Advertisement

29ರಿಂದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

03:36 PM Jun 24, 2018 | |

ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ. 29, 30ರಂದು ನಗರದ ಕವಿಸಂನಲ್ಲಿ ನಡೆಯಲಿದೆ. 29ರಂದು ಬೆಳಗ್ಗೆ 8:30 ಗಂಟೆಗೆ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ರಾಷ್ಟ್ರ ಧ್ವಜಾರೋಹಣ, ಪರಿಷತ್‌ ಅಧ್ಯಕ್ಷ ಡಾ| ಲಿಂಗರಾಜ ಅಂಗಡಿ ಪರಿಷತ್‌ ಧ್ವಜಾರೋಹಣ, ಡಾ| ಸದಾಶಿವ ಮರ್ಜಿ ಕನ್ನಡ ಧ್ವಜಾರೋಹಣ ನೆರವೇರಿಸುವರು. 9:30 ಗಂಟೆಗೆ ಮೆರವಣಿಗೆ ನಡೆಯಲಿದ್ದು, ಜಿಪಂ ಸಿಇಒ ಸ್ನೇಹಲ್‌ ಆರ್‌. ಚಾಲನೆ ನೀಡುವರು. ಡಾ| ಎಂ.ಬಿ. ದಳಪತಿ, ನಿಂಗಣ್ಣ ಕುಂಟಿ ಹಾಗೂ ಎಸ್‌.ಬಿ. ಗಾಮನಗಟ್ಟಿ ಪಾಲ್ಗೊಳ್ಳುವರು.

Advertisement

10:30 ಗಂಟೆಗೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಆಶಯ ನುಡಿಗಳನ್ನಾಡುವರು. ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಪ್ರಹ್ಲಾದ ಜೋಶಿ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಪುಸ್ತಕ ಮಳಿಗೆ ಹಾಗೂ ಶಾಸಕ ಜಗದೀಶ ಶೆಟ್ಟರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ನಿಕಟಪೂರ್ವ ಅಧ್ಯಕ್ಷ ಡಾ| ವಿ.ಸಿ. ಐರಸಂಗ, ಸಮ್ಮೇಳನದ ಸರ್ವಾಧ್ಯಕ್ಷೆ ಪ್ರೊ| ಮಾಲತಿ ಪಟ್ಟಣಶೆಟ್ಟಿ ಮೊದಲಾದವರು ಪಾಲ್ಗೊಳ್ಳುವರು.

ಗೋಷ್ಠಿ ವೈವಿಧ್ಯ: 29ರಂದು ಮಧ್ಯಾಹ್ನ 12:30 ಗಂಟೆಗೆ ನಮ್ಮ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಮತ್ತು ಚರಿತ್ರೆ ದಾರಿ-ದಿಕ್ಕು-ದಿಗಂತ ಗೋಷ್ಠಿ ನಡೆಯಲಿದೆ.
ಡಾ|ಶ್ರೀನಿವಾಸ ಪಾಡಿಗಾರ, ಡಾ|ಶಿವಾನಂದ ಕೆಳಗಿನಮನಿ, ಡಾ|ಆರ್‌.ವಿ. ಪಾಟೀಲ, ಡಾ|ವೈ.ಎಂ. ಭಜಂತ್ರಿ ಪಾಲ್ಗೊಳ್ಳುವರು. ಡಾ| ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3 ಗಂಟೆಗೆ ಡಾ| ಕೆ.ಎಸ್‌. ಶರ್ಮಾ ಅಧ್ಯಕ್ಷತೆಯಲ್ಲಿ ನಡೆಯುವ ನಮ್ಮ ಜಿಲ್ಲೆಯ ಜನತೆಯ ತವಕ-ತಲ್ಲಣಗಳು ಗೋಷ್ಠಿಯಲ್ಲಿ ಡಾ| ಸಿದ್ದನಗೌಡ ಪಾಟೀಲ, ಶಾಸಕ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಸೊಪ್ಪಿನ, ಡಾ| ಬಿ.ಜಿ. ಬಿರಾದಾರ ಭಾಗವಹಿಸುವರು.

ಸಂಜೆ 4:30 ಗಂಟೆಗೆ ಕನ್ನಡ ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಭಾಷೆಯ ಅಸ್ಮಿತೆ ಗೋಷ್ಠಿ ನಡೆಯಲಿದ್ದು, ಪ್ರೊ| ಜಿ.ಎಚ್‌. ಹನ್ನೆರಡುಮಠ, ಡಾ|ಸಿ. ರಾಮಸ್ವಾಮಿ, ಡಾ|ಧನವಂತ ಹಾಜವಗೋಳ, ಡಾ|ಶ್ರೀಶೈಲ ಹುದ್ದಾರ ಭಾಗವಹಿಸುವರು. ಡಾ|ಎಚ್‌.ಎಂ. ಮಹೇಶ್ವರಯ್ಯ ಅಧ್ಯಕ್ಷತೆ ವಹಿಸುವರು. ಸಂಜೆ 6:30 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಾ|ಶಂಭು ಬಳಿಗಾರ ಚಾಲನೆ ನೀಡುವರು. ಎಸ್‌.ಕೆ. ರಂಗಣ್ಣವರ, ಗಣೇಶ ಅಮೀನಗಡ, ಕೃಷ್ಣ ಜೋಶಿ, ರಾಜಶೇಖರ ಬೆಳ್ಳಕ್ಕಿ ಆಗಮಿಸುವರು. 

ಗೀತ ಗಾಯನ ವೈಭವ: 30ರಂದು ಬೆಳಗ್ಗೆ 9:30 ಗಂಟೆಗೆ ಡಾ|ಜ್ಯೋತಿಲಕ್ಷ್ಮೀ ಡಿ.ಪಿ. ಅವರಿಂದ ಪ್ರೊ| ಮಾಲತಿ ಪಟ್ಟಣಶೆಟ್ಟಿ ಅವರ ಕವನಗಳ ಗೀತ ಗಾಯನ ನಡೆಯಲಿದೆ. 10 ಗಂಟೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತರ ಕರ್ನಾಟಕ ಲೇಖಕಿಯರ ಕೊಡುಗೆ ಗೋಷ್ಠಿ ನಡೆಯಲಿದ್ದು, ಡಾ| ಮೀನಾಕ್ಷಿ ಬಾಳಿ, ಡಾ|ವಿನಯಾ ವಕ್ಕುಂದ, ಡಾ| ವೀಣಾ ಸಂಕನಗೌಡರ, ಡಾ| ಪುಷ್ಪಲತಾ ಶಲವಡಿಮಠ ಪಾಲ್ಗೊಳ್ಳುವರು. ಡಾ|ಶಾಂತಾ ಇಮ್ರಾಪುರ ಅಧ್ಯಕ್ಷತೆ ವಹಿಸುವರು.

Advertisement

11 ಗಂಟೆಗೆ ಜರುಗುವ ಇಂದಿನ ಯುವ ಬರಹಗಾರರ ಒಳಗುದಿಗಳು ಗೋಷ್ಠಿಯಲ್ಲಿ ಡಾ|ತಾರಿಣಿ ಶುಭದಾಯಿನಿ, ಡಾ|ವೆಂಕಟಗಿರಿ ದಳವಾಯಿ, ಮಲ್ಲಿಕಾರ್ಜುನ ಗುಮ್ಮಗೋಳ, ಚನ್ನಪ್ಪ ಅಂಗಡಿ ಭಾಗವಹಿಸುವರು. ಡಾ|ಸರಜೂ ಕಾಟಕರ್‌ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 1 ಗಂಟೆಗೆ ನಡೆಯುವ ಮಹಿಳೆಯ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳು ಕುರಿತ ಗೋಷ್ಠಿಯಲ್ಲಿ ಡಾ|ಆನಂದ ಪಾಂಡುರಂಗಿ, ಪ್ರಫ‌ುಲ್ಲಾ ನಾಯಕ, ರಜನಿ ಗರುಡ, ಅರುಣಾ ಶಿರಗುಪ್ಪಿ ಭಾಗವಹಿಸುವರು. ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ ಅಧ್ಯಕ್ಷತೆ ವಹಿಸುವರು. 

ಸಮಾರೋಪ: ಮಧ್ಯಾಹ್ನ 3 ಗಂಟೆಗೆ ಸರ್ವಾಧ್ಯಕ್ಷರೊಂದಿಗೆ ಸಂವಾದ, 4 ಗಂಟೆಗೆ ಕವಿಗೋಷ್ಠಿ, 5:30 ಗಂಟೆಗೆ ಬಹಿರಂಗ ಅಧಿವೇಶನ, ನಿರ್ಣಯಗಳ ಮಂಡನೆ ನಡೆಯಲಿದೆ. 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರೊ|ಚಂದ್ರಶೇಖರ ಪಾಟೀಲ ಸಮಾರೋಪ ಭಾಷಣ ಮಾಡುವರು. ಮಾಜಿ ಸಚಿವ ವಿನಯ ಕುಲಕರ್ಣಿ, ಕೃವಿವಿ ಕುಲಪತಿ ಡಾ|ವಿ.ಐ. ಬೆಣಗಿ, ಡಾ| ಗಣನಾಥ ಶೆಟ್ಟಿ, ಪ್ರಕಾಶ ಉಡಕೇರಿ ಆಗಮಿಸುವರು. ಡಾ|ಪಂಚಾಕ್ಷರಿ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷೆ ಪ್ರೊ|ಮಾಲತಿ ಪಟ್ಟಣಶೆಟ್ಟಿ ಮೊದಲಾದವರು ಉಪಸ್ಥಿತರಿರುವರು. ಸಂಜೆ 7 ಗಂಟೆಗೆ
ಇಮಾಮಸಾಬ್‌ ವಲ್ಲೆಪ್ಪನವರ ತಂಡದಿಂದ ಭಾವೈಕ್ಯತೆ ಗೀತೆ, ಪ್ರಭು ಕುಂದರಗಿ ಸಂಗಡಿಗರಿಂದ ಸುಗಮ ಸಂಗೀತ ಹಾಗೂ ಸ್ನೇಹ ರಂಗ ಕಾಲ ಬಳಗದ ಸದಸ್ಯರು ಜಾಗೃತ ಗೀತೆಗಳನ್ನು ಪ್ರಸ್ತುಪಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next