Advertisement

ಹಾನಗಲ್ಲ ಉಪಚುನಾವಣೆ : ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

07:16 PM Oct 13, 2021 | Team Udayavani |

ಹಾವೇರಿ: ಹಾನಗಲ್ಲ ವಿಧನಾಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಬುಧವಾರ ನಾಲ್ವರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ.

Advertisement

ಬಿಜೆಪಿಯ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸಿ.ಆರ್.ಬಳ್ಳಾರಿ ನಾಮಪತ್ರ ಸಲ್ಲಿಸಿದ್ದರು. ಮಂಗಳವಾರ ದಾವಣಗೆರೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿ.ಆರ್.ಬಳ್ಳಾರಿ ಅವರನ್ನು ಕರೆಸಿಕೊಂಡು ಚರ್ಚಿಸಿ ನಾಮಪತ್ರ ಮರಳಿ ಪಡೆಯುವಂತೆ ಮನವೊಲಿಸಿದ್ದರು. ಈ ಹಿನ್ನೆಲೆ ಬಳ್ಳಾರಿ ಅವರು ಪಂಚಮಸಾಲಿ ಸಮಾಜದ ಮುಖಂಡರೊದಿಗೆ ಚರ್ಚಿಸಿ, ಸಿಎಂ ಬೊಮ್ಮಾಯಿ ಅವರ ಮಾತಿಗೆ ಮನ್ನಣೆ ನೀಡಿ ಬುಧವಾರ ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯ ಶಮನಗೊಂಡಂತಾಗಿದೆ. ಜೊತೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಶೋಕ ಪಾಂಡಪ್ಪ ಹಣಜಿ, ಜಾಕೀರ ಹುಸೇನ್ ಮೌಲಾಲಿ ಅರಳಿಮರದ ಹಾಗೂ ಸಿಕಂದರ ಮೋದಿನಖಾನ ಮತ್ತಿಹಳ್ಳಿ ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.

ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು :

ನಿಯಾಜ್ ಶೇಖ್ (ಜೆಡಿಎಸ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ನಜೀರ ಅಹ್ಮದ ಸವಣೂರ (ಪಕ್ಷೇತರ), ಪರಶುರಾಮ ಹೊಂಗಲ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್.ಎಸ್.ದೊಡ್ಡಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ(ಪಕ್ಷೇತರ) ಅವರು ಅಂತಿಮ ಕಣದಲ್ಲಿ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next