರಿಬಂತು. ಬಳಿಕ ಕ್ಷಣಾರ್ಧದಲ್ಲಿ ಆ ಸ್ಥಳ ರಕ್ತದೋಕುಳಿಯ ಕಣವಾಗಿ ಮಾರ್ಪಾಡಾಯಿತು. ಎಲ್ಲೆಲ್ಲೂ ನರಳಾಟ, ಚೀರಾಟಗಳೇ ಕೇಳಿಬರಲಾರಂಭಿಸಿದವು. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಸಮೀಪದಲ್ಲಿದ್ದ ವಿವಿಧ ಅಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರದಲ್ಲಿರುವ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಯ ಕುರಿತಾದಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next