Advertisement

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

10:31 AM Apr 08, 2020 | Nagendra Trasi |

ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ ಮಾರಣಾಂತಿಕ ಕೋವಿಡ್ 19 ವೈರಸ್ ಗೆ 13 ಮಂದಿ ಸಾವನ್ನಪ್ಪಿದ್ದು, 508 ಹೊಸ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಕಳೆದ 24ಗಂಟೆಯಲ್ಲಿ ದೇಶದಲ್ಲಿ 508 ಹೊಸ ಪ್ರಕರಣಗಳು ದಾಖಲಾಗಿದೆ. ಇದರೊಂದಿಗೆ ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 4,789ಕ್ಕೆ ಏರಿದಂತಾಗಿದ್ದು, ಸಾವಿನ ಪ್ರಮಾಣ 124ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ತಿಳಿಸಿದೆ.

ಈಗಾಗಲೇ ಕೋವಿಡ್ 19 ಸೋಂಕಿಗೆ ಒಳಗಾದ 353 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಮಾರಣಾಂತಿಕ ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿರುವ ಜಗತ್ತಿನ ಬಡ ದೇಶಗಳಿಗೆ 15 ಬಿಲಿಯನ್ ಯುರೋಸ್ (16.4 ಬಿಲಿಯನ್ ಡಾಲರ್)ನಷ್ಟು ಹಣಕಾಸಿನ ನೆರವು ನೀಡುವುದಾಗಿ ಯುರೋಪಿಯನ್ ಒಕ್ಕೂಟ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next